ಶಿವಮೊಗ್ಗದಲ್ಲಿ ಇತ್ತೀಚಿಗೆ ನಡೆದ ಕೆಲ ಗಲಭೆಗಳಿಗೆ ಕೆ.ಎಸ್ ಈಶ್ವರಪ್ಪ ಕಾರಣ : ಸಿ.ಎಂ.ಇಬ್ರಾಹಿಂ ಗಂಭೀರ ಆರೋಪ
ಶಿವಮೊಗ್ಗದಲ್ಲಿ ಇತ್ತೀಚಿಗೆ ನಡೆದ ಕೆಲ ಗಲಭೆಗಳಿಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಾರಣ ಎಂದು ಹುಬ್ಬಳ್ಳಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಆರೋಪಿಸಿದ್ದಾರೆ.
ಧಾರವಾಡ: ಶಿವಮೊಗ್ಗದಲ್ಲಿ ಇತ್ತೀಚಿಗೆ ನಡೆದ ಕೆಲ ಗಲಭೆಗಳಿಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಕಾರಣ ಎಂದು ಹುಬ್ಬಳ್ಳಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ (CM Ibrahim) ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಟಿವಿ9ನೊಂದಿಗೆ ಮಾತನಾಡಿದ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭೀತಿಯಿಂದ ಇವೆಲ್ಲ ಅವಾಂತರ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪ ಬಂದ ಸಂದರ್ಭದಲ್ಲಿ ಇವೆಲ್ಲ ನಡೆಯುತ್ತಿವೆ. ಕೆ.ಎಸ್.ಈಶ್ವರಪ್ಪರ ಮಾತಿನಿಂದಲೆ ಅಲ್ಲಿ ಗಲಭೆಗಳು ಆಗುತ್ತಿವೆ. ಈಶ್ವರಪ್ಪರನ್ನು ಹದ್ದುಬಸ್ತಿನಲ್ಲಿ ಇಟ್ಟರೆ ಎಲ್ಲವೂ ಸರಿಹೋಗುತ್ತೆ ಎಂದು ವಾಗ್ದಾಳಿ ಮಾಡಿದರು.
ಗೃಹ ಸಚಿವ ಅರಗ ಜ್ಞಾನೇಂದ್ರ ಅದೇ ಜಿಲ್ಲೆಯವರು, ಆದರೆ ಅವರು ಬರೀ ಹೋಮ್ಗೆ ಮಾತ್ರ ಸೀಮಿತ, ಮಿನಿಸ್ಟರ್ ಅಲ್ಲ. ಅವರ ಮನೆಯಲ್ಲೇ ಯಾರೋ ಅವರ ಮಾತು ಕೇಳುತ್ತಿಲ್ಲ. ಇನ್ನು ಹೊರಗಿನವರು ಏನ್ ಕೇಳುತ್ತಾರೆ. ಚುನಾವಣಾ ಸಂದರ್ಭದಲ್ಲಿ ಇಂಥದ್ದನ್ನು ನಡೆಸೋದೆ ಪಕ್ಷದ ಪಾಲಿಸಿಯಾಗಿದ್ದರೇ ಏನೂ ಮಾಡಲಾಗಲ್ಲ. ಶಿವಮೊಗ್ಗ, ಮಂಗಳೂರು ಸೇರಿ ಕರಾವಳಿಯಲ್ಲಿ ಇಂಥದ್ದನ್ನು ಮಾಡಲಾಗುತ್ತಿದೆ ಎಂದರು.
ತಾಳಿ ಕಟ್ಟಿ ಮದುವೆ ಆದ್ಮೇಲೆ ನನ್ ಹೆಂಡತಿ ಅಲ್ಲ ಅಂದರೆ ಹೇಗೆ ?
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಶಾಸಕ ಅರವಿಂದ ಬೆಲ್ಲದ್ ನಮ್ಮ ನಾಯಕರಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ತಾಳಿ ಕಟ್ಟಿ ಮದುವೆ ಆದ ಮೇಲೆ ನನ್ನ ಹೆಂಡತಿ ಅಲ್ಲ ಅಂದರೆ ಹೇಗೆ? ತಾಳಿ ನಾವು ಕಟ್ಟಿಯೇ ಇಲ್ಲ ಅನ್ನೋದು ಸರಿಯಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಭಾರತ ಜೋಡೋ ಯಾತ್ರೆ ಗೊತ್ತು ಗುರಿಯಿಲ್ಲದ ಯಾತ್ರೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ಈ ಯಾತ್ರೆ ರಾಹುಲ್ ಗಾಂಧಿ ಯಾಕೆ ಮಾಡುತ್ತಿದ್ದಾರೆ ಎಂದು ಅವರಿಗೇ ಗೊತ್ತಿಲ್ಲ. ಅವರು ಜನರ ಸಂಕಷ್ಟವನ್ನು ಅರಿಯಲು, ಜನತೆಗೆ ಸ್ಪಂದಿಸಲು ಯಾತ್ರೆ ಮಾಡುತ್ತಿಲ್ಲ. ಯಾತ್ರೆ ಹೆಸರಲ್ಲಿ ಸಾವಿರಾರು ಜನರನ್ನು ಜಮಾಯಿಸಲಾಗುತ್ತಿದೆ. ಇದರಿಂದ ಕಾಂಗ್ರೆಸ್ಗೆ ಯಾವುದೇ ಪ್ರಯೋಜನವಾಗಲ್ಲ ಎಂದು ಹೇಳಿದ್ದಾರೆ.
ರಾಹುಲ್ ಯಾತ್ರೆ ನೋಡಿ ಬಿಜೆಪಿಯವರು ಜನ ಸಂಕಲ್ಪ ಸಮಾವೇಶ ಮಾಡುತ್ತಿದ್ದಾರೆ. ಜನ ಸಂಕಲ್ಪ ಸಮಾವೇಶದಲ್ಲಿ ಜನರಿಗಾಗಿ ಮಾಡಿದ ಕಾರ್ಯಗಳ ಬಗ್ಗೆ ಹೇಳುತ್ತಿಲ್ಲ. ಬಿಜೆಪಿಯವರದ್ದು ಏನಿದ್ದರೂ ಪರ್ಸಂಟೇಜ್ ವ್ಯವಹಾರ. ಇದಕ್ಕೆ ಭಿನ್ನವಾಗಿ ಜೆಡಿಎಸ್ ನಿಂದ ಪಂಚರತ್ನ ಕಾರ್ಯಕ್ರಮ ಮಾಡುತತಿದ್ದೇವೆ. ಶಿಕ್ಷಣ, ಆರೋಗ್ಯ, ನೀರಾವರಿ ಸೇರಿ ಮುಂದೆ ಕೈಗೊಳ್ಳಲಿರುವ ಯೋಜನೆಗಳ ಬಗ್ಗೆ ಜನರಿಗೆ ಹೇಳುತ್ತಿದ್ದೇವೆ. ಖಂಡಿತಾ ಜನ ನಮ್ಮನ್ನು ಬೆಂಬಲಿಸುತ್ತಾರೆ ಅನ್ನೋ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Wed, 26 October 22