Dharwad News: ಪ್ರಧಾನಿ ಮೋದಿ ತಾಯಿ ನಿಧನ ಸುದ್ದಿ ಪೋಸ್ಟ್ಗೆ ಕೆಟ್ಟದಾಗಿ ಕಾಮೆಂಟ್: ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ಫೋಟೋಗ್ರಾಫರ್
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ ನಿಧನದ ಸುದ್ದಿಯ ಕುರಿತು ಅವಮಾನಕರ ಕಾಮೆಂಟ್ ಮಾಡಿದ ವ್ಯಕ್ತಿಯ ವಿರುದ್ಧ ದೂರು ದಾಖಲು.
ಧಾರವಾಡ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ತಾಯಿ ಹೀರಾಬೆನ್ ಮೋದಿ (Hiraben Modi) ನಿನ್ನೆ (ಡಿ.30) ರಂದು ನಸುಕಿನಜಾವ ನಿಧನರಾದರು. ಈ ನಿಧನದ ಸುದ್ದಿಯ ಕುರಿತು ಪೋಸ್ಟ್ ಹಾಕಿದ್ದಕ್ಕೆ, ಅವಮಾನಕರ ಕಾಮೆಂಟ್ ಮಾಡಿದ ವ್ಯಕ್ತಿಯ ವಿರುದ್ಧ ಬಿಜೆಪಿ (BJP) ಕಾರ್ಯಕರ್ತರು ಧಾರವಾಡದ (Dharwad) ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರೆಹಮತ್ ಬೆಟಗೇರಿ ಅವಮಾನಕರ ಕಾಮೆಂಟ್ ಮಾಡಿದ್ದ ಫೋಟೋಗ್ರಾಫರ್. ಧಾರವಾಡ ಜಿಲ್ಲಾ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘದ (ಡಿಪಿವಿಎಸ್) ವಾಟ್ಸಪ್ ಗ್ರುಪ್ನಲ್ಲಿ ಮೋದಿ ತಾಯಿ ನಿಧನದ ಸುದ್ದಿ ಕುರಿತು ಪೋಸ್ಟ್ ಹಾಕಲಾಗಿತ್ತು.
ಈ ಪೋಸ್ಟ್ಗೆ ರೆಹಮತ್ ಬೆಟಗೇರಿ ಅವಮಾನಕರ ಕಾಮೆಂಟ್ ಮಾಡಿದ್ದನು. ಈ ಹಿನ್ನೆಲೆ ರೆಹಮತ್ ವಿರುದ್ಧ ದೂರು ದಾಖಲಾಗಿದೆ. ಈ ಹಿನ್ನೆಲೆ ಪೊಲೀಸರು ರೆಹಮತ್ನನ್ನು ಠಾಣೆಗೆ ಕರೆತಂದಿದ್ದಾರೆ. ನಂತರ ರೆಹಮತ್ ಪೊಲೀಸರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾನೆ. ಇನ್ನೂ ಡಿಪಿವಿಎಸ್ ಅಧ್ಯಕ್ಷ ರೆಹಮತ್ನನ್ನು ಸಂಘದಿಂದ ಒಂದು ವರ್ಷ ಅಮಾನತು ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:16 pm, Sat, 31 December 22