ಗಲಭೆಗೆ ಪ್ರಚೋದನೆ ನೀಡಿದ ನಾಲ್ವರ ವಿರುದ್ದ ಎಫ್ಐಆರ್ ದಾಖಲು; ಇದು ಟಿವಿ 9 ಬಿಗ್ ಇಂಫ್ಯಾಂಕ್ಟ್
ಗಲಭೆಯ ಮತ್ತೊಬ್ಬ ಮಾಸ್ಟರ್ ಮೈಂಡ್ ವಿಡಯೋ ಲೀಕ್ ಆಗಿದ್ದು, ಗಲಭೆಗೂ ಮುನ್ನ ಪ್ರತಿಭಟನೆಯಲ್ಲಿ ಮೊಬಲಕ್ ವಸಿಂ ಪಠಾಣ್, ಮೊಹಮ್ಮದ್ ಆರಿಫ್ ನೇರವಾಗಿ ಇಬ್ಬರು ಭಾಗಿಯಾಗಿದ್ದರು.
ಹುಬ್ಬಳ್ಳಿ: ಗಲಭೆಗೆ ಪ್ರಚೋದನೆ ನೀಡಿದ ಹಿನ್ನಲೆ ಕೈ ಅಧ್ಯಕ್ಷ ಅಲ್ತಾಫ್ ಹಳ್ಳೂರ, ವಮೌಲ್ವಿ ವಸೀಂ ಪಠಾಣ್, ಕೈ ಕಾರ್ಪೋರೇಟರ್ ಆರೀಫ್ ಬದ್ರಾಪುರ ಸೇರಿದಂತೆ ನಾಲ್ವರ ವಿರುದ್ದ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಐಪಿಸಿ ಸೆ.141, 143, 307 ಅಡಿಯಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಗಲಭೆಗೆ ಕುಮ್ಮಕ್ಕು ನೀಡಿದ ವಿಡಿಯೋ ಸಮೇತ ಟಿರ್ವಿ ವರದಿ ಮಾಡಿತ್ತು. ವರದಿ ಮಾಡಿದ ಬೆನ್ನಲ್ಲೇ ಸ್ವಯಂ ಪ್ರೇರಿತವಾಗಿ ಹಳೇ ಹುಬ್ಬಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಇದು ಟಿರ್ವಿ ಬಿಗ್ ಇಂಫ್ಯಾಂಕ್ಟ್ ಆಗಿದೆ. ಕೈ ನಾಯಕನುಗೆ ಕಂಟಕ ಶುರುವಾಗಿದ್ದು, ಗಲಭೆ ಶಮನ ಮಾಡಲು ಹೋಗಿದ್ದೆ ಎಂದು ಅಲ್ತಾಫ್ ಹೇಳಿದ್ದಾನೆ. ಆದ್ರೆ ಅದೇ ಅಲ್ತಾಫ್ ವಿರುದ್ದ ಶಾಂತಿ ಕದಡಿ, ಪ್ರಚೋದನೆ ಮಾಡಿದ ಹಿನ್ನಲೆ ದೂರು ದಾಖಲು ಮಾಡಲಾಗಿದೆ. ಗಲಭೆಯ ಮತ್ತೊಬ್ಬ ಮಾಸ್ಟರ್ ಮೈಂಡ್ ವಿಡಯೋ ಲೀಕ್ ಆಗಿದ್ದು, ಗಲಭೆಗೂ ಮುನ್ನ ಪ್ರತಿಭಟನೆಯಲ್ಲಿ ಮೊಬಲಕ್ ವಸಿಂ ಪಠಾಣ್, ಮೊಹಮ್ಮದ್ ಆರಿಫ್ ನೇರವಾಗಿ ಇಬ್ಬರು ಭಾಗಿಯಾಗಿದ್ದರು. ಆ ಇಬ್ಬರಿಂದಲೇ ಇಡೀ ಪ್ರತಿಭಟನೆ ಗಲಭೆಗೆ ತಿರುವು ಪಡೆದುಕೊಂಡಿದೆ. ಶಾಂತಿಯುತವಾಗಿದ್ದ ಪ್ರತಿಭಟನೆಗೆ ಇವರಿಬ್ಬರೂ ಪ್ರಚೋದನೆ ನೀಡಿದ್ರಾ ಎನ್ನುವ ಪ್ರಶ್ನೆ ಉಂಟಾಗಿದೆ.
ಗಲಭೆಯ ಮಾಸ್ಟರ್ ಮೈಂಡ್ಸ್ ಆದ ಖಾಸಿಂ ಮತ್ತು ಮೊಹಮ್ಮದ್ ಆರೀಫ್ ಯುವಕರ ಗುಂಪನ್ನ ಪ್ರಚೋದಿತ ಹೇಳಿಕೆಗಳನ್ನ ನೀಡಿ ಯುವಕರನ್ನ ರೊಚ್ಚಿಗೆಬ್ಬಿಸಿದ್ರಾ ಎನ್ನುವ ಶಂಕೆ ವ್ಯಕ್ತವಾಗಿದೆ. ಹೆಚ್ಚು ಯುವಕರು ಸೇರುತ್ತಿದ್ದಂತೆಯೇ ಪ್ರಚೋದನಾಕಾರಿ ಘೋಷಣೆ ಕೂಗಿದ್ದ ಖಾಸಿಂ ಮತ್ತು ಮೊಹ್ಮದ ಆರೀಫ್, ಇವರಿಂದಲೇ ಶಾಂತಿ ಕದಡಿತಾ ಅನ್ನೋ ಶಂಕೆಯಲ್ಲಿ ಪೊಲೀಸರಿದ್ದಾರೆ. ತನಿಖೆ ಆರಂಭವಾಗುತ್ತಿದ್ದಂತೆನೇ ಇಬ್ಬರೂ ಗಾಯಬ್ ಆಗಿದ್ದು, ಮಾಸ್ಟರ್ ಮೈಂಡ್ಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಯಡಿಯೂರಪ್ಪ ನನ್ನ ಮೇಲೆ ಆರೋಪ ಮಾಡೋಕ್ಕಿಂತ ಮುಂಚೆ ಪೊಲೀಸರಿಂದ ಮಾಹಿತಿ ಪಡೆಯಬೇಕಿತ್ತು. ಸುಮ್ಮನೆ ನನ್ನ ಮೇಲೆ ಆರೋಪ ಮಾಡೋದು ಅವರಿಗೆ ಶೋಭೆ ತರುವದಿಲ್ಲ ಎಂದು ಟಿರ್ವಿಗೆ ಹುಬ್ಬಳ್ಳಿ-ಧಾರವಾಡ ನಗರ ಕೈ ಅಧ್ಯಕ್ಷ ಅಲ್ತಾಫ್ ಹಳ್ಳೂರ ಹೇಳಿಕೆ ನೀಡಿದ್ದಾರೆ. ನಾನು ತಪ್ಪು ಮಾಡಿದ್ರೆ ಪೊಲೀಸರು ಕ್ರಮ ಕೈಗೊಳ್ಳಲಿ. ಪೊಲೀಸರ ಅನುಮತಿ ಪಡೆದ ಜೀಪ್ ಹತ್ತಿದ್ದೇನೆ. ಅದು ಪರಸ್ಥಿತಿ ನಿಯಂತ್ರಣ ತರಲು ಪ್ರಯತ್ನ ಪಟ್ಟಿದ್ದೇನೆ. ಅದು ಪೊಲೀಸರಿಗೆ ಗೊತ್ತು. ಬೇಕಾದ್ರೆ ಪೊಲೀಸದ ಕಮೀಷನರ್ರನ್ನ ಕೇಳಿ. ಹಿಂದೆ ಬೆಂಗಳೂರಿನಲ್ಲಿ ಗಲಭೆಯಾದಾಗ ಬಿಎಸ್ವೈ ಸಾಮರಸ್ಯದ ಮಾತಾಡಿದ್ದರು. ಇವಾಗ ಹೀಗೇ ಮಾಹಿತಿ ಪಡೆಯದೇ ಆರೋಪ ಮಾಡೋದು ತಪ್ಪು. ಯಡಿಯೂರಪ್ಪ ವಯಸ್ಸದಾವರು. ಅವರಿಗೆ ಬಿಜೆಪಿ ಅಲ್ಲದೇ ಎಲ್ಲರೂ ಗೌರವ ನೀಡುತ್ತಾರೆ. ಅಂತವರು ಪೊಲೀಸರನ್ನ ಯಾಕೆ ಕೇಳಲಿಲ್ಲ. ರಾಮನವಮಿ ಸಂಧರ್ಬದಲ್ಕೂ ನಮ್ಮ ಮಸೀದಿ ಮೇಲೆ ಜೈ ಶ್ರೀರಾಮ ಅಂತ ಡಿಜಿಟಲ್ ಲೈಟ್ ಹಾಕಿದ್ರು. ಅವಾಗ ನಮ್ಮ ಸಮೂದಾಯವನ್ನ ನಾನೇ ಸುಮ್ಮನಿರಿಸಿದ್ದೆ. ಮೆರವಣಿಗೆ ಮಾಡಿ ಹೋಗ್ತಾರೆ ಎಂದು ಶಾಂತಿ ಕಾಪಡಿದ್ದಿನಿ ಎಂದರು.
ಬಿಎಸ್ವೈ ಅರೋಪ ನನ್ನ ಮನಸ್ಸಿಗೆ ಬೇಜಾರ ಆಗಿದೆ. ಪೊಲೀಸರು ಬಹುದೊಡ್ಡ ಅನಾಹುತ ತಡೆದಿದ್ದಾರೆ. ಕೆಲವರು ಹಿಂದೂ-ಮುಸ್ಲಿಂ ಮಧ್ಯ ಗಲಭೆ ತರೋಕೆ ಪ್ರಯತ್ನಿಸಿದ್ರು. ಅದು ಆಗಿಲ್ಲ ಹಿಂದೂ-ಮುಸ್ಲಿಂ ಭಾಂದವರಿಗೆ ಧನ್ಯವಾದ ಹೇಳುತ್ತೇನೆ. ಹೀಗೆ ಹುಬ್ಬಳ್ಳಿ-ಧಾರವಾಡದಲ್ಲಿ ಶಾಂತಿಯಿಂದ ಇರೋಣ. ಈ ರೀತಿ ಗಲಭೆ ಮಾಡಿದ್ರೆ ನಂಗೆ ಎಂಎಲ್ ಸಿ ಸೀಟ್ ಸಿಗುತ್ತಾ..? ಬಿಜೆಪಿಗರಿಗೆ ಹುಚ್ಚು ಹಿಡಿದಿದೆ. ಅವರನ್ನ ಧಾರವಾಡದ ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು. ತಮ್ಮ ವೈಫಲ್ಯ ಮರೆಮಾಚೋಕೆ ಈ ರೀತಿ ಮಾಡ್ತಿದ್ದಾರೆ. ಯಾರೋ ಕೆಲ ಕಿಡಗೇಡಿಗಳು ಮಾಡೋ ಕೆಲಸ ಇಡೀ ಸಮೂದಾಯವನ್ನ ಬಲಿ ತೆಗೆದುಕೊಳ್ಳುತ್ತಿದೆ. ಇವಾಗ ಅವರೆಲ್ಲಾ ಅನುಭವಿಸುತ್ತಾರೆ. ಅವರೆಲ್ಲಾ ಯುವಕರು ನಮ್ಮ ಮಾತು ಕೇಳಲಿಲ್ಲ. ಇವಾಗಲಾದ್ರು ನಮ್ಮ ಸಮೂದಾಯ ಎಚ್ಚೆತ್ತುಕೊಳ್ಳಬೇಕು ಎಂದು ಟಿರ್ವಿಗೆ ಅಲ್ತಾಫ್ ಹಳ್ಳೂರ್ ಹೇಳಿದ್ದಾರೆ.
ಇದನ್ನೂ ಓದಿ:
Published On - 4:10 pm, Tue, 19 April 22