Sign In

By signing in or creating an account, you agree with Associated Broadcasting Company's Terms & Conditions and Privacy Policy.

Diwali 2022: ಧಾರವಾಡದಲ್ಲಿ ಮೊಬೈಲ್ ಉತ್ಸವ, ಆಧುನಿಕ ಜಗತ್ತಿನಲ್ಲಿ ಮೊಬೈಲ್ ಕ್ರಾಂತಿಕಾರಕ ಸಾಧನ ಎಂದ ಮೇಯರ್ ಈರೇಶ ಅಂಚಟಗೇರಿ

ದೀಪಾವಳಿ ಹಬ್ಬ ಹಿನ್ನೆಲೆ ಧಾರವಾಡದ ಟಿಕಾರೆ ರಸ್ತೆಯಲ್ಲಿ ಮೊಬೈಲ್ ಉತ್ಸವ ಆಯೋಜಿಸಲಾಗಿದೆ. ಅ. 17 ರಿಂದ ಅ. 26 ವರೆಗೆ ಉತ್ಸವ ನಡೆಯುತ್ತೆ. ಕಾರ್ಯಕ್ರಮಕ್ಕೆ ಹು-ಧಾ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ಚಾಲನೆ ನೀಡಿದ್ದಾರೆ.

Diwali 2022: ಧಾರವಾಡದಲ್ಲಿ ಮೊಬೈಲ್ ಉತ್ಸವ, ಆಧುನಿಕ ಜಗತ್ತಿನಲ್ಲಿ ಮೊಬೈಲ್ ಕ್ರಾಂತಿಕಾರಕ ಸಾಧನ ಎಂದ ಮೇಯರ್ ಈರೇಶ ಅಂಚಟಗೇರಿ
ಧಾರವಾಡದಲ್ಲಿ ಮೊಬೈಲ್ ಉತ್ಸವ
Follow us
TV9 Web
| Updated By: ಆಯೇಷಾ ಬಾನು

Updated on: Oct 17, 2022 | 4:01 PM

ಧಾರವಾಡ: ಆಧುನಿಕ ಜಗತ್ತಿನಲ್ಲಿ ಮೊಬೈಲ್ ಸಾಧನ ಕ್ರಾಂತಿಕಾರಕ ಬದಲಾಣೆಗೆ ನಾಂದಿ ಹಾಡಿದೆ. ಯುವಕರು ಇದರ ಸದುಪಯೋಗ ಪಡೆದುಕೊಂಡು ಒಳ್ಳೆಯ ನಾಗರಿಕರಾಗಬೇಕೆಂದು ಹು-ಧಾ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ಅಭಿಪ್ರಾಯಪಟ್ಟರು. ಅವರು ಧಾರವಾಡ ಮೊಬೈಲ್‌ ವಿತರಕರ ಸಂಘದವರು ಇಂದಿನಿಂದ 10 ದಿನಗಳ ಕಾಲ ಆಯೋಜಿಸಲಾದ ಧಾರವಾಡ ಮೊಬೈಲ್ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ದೀಪಾವಳಿ ಹಬ್ಬ ಹಿನ್ನೆಲೆ ಧಾರವಾಡದ ಟಿಕಾರೆ ರಸ್ತೆಯಲ್ಲಿ ಮೊಬೈಲ್ ಉತ್ಸವ ಆಯೋಜಿಸಲಾಗಿದೆ. ಸ್ಥಳೀಯ ಮೊಬೈಲ್ ಮಾರಾಟಗಾರರ ಸಂಘದಿಂದ ಅ. 17 ರಿಂದ ಅ. 26 ವರೆಗೆ ಉತ್ಸವ ಆಯೋಜಿಸಲಾಗಿದೆ. ಉತ್ಸವಕ್ಕೆ ವಿವಿಧ ಮೊಬೈಲ್ ಕಂಪನಿಗಳು ಸಾಥ್ ನೀಡಿವೆ. ಉತ್ಸವಕ್ಕೆ ಹು-ಧಾ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಚಾಲನೆ ನೀಡಿದ್ದಾರೆ. ಇನ್ನು ಸಂಘದ ಅಧ್ಯಕ್ಷ ಸುದೀಪ್ ಸಾಂಗ್ಲಿಕರ್ ಮಾತನಾಡಿ, ಗ್ರಾಹಕರೊಂದಿಗೆ ನೇರ ಸಂವಾದವನ್ನು ಹೊಂದುವುದು, ಉತ್ಪನ್ನಗಳ ಅನುಭವವನ್ನು ಮತ್ತು ಮಾರಾಟದ ನಂತರದ ಸೇವೆಗಳನ್ನು ಒಳಗೊಂಡಿರುವ ಮೊಬೈಲ್‌ಗಳ ಆನ್‌ಲೈನ್‌ ಮತ್ತು ಆಫ್‌ಲೈನ್ ಖರೀದಿಯ ನಡುವಿನ ವ್ಯತ್ಯಾಸವನ್ನು ಸಹ ನಾವು ತಿಳಿಸಲು ಹಾಗೂ ದೇಶಿಯ ಮೊಬೈಲನ್ನು ಖರೀದಿಸಲು ಉತ್ತೇಜನ ನೀಡುವ ಉದ್ದೇಶದಿಂದ ಈ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ದಾವಣಗೆರೆ ಬೆಣ್ಣೆ ದೋಸೆ ಸವಿದ ನಟಿ ರಮ್ಯಾ; ಲೋಕಲ್ ಹೋಟೆಲ್​ನಲ್ಲಿ ಸ್ಯಾಂಡಲ್​ವುಡ್ ಕ್ವೀನ್

ವಿವಿಧ ಬ್ರಾಂಡ್ ಕಂಪನಿಗಳ ಸಹಯೋಗದೊಂದಿಗೆ ಈ ಉತ್ಸವವನ್ನು ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಶಂಭು ಸಾಲಿಮನಿ, ಮೋಹನ್ ಹೂಗಾರ, ಪ್ರವೀಣ ಕಠಾರೆ, ಸುರೇಶ ಬಾಂಢಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇನ್ನು ಉತ್ಸವದ ಅಂಗವಾಗಿ ಟಿಕಾರೆ ರಸ್ತೆಯನ್ನು ಶೃಂಗಾರಗೊಳಿಸಲಾಗಿದೆ. ಬಗೆ ಬಗೆಯ ವಸ್ತುಗಳೊಂದಿಗೆ ಇಡೀ ರಸ್ತೆ ಅಂದ ಕಾಣುವ ಹಾಗೆ ಮಾಡಲಾಗಿದ್ದು, ಇದು ಜನರನ್ನು ಆಕರ್ಷಿಸುತ್ತಿದೆ. ಇದೇ ವೇಳೆ ಹಳೆಯ ಮೊಬೈಲ್ ಗಳನ್ನು ಎಕ್ಸೇಂಜ್ ಮಾಡಿ, ಹೊಸ ಮೊಬೈಲ್ ಖರೀದಿಸಲು ಕೂಡ ಅವಕಾಶವಿದೆ. ಈ ಅವಕಾಶವನ್ನು ಗ್ರಾಹಕರು ಉಪಯೋಗಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿಕೊಂಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು