ಹುಬ್ಬಳ್ಳಿ: ಟವರ್ ಮೇಲೆ ಎರಡು ಧರ್ಮಗಳ ಧ್ವಜ ಕಟ್ಟಿದ ಪ್ರಕರಣ: ಇಬ್ಬರು ವಶಕ್ಕೆ
ಏರಟೆಲ್ ಟವರ್ ಮೇಲೆ ಎರಡು ಧರ್ಮಗಳ ಧ್ವಜ ಕಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧ್ವಜ ಕಟ್ಟಿದ ಇಬ್ಬರನ್ನು ಹಳೇ ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋಡಕೆ ಬಡಾವಣೆ ನಿವಾಸಿಗಳಾದ ಸೈಯ್ಯದ್ ನಾಗನೂರ ಹಾಗೂ ರವಿ ಕಾನಗದ ಎಂಬ ಯುವಕನರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ (ಆ.16): ಏರಟೆಲ್ (Airtel) ಟವರ್ ಮೇಲೆ ಎರಡು ಧರ್ಮಗಳ ಧ್ವಜ ಕಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧ್ವಜ ಕಟ್ಟಿದ ಇಬ್ಬರನ್ನು ಹಳೇ ಹುಬ್ಬಳ್ಳಿ (Old Hubballi) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋಡಕೆ ಬಡಾವಣೆ ನಿವಾಸಿಗಳಾದ ಸೈಯ್ಯದ್ ನಾಗನೂರ ಹಾಗೂ ರವಿ ಕಾನಗದ ಎಂಬ ಯುವಕನರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಪೊಲೀಸರು (Police) ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ. ಟವರ್ ಮೇಲೆ ಪಾರಿವಾಳ ಕೂಡುತ್ತವೆ. ಈ ಪಾರಿವಾಳಗಳು ಧ್ವಜಗಳನ್ನ ನೋಡಿ ಹೆದರಿ ಎದ್ದು ಬರಲಿ ಅಂತ ಕಟ್ಟಿದ್ದೇವೆ ಎಂದು ಯುವಕರು ವಿಚಾರಣೆ ವೇಳೆ ತಿಳಿಸಿದ್ದಾರೆ.
ಟವರ್ ಮೇಲೆ ಮುಸ್ಲಿಂ, ಭಗಧ್ವಜ ಕಟ್ಟಿದ ಕಿಡಿಗೇಡಿಗಳು
ಹಳೇ ಹುಬ್ಬಳ್ಳಿಯ ಆನಂದನಗರದ ಗೋಡ್ಕೆ ಫ್ಲ್ಯಾಟ್ನಲ್ಲಿರುವ ಟವರ್ ಮೇಲೆ ಇಸ್ಲಾಂ ಧರ್ಮದ ಬಾವುಟದ ಕೆಳಗೆ ಭಗವಾ ಧ್ವಜ ಕಟ್ಟಲಾಗಿತ್ತು. ಈ ಎರಡು ಬಾವುಟಗಳನ್ನು ಒಬ್ಬನೇ ಕಟ್ಟಿದ್ದಾನೆ. ಅಲ್ಲದೇ ಇದು ಜಿಹಾದಿ ಕೆಲಸವಾಗಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ಹಳೇ ಹುಬ್ಬಳ್ಳಿ ಠಾಣೆಗೆ ದೂರು ನೀಡಿತ್ತು.
ಹಿಂದೂ ಹಿಂದೂ ಜಾಗರಣ ವೇದಿಕೆ (Hindu Jagarana Vedik) ಕಾರ್ಯಕರ್ತರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ಯಕರ್ತರು ದೂರು ನೀಡಿದ ಬೆನ್ನಲ್ಲೇ ಪೊಲೀಸರು ಟವರ್ನಲ್ಲಿದ್ದ ಧ್ವಜಗಳನ್ನು ತೆರವುಗೊಳಿಸಿದ್ದರು.
ಇದನ್ನೂ ಓದಿ: ಹುಬ್ಬಳ್ಳಿ: ವಿದ್ಯಾರ್ಥಿನಿಯರ ಅಶ್ಲೀಲ ಭಾವಚಿತ್ರ ಪೋಸ್ಟ್ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ
ಗೋಡ್ಕೆ ಪ್ಲಾಟ್ನಲ್ಲಿರುವ ಏರಟೆಲ್ ಟವರ್ ಮೇಲೆ ಎರಡು ಧರ್ಮದ ಬಾವುಟ ಹಾರಿಸಿದ್ದರು. ಅದರಲ್ಲಿ ಒಂದು ಧ್ವಜ ಏರುಪೇರಿದೆ ಎಂದು ದೂರು ಕೊಟ್ಟಿದ್ದರು. ಎರಡು ಧರ್ಮದವರಿಗೆ ತೊಂದರೆ ಕೊಡಬೇಕೆಂದು ಕಿಡಗೇಡಿ ಇಂದು ದ್ವಜಗಳನ್ನು ಕಟ್ಟಿದ್ದರು. ಆದರೆ ಅದು ಪಾಕಿಸ್ತಾನ ಧ್ವಜ ಅಲ್ಲ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ರೇಣುಕಾ ಸುಕಾಮಾರ ಸ್ಪಷ್ಟಪಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ