ರಾಜ್ಯ ಸರ್ಕಾರದ ಬೊಕ್ಕಸಕ್ಕೆ ದೊಡ್ಡದಾದ ಆದಾಯ ತಂದು ಕೊಡುವಂತಹ ಅಬಕಾರಿ ಇಲಾಖೆಯ ಸಿಬ್ಬಂದಿಗಳಿಗಿಲ್ಲ ವೇತನ ಭಾಗ್ಯ

ಸರಕಾರಕ್ಕೆ ದೊಡ್ಡ ಮಟ್ಟದ ಆದಾಯ ತಂದುಕೊಡುವ ಇಲಾಖೆಯಾದ ಅಬಕಾರಿ ಇಲಾಖೆಯ ಸಿಬ್ಬಂದಿಗಳೇ ಇವತ್ತು ಹಣಕ್ಕಾಗಿ ಕಣ್ಣೀರುಡುತ್ತಿದ್ದಾರೆ. ಸರಿಯಾದ ಸಮಯಕ್ಕೆ ವೇತನ ನೀಡುವಂತೆ ಅಬಕಾರಿ ಇಲಾಖೆಯ ಸಿಬ್ಬಂದಿಗಳು ಸರ್ಕಾರದ ಬಳಿ ಅಂಗಲಾಚುತ್ತಿದ್ದಾರೆ.

ರಾಜ್ಯ ಸರ್ಕಾರದ ಬೊಕ್ಕಸಕ್ಕೆ ದೊಡ್ಡದಾದ ಆದಾಯ ತಂದು ಕೊಡುವಂತಹ ಅಬಕಾರಿ ಇಲಾಖೆಯ ಸಿಬ್ಬಂದಿಗಳಿಗಿಲ್ಲ ವೇತನ ಭಾಗ್ಯ
ಅಬಕಾರಿ ಇಲಾಖೆ ಹುಬ್ಬಳ್ಳಿ-ಧಾರವಾಡ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 18, 2022 | 2:11 PM

ಹುಬ್ಬಳ್ಳಿ: ರಾಜ್ಯಕ್ಕೆ ಬಹುದೊಡ್ಡ ಆದಾಯ ನೀಡುವ ಅಬಕಾರಿ ಇಲಾಖೆ(Excise Department)ಯ ಸಿಬ್ಬಂದಿಗಳು ತಮ್ಮ ತಿಂಗಳ ಸಂಬಳಕ್ಕಾಗಿ ಅಂಗಲಾಚುವಂತಹ ಸ್ಥಿತಿ ನಿರ್ಮಾಣವಾಗಿದೆ. ಏಳು ತಿಂಗಳಾದರೂ ಅಬಕಾರಿ ಇಲಾಖೆಯ ಸಿಬ್ಬಂದಿಗಳಿಗೆ ಇನ್ನೂ ವೇತನ ಬಂದಿಲ್ಲ. ವೇತನವಿಲ್ಲದೆ ಜೀವನ ನಡೆಸಲು ಪರದಾಡುವಂತಾಗಿದೆ. ಕುಟುಂಬದ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಇಎಮ್‌ಐ ಸಹ ತುಂಬಲು ಸಿಬ್ಬಂದಿಗಳ ಬಳಿ ಹಣವಿಲ್ಲದಂತಾಗಿದೆ. ತಿಂಗಳ ವೇತನಕ್ಕಾಗಿ ಅಲೆದಾಡುತ್ತಿದ್ದಾರೆ. ಡಿಡಿಓ ಕೋಡ್ ಇಲ್ಲದ ಕಾರಣಕ್ಕಾಗಿ ವೇತನ ನೀಡುತ್ತಿಲ್ಲ ಸರ್ಕಾರ ತಾಂತ್ರಿಕ ದೋಷದಿಂದ ಏಳು ತಿಂಗಳುಗಳಿಂದ ಅವರಿಗೆ ಸಂಬಳ ಬಂದಿಲ್ಲ.

ಹುಬ್ಬಳ್ಳಿಧಾರವಾಡದಲ್ಲಿ ಈ ಮೊದಲು ಅಬಕಾರಿ ಇಲಾಖೆಯ ಒಂದು ವಲಯ ಕಚೇರಿ ಮತ್ತು ಎರಡು ಉಪ ವಿಭಾಗ ಕಚೇರಿಗಳಿದ್ದವು. ಈಗ ನಗರ ಬೆಳೆದಂತೆ ವಲಯ ಕಚೇರಿಗಳನ್ನ ವಿಸ್ತರಣೆ ಮಾಡಲಾಗಿದೆ. ಅಂದರೆ ಒಂದು ಉಪವಿಭಾಗ, ನಾಲ್ಕು ವಲಯ ಕಚೇರಿಗಳನ್ನಾಗಿ ವಿಂಗಡಿಸಿ ಅಬಕಾರಿ ಇಲಾಖೆಯನ್ನು ಮರುವಿನ್ಯಾಸಗೊಳಿಸಲಾಗಿದೆ. ನಂತರ ಪ್ರತಿಯೊಂದು ವಲಯ ಕಚೇರಿಗೆ ಮತ್ತು ಉಪವಿಭಾಗಕ್ಕೆ ಡಿಡಿಓ ಸಂಖ್ಯೆಯನ್ನ ಅಬಕಾರಿ ಇಲಾಖೆ ನೀಡಬೇಕಾಗಿತ್ತು. ಡಿಡಿಓ ಕೋಡ್ ಆಧಾರದ ಮೇಲೆ ಇಲಾಖೆಯ ಸಿಬ್ಬಂದಿಗಳಿಗೆ ವೇತನ ನೀಡಲಾಗುತ್ತದೆ. ಆದರೆ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಡಿಡಿಓ ಕೋಡ್ ಸಂಖ್ಯೆ ಸೀಗುತ್ತಿಲ್ಲ. ಇದೇ ಕಾರಣಕ್ಕಾಗಿ ಇಲ್ಲಿರುವ 60 ಸಿಬ್ಬಂದಿಗಳಿಗೆ ವೇತನ ಆಗುತ್ತಿಲ್ಲ.

ಇನ್ನೂ ಒಂದು ವಲಯ ಕಚೇರಿಯಲ್ಲಿ ಅಬಕಾರಿ ನಿರೀಕ್ಷಕರು, ಅಬಕಾರಿ ಉಪ ನಿರೀಕ್ಷಕರು, ದ್ವೀತಿಯ ದರ್ಜೆ ಸಹಾಯಕರು, ಅಬಕಾರಿ ಹಿರಿಯ ಪೇದೆ, ಅಬಕಾರಿ ಪೇದೆಗಳು, ಅಬಕಾರಿ ವಾಹನ ಚಾಲಕ ಸೇರಿದಂತೆ ಒಟ್ಟು 13 ಸಿಬ್ಬಂದಿಗಳು ಕೆಲಸ ಮಾಡುತ್ತಾರೆ. ನಾಲ್ಕು ವಲಯ ಕಚೇರಿಗಳು ಸೇರಿ 53 ಸಿಬ್ಬಂದಿಗಳು ಕೆಲಸ‌ ನಿರ್ವಹಿಸುತ್ತಾರೆ. ಮತ್ತು ಉಪ ವಿಭಾಗ ಕಚೇರಿಯಲ್ಲಿ ಎಂಟು ಜನ ಸಿಬ್ಬಂದಿಗಳು ಕೆಲಸ ಮಾಡುತ್ತಾರೆ. ಒಟ್ಟು 60 ಜನ ಸಿಬ್ಬಂದಿಗಳು ವೇತನವಿಲ್ಲದೆ ಹುಬ್ಬಳ್ಳಿಧಾರವಾಡದ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡಬೇಕಾಗಿದೆ.

ಕೆಲಸ ಮಾಡುವ ಸಿಬ್ಬಂದಿಗಳು ವೇತನದ ಬಗ್ಗೆ ಹಿರಿಯ ಅಧಿಕಾರಗಳನ್ನು ಕೇಳಿದರೆ ಯಾರೊಬ್ಬರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ವಿಷಯವನ್ನ ಸಿಬ್ಬಂದಿಗಳು ಎಲ್ಲಿಯೂ ಬಾಯಿ ಬಿಡುವಂತಿಲ್ಲ. ಒಂದು ವೇಳೆ ವೇತನ ನೀಡದ ವಿಷಯವನ್ನ ಹೊರಗಡೆ ಹೇಳಿದರೆ ಅವರನ್ನು ಕೆಲಸದಿಂದ ತಗೆದುಹಾಕುವ ಶಿಕ್ಷೆಯಿದೆ ಎನ್ನುತ್ತಿದ್ದಾರೆ. ಹೀಗಾಗಿ ಯಾವ ಸಿಬ್ಬಂದಿಯು ಕೂಡ ತನ್ನ ಕಷ್ಟವನ್ನ ಹೇಳಿಕೊಂಡಿಲ್ಲ. ಇನ್ನಾದರು ಅಬಕಾರಿ ಇಲಾಖೆಯ ಸಚಿವರು ತಾಂತ್ರಿಕ ದೋಷವನ್ನ ಸರಿಪಡಿಸುವಂತೆ ಸೂಚಿಸಿ, ಹಗಲಿರುಳು ದುಡಿಯುವ ಅಬಕಾರಿ ಇಲಾಖೆಯ ಸಿಬ್ಬಂದಿಗಳಿಗೆ ವೇತನ ನೀಡಬೇಕಾಗಿದೆ.

ವರದಿ: ರಹಮತ್ ಕಂಚಗಾರ್ ಟಿವಿ9 ಹುಬ್ಬಳ್ಳಿ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು