ಧಾರವಾಡ: ಎಲ್‌ಪಿಜಿ ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆ ಪ್ರಕರಣ; 17 ಗಂಟೆ ಬಳಿಕ ಬೆಂಗಳೂರು-ಪುಣೆ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಸಂಚಾರ ಆರಂಭ

ನಿನ್ನೆ(ಆ.17) ಧಾರವಾಡ ಬಳಿ ಎಲ್‌ಪಿಜಿ ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆಯಾಗಿತ್ತು. ಪರಿಣಾಮವಾಗಿ ಬೆಂಗಳೂರು-ಪುಣೆ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ‌ಗೊಳಿಸಲಾಗಿತ್ತು. ಇದೀಗ ಮತ್ತೆ ಸಂಚಾರವನ್ನು ಆರಂಭಿಸಲಾಗಿದೆ.

ಧಾರವಾಡ: ಎಲ್‌ಪಿಜಿ ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆ ಪ್ರಕರಣ; 17 ಗಂಟೆ ಬಳಿಕ ಬೆಂಗಳೂರು-ಪುಣೆ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಸಂಚಾರ ಆರಂಭ
ಬೆಂಗಳೂರು-ಪುಣೆ ಹೆದ್ದಾರಿ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 17, 2023 | 12:57 PM

ಧಾರವಾಡ, ಆ.17: ನಿನ್ನೆ(ಆ.16) ಸಂಜೆ ಬೆಳಗಾವಿ ರಸ್ತೆಯ ಹೈಕೋರ್ಟ್ ಬಳಿ ಅಡುಗೆ ಅನಿಲ ತುಂಬಿದ್ದ ಟ್ಯಾಂಕರ್ ಸೋರಿಕೆಯಾಗಿತ್ತು. ಈ ಹಿನ್ನೆಲೆ ಧಾರವಾಡ(Dharwad) ಜಿಲ್ಲಾಡಳಿತ ಬೆಂಗಳೂರು-ಪುಣೆ(Bengaluru-Pune) ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ‌ಗೊಳಿಸಲಾಗಿತ್ತು. ಇದೀಗ 17 ಗಂಟೆ ಬಳಿಕ ರಾಷ್ಟ್ರೀಯ ಹೆದ್ದಾರಿ 4 ಆರಂಭ ಮಾಡಲಾಗಿದೆ. ಹೌದು, ಅನಿಲ ಸೋರಿಕೆ ಹಿನ್ನಲೆ ಮತ್ತೊಂದು ಖಾಲಿ ಗ್ಯಾಸ್ ಟ್ಯಾಂಕರ್​ಗೆ ಅನಿಲ ಸಾಗಾಣಿಕೆ ಮಾಡಿದ್ದು, ಬೆಳಿಗ್ಗೆಯಿಂದ ಡಂಪಿಂಗ್ ಕಾರ್ಯ ಆರಂಭಿಸಲಾಗಿತ್ತು. ಇದೀಗ ಮತ್ತೆ ಸಂಚಾರವನ್ನು ಆರಂಭಿಸಲಾಗಿದೆ.

ನಿನ್ನೆ ಸಂಜೆ ವೇಳೆಗೆ ಸೋರಿಕೆಯಾಗಿದ್ದ ಗ್ಯಾಸ್ ಟ್ಯಾಂಕರ್

ನಿನ್ನೆ(ಆ.17) ಧಾರವಾಡ ಬಳಿ ಎಲ್‌ಪಿಜಿ ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆಯಾಗಿತ್ತು. ಪರಿಣಾಮವಾಗಿ ಬೆಂಗಳೂರು-ಪುಣೆ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ‌ಗೊಳಿಸಲಾಗಿತ್ತು. ಬಳಿಕ ಬೆಳಗಾವಿ ಪೊಲೀಸ್​ ವರಿಷ್ಠಾಧಿಕಾರಿ ಡಾ.ಸಂಜೀವ್​​ ಪಾಟೀಲ್ ಒಟ್ಟು 4 ಪರ್ಯಾಯ ಮಾರ್ಗಗಗಳಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಸೂಚಿಸಿದ್ದರು. 1)ಬೆಳಗಾವಿಯಿಂದ ಕಿತ್ತೂರು-ತಡಕೋಡ-ಧಾರವಾಡ-ಹುಬ್ಬಳ್ಳಿಗೆ ಸಂಚಾರ, 2) ಹಿರೇಬಾಗೇವಾಡಿ-ಬೈಲಹೊಂಗಲ ತಡಕೋಡ- ಧಾರವಾಡ ಮೂಲಕ ಸಂಚಾರ, 3) ಸಂಕೇಶ್ವರ-ಹುಕ್ಕೇರಿ ಘಟಪ್ರಭಾ-ಗೋಕಾಕ್-ಧಾರವಾಡ ಮಾರ್ಗದಲ್ಲಿ ಸಂಚಾರ, 4) ನಿಪ್ಪಾಣಿ-ಹುಕ್ಕೇರಿ-ಘಟಪ್ರಭಾ ಗೋಕಾಕ್-ಸವದತ್ತಿ ಮೂಲಕ ಸಂಚಾರ, 5) ಬೆಳಗಾವಿ ಕಡೆಯಿಂದ ಪರ್ಯಾಯ ಮಾರ್ಗ ಬಳಸಿ ಧಾರವಾಡಕ್ಕೆ ಸಂಚರಿಸಬಹುದಾಗಿತ್ತು.

ಇದನ್ನೂ ಓದಿ:ಸೂರತ್​​ನ ರಾಸಾಯನಿಕ ಫ್ಯಾಕ್ಟರಿ ಸಮೀಪ ಟ್ಯಾಂಕರ್​ನಿಂದ ವಿಷಾನಿಲ ಸೋರಿಕೆ; 6 ಮಂದಿ ಸಾವು, 22 ಮಂದಿ ಅಸ್ವಸ್ಥ

ಇನ್ನು ಸ್ಥಳಕ್ಕಾಗಮಿಸಿದ್ದ ಅಗ್ನಿಶಾಮಕ ಸಿಬ್ಬಂದಿಯವರು ಪರಿಶೀಲನೆ ನಡೆಸಿದ್ದರು. ಜೊತೆಗೆ ಗ್ಯಾಸ್ ಸೋರಿಕೆ ತಡೆಯುವುದು ಸುಲಭದ ಮಾತಲ್ಲ ಎಂದು ತಜ್ಞರು ಹೇಳಿದ್ದರು. ಕೂಡಲೇ ಪೊಲೀಸರು ಗ್ಯಾಸ್​ ಟ್ಯಾಂಕರ್​ ಬಳಿ ಯಾರೂ ಹೋಗದಂತೆ ನಿರ್ಬಂಧಿಸಿದ್ದರು. ಟ್ಯಾಂಕರ್​ನಿಂದ ಗ್ಯಾಸ್​ ಸಂಪೂರ್ಣ ಹೊರಹೋಗುವವರೆಗೆ ಕಾಯಲಾಗಿತ್ತು. ಇದರಿಂದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಿಲೋ ಮೀಟರ್​ವರೆಗೆ  ವಾಹನಗಳು ಸಾಲುಗಟ್ಟಿ ನಿಂತಿತ್ತು. ಜೊತೆಗೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿತ್ತು. ಇದೀಗ ಅನಿಲವನ್ನು ಡಂಪಿಂಗ್ ಮಾಡಿ, ಭಾರಿ ಅನಾಹುತವನ್ನು ತಡೆಯಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ