ಜಯ ಜಯ ಗಣೇಶ! ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್​ ಗ್ರೀನ್​ ಸಿಗ್ನಲ್

ಗಣೇಶ ಕೂರಿಸುವ ಬಗ್ಗೆ ನಿರ್ಧರಿಸುವ ಅಧಿಕಾರವನ್ನು ಹು-ಧಾ ಮಹಾನಗರ ಪಾಲಿಕೆ ಆಯುಕ್ತರಿಗೆ ನೀಡಿ ಹೈಕೋರ್ಟ್​ ಆದೇಶಿದೆ. ಮೈದಾನದಲ್ಲಿ ಗಣೇಶ ಕೂರಿಸುವುದು ಈಗ ಪಾಲಿಕೆ ಆಯುಕ್ತರಿಗೆ ಬಿಟ್ಟ ವಿಚಾರ.

ಜಯ ಜಯ ಗಣೇಶ! ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್​ ಗ್ರೀನ್​ ಸಿಗ್ನಲ್
ಹುಬ್ಬಳ್ಳಿ ಈದ್ಗಾ ಮೈದಾನ
Follow us
TV9 Web
| Updated By: ಆಯೇಷಾ ಬಾನು

Updated on:Aug 30, 2022 | 5:39 PM

ಬೆಂಗಳೂರು: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ(Hubli Idgah Maidan) ಗಣೇಶೋತ್ಸವ ಆಚರಣೆ(Ganesh Chaturthi) ವಿಚಾರಕ್ಕೆ ಸಂಬಂಧಿಸಿ ಸದನ ಸಮಿತಿ ರಚನೆ ಪ್ರಶ್ನಿಸಿ ಹೈಕೋರ್ಟ್​ಗೆ(High Court) ಅರ್ಜಿ ಸಲ್ಲಿಸಲಾಗಿತ್ತು. ಸದ್ಯ ಈ ಬಗ್ಗೆ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ತನ್ನ ತೀರ್ಪು ಪ್ರಕಟಿಸಿದೆ. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಗ್ರೀನ್​ ಸಿಗ್ನಲ್ ಸಿಕ್ಕಿದೆ.

ಗಣೇಶ ಕೂರಿಸುವ ಬಗ್ಗೆ ನಿರ್ಧರಿಸುವ ಅಧಿಕಾರವನ್ನು ಹು-ಧಾ ಮಹಾನಗರ ಪಾಲಿಕೆ ಆಯುಕ್ತರಿಗೆ ನೀಡಿ ಹೈಕೋರ್ಟ್​ ಆದೇಶಿದೆ. ಮೈದಾನದಲ್ಲಿ ಗಣೇಶ ಕೂರಿಸುವುದು ಈಗ ಪಾಲಿಕೆ ಆಯುಕ್ತರಿಗೆ ಬಿಟ್ಟ ವಿಚಾರ. ಗಣೇಶೋತ್ಸವಕ್ಕೆ‌ ಬರುವ ಅರ್ಜಿ ನಿರ್ಧರಿಸುವ ಅಧಿಕಾರವನ್ನು ‌ಹೈಕೋರ್ಟ್ ಕಮಿಷನರ್​ಗೆ ನೀಡಿ ಆದೇಶಿಸಿದೆ. ಇದರಿಂದ ಈದ್ಗಾ ಗಣೇಶ ವಿವಾದ ಮತ್ತೆ ಗೊಂದಲಕ್ಕೆ ಬಿದ್ದಿದೆ.

ಸದನ‌ ಸಮಿತಿ ವರದಿ ಮೇರೆಗೆ ನಿನ್ನೆಯಷ್ಟೇ ಪಾಲಿಕೆ, ಮೂರು ದಿನ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿತ್ತು. ಪಾಲಿಕೆ ಮೇಯರ್ ಗಣೇಶ ಪ್ರತಿಷ್ಠಾಪನೆಗೆ 5 ಜನರ ಸಮಿತಿ ರಚಿಸಿದ್ದರು. ಈ ಹಿನ್ನೆಲೆ ಸದನ ಸಮಿತಿ ರಚನೆ ಪ್ರಶ್ನಿಸಿ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಸದ್ಯ ಈಗ ಬೆಂಗಳೂರಿನ ವಿಶೇಷ ಪೀಠ ವಾದ-ಪ್ರತಿವಾದ ಆಲಿಸಿ ತೀರ್ಪು ಪ್ರಕಟಿಸಿದೆ.

ಹೈಕೋರ್ಟ್ ಪಾಲಿಕೆ ಆಯುಕ್ತರಿಗೆ ಅಧಿಕಾರ ನೀಡಿ ತೀರ್ಪು ಪ್ರಕಟಿಸಿದೆ. ಮತ್ತೊಂದು ಕಡೆ ಸುಪ್ರೀಂ ಕೋರ್ಟ್ ನಲ್ಲಿ ಚಾಮರಾಜಪೇಟೆ ಈದ್ಗಾ ಮೈದಾನದ ವಿಚಾರಣೆ ಹಿನ್ನೆಲೆ ಸುಪ್ರೀಂ ಕೋರ್ಟ್ ಆದೇಶದ ನಂತರ ಹುಬ್ಭಳ್ಳಿ ಅರ್ಜಿ ಮಂಡನೆಗೆ ಅವಕಾಶ ನೀಡಲಾಗಿದೆ. ಮತ್ತೆ ಅರ್ಜಿ ಸಲ್ಲಿಸಲು ಹೈಕೋರ್ಟ್ ಅವಕಾಶ ನೀಡಿದೆ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶಕ್ಕಾಗಿ ಅರ್ಜಿದಾರರು ಕಾದು ಕುಳಿತಿದ್ದಾರೆ.

ಚಾಮರಾಜಪೇಟೆ ಮೈದಾನ ವಿಚಾರ: ಹಬ್ಬಕ್ಕೆ ಸುಪ್ರೀಂ ಕೋರ್ಟ್​ ಮಧ್ಯಂತರ ಗಿಫ್ಟ್! ವಕ್ಫ್ ಬೋರ್ಡ್​ಗೆ ನಿರಾಸೆ

ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರವಾಗಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಕಾರ. ಸುಪ್ರೀಂಕೋರ್ಟ್​ನಲ್ಲೂ ವಕ್ಫ್ ಬೋರ್ಡ್​ಗೆ ಹಿನ್ನಡೆಯಾಗಿದೆ. ಧಾರ್ಮಿಕ, ಸಾಂಸ್ಕೃತಿಕ ಆಚರಣೆಗೆ ಹೈಕೋರ್ಟ್ ಅನುಮತಿ ನೀಡಿತ್ತು. ಹೀಗಾಗಿ ಮೈದಾನದಲ್ಲಿ ಗಣೇಶೋತ್ಸವ ನಡೆಯೋದು ಪಕ್ಕಾ ಆಗಿದೆ. ನಾ. ಇಂದಿರಾ ಬ್ಯಾನರ್ಜಿ, ನ್ಯಾ‌ ಎ ಎಸ್ ಓಕಾ, ನ್ಯಾ . ಎಂ .ಎಂ ಸುಂದರೇಶ್ ಒಳಗೊಂಡ ಮೂವರು ನ್ಯಾಯಾಧೀಶರ ಪೀಠ ರಚನೆ ಮಾಡಿದ್ದು, 4.45 ಕ್ಕೆ ನ್ಯಾಯಪೀಠ ವಿಚಾರಣೆ ಆರಂಭಿಸಲಿದೆ. ಜಸ್ಟೀಸ್ ಹೇಮಂತ್ ಗುಪ್ತಾ, ಜಸ್ಟೀಸ್ ಸುಧಾಂಶು ಧುಲಿಯಾ ಪೀಠದಲ್ಲಿ ನ್ಯಾಯಮೂರ್ತಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಈ ಕಾರಣದಿಂದ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಮೂವರು ನ್ಯಾಯಮೂರ್ತಿಗಳ ಪೀಠ ರಚನೆ ಮಾಡಲಾಗಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:44 pm, Tue, 30 August 22