AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hubli-Dharwad: ಬಸ್​​ನಂತೆ ಅವಳಿನಗರ ಮಧ್ಯೆ ಸಂಚರಿಸಲಿದೆ ಲಘು ರೈಲು, ದೇಶದಲ್ಲೇ ಮೊದಲ ಯೋಜನೆ

ಹುಬ್ಬಳ್ಳಿ-ಧಾರವಾಡ ಮಧ್ಯೆ ಲಘು ರೈಲು ಸಾರಿಗೆಯನ್ನು ಪರಿಚಯಿಸಲು ಸರ್ಕಾರ ಮುಂದಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದು ಯೋಜನೆ ಕಾರ್ಯರೂಪಕ್ಕೆ ಬಂದರೇ ದೇಶದಲ್ಲೇ ಮೊದಲ ಬಾರಿಗೆ ಲಘು ರೈಲು ಸಾರಿಗೆ ಅವಳಿನಗರದಲ್ಲಿ ಸಂಚರಿಸಲಿದೆ.

Hubli-Dharwad: ಬಸ್​​ನಂತೆ ಅವಳಿನಗರ ಮಧ್ಯೆ ಸಂಚರಿಸಲಿದೆ ಲಘು ರೈಲು, ದೇಶದಲ್ಲೇ ಮೊದಲ ಯೋಜನೆ
ಲಘು ರೈಲು ಸಾರಿಗೆ (ಸಾಂದರ್ಭಿಕ ಚಿತ್ರ)
ವಿವೇಕ ಬಿರಾದಾರ
|

Updated on:Jul 18, 2023 | 3:03 PM

Share

ಹುಬ್ಬಳ್ಳಿ: ರಾಜ್ಯ ರಾಜಧಾನಿ ಬೆಂಗಳೂರು (Bengaluru) ನಂತರ ರಾಜ್ಯದ ಎರಡನೇ ಅತಿ ಪ್ರಮುಖ ನಗರ ಹುಬ್ಬಳ್ಳಿ-ಧಾರವಾಡ (Hubli-Dharwad) ಮಹಾನಗರ. ಅವಳಿ ನಗರದಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಟ್ರಾಫಿಕ್​ ಕಿರಿಕಿರಿ ಉದ್ಭವಿಸುತ್ತಿದ್ದೆ. ಹೀಗಾಗಿ ಟ್ರಾಫಿಕ್​ ಸಮಸ್ಯೆ ಕಡಿಮೆ ಮಾಡಲು ಈಗಾಗಲೆ ಬಿಆರ್​ಟಿಎಸ್ (BRTS)​ ಬಸ್​ಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ಬಿಆರ್​ಟಿಎಸ್​ ಬಸ್​ಗಳ ಜೊತೆಗೆ ಲಘು ರೈಲು ಸಾರಿಗೆಯನ್ನು (Light Rail Transit) ಪರಿಚಯಿಸಲು ಸರ್ಕಾರ ಮುಂದಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದು ಯೋಜನೆ ಕಾರ್ಯರೂಪಕ್ಕೆ ಬಂದರೇ ದೇಶದಲ್ಲೇ ಮೊದಲ ಬಾರಿಗೆ ಲಘು ರೈಲು ಸಾರಿಗೆ ಅವಳಿನಗರದಲ್ಲಿ ಸಂಚರಿಸಲಿದೆ.

ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್​ ಲಾಡ್​ ಮಾತನಾಡಿ ಲಘು ರೈಲು ಸಾರಿಗೆಯ ಆರಂಭಿಕ ಯೋಜನೆಗೆ ಕಾರ್ಯತಂತ್ರ ರೂಪಿಸಲಾಗಿದೆ. ಇನ್ನೂ ನಾಲ್ಕು ವಾರಗಳಲ್ಲಿ ಪ್ರಸ್ತಾವನೆ ಸಿದ್ದವಾಗಲಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಪ್ರಸ್ತಾವನೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೇ ಒಂದೂವರೆ ವರ್ಷದಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದರು.

ಲಘು ರೈಲು ಸಾರಿಗೆ ಜಾರಿಯಾದಾಗ ಬಿಆರ್‌ಟಿಎಸ್ ಅನ್ನು ನಿಲ್ಲಿಸುವುದಿಲ್ಲ. ಮುಂದಿನ 10 ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ವೇಗವಾಗಿ ಬೆಳೆಯಲಿದೆ. ಬೆಂಗಳೂರು ನಂತರ ಜನರು ವಾಸ್ತವ್ಯಕ್ಕೆ ಮತ್ತು ಕೈಗಾರಿಕೆಗಳಿಗೆ ಈ ನಗರವನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಆದ್ದರಿಂದ ಮುಂದಿನ 10-20 ವರ್ಷಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವಳಿ ನಗರಗಳನ್ನು ಅಭಿವೃದ್ಧಿಪಡಿಸಲು ಯೋಚಿಸಬೇಕು. ಅದಕ್ಕೆ ಅನುಗುಣವಾಗಿ ಯೋಜನೆ ರೂಪಿಸಬೇಕು ಎಂಬ ವರದಿ ಸಹ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ನನ್ನಾಕಿ ಹೃದಯದಲ್ಲಿರಲಿ, ಗಾಡಿ ನಂಬರ್ ಪ್ಲೇಟ್ ಮೇಲಲ್ಲ! ವೈರಲ್ ಆಗ್ತಿದೆ ಹುಬ್ಬಳ್ಳಿ ಧಾರವಾಡ ಪೊಲೀಸರ ಜಾಗೃತಿ ಸಂದೇಶ

ಯೋಜನೆಗೆ ಬೆಂಗಳೂರು ಅಥವಾ ಮುಂಬಯಿ ಏರ್​ಪೋರ್ಟ್ ರೈಲ್ ಲಿಂಕ್ (ಬಿಎಆರ್​ಎಲ್) ನ್ನು ನೋಡಲ್ ಏಜೆನ್ಸಿಯನ್ನಾಗಿ ಮಾಡಲು ಚಿಂತನೆ ಇದ್ದು , ಪ್ರಸ್ತಾವಿತ 22 ಕೀಲೋ ಎಲಿವೇಟೆಡ್ ಯೋಜನೆ ಆಗಬಹುದು ಎನ್ನಲಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿನಗರ ಸೇರಿದಂತೆ ಹೊರ ವರ್ತುಲ ರಸ್ತೆಯ ಇನ್ನಷ್ಟು ಭಾಗವನ್ನು ಬಿಆರ್​ಟಿಎಸ್ ಯೋಜನಾ ವ್ಯಾಪ್ತಿಯಲ್ಲಿ ಪೂರ್ಣಗೊಳಿಸಿದರೆ ಈ ಯೋಜನೆಗೆ ಹೆಚ್ಚು ಮಹತ್ವ ಬರುತ್ತದೆ ಎಂದು ಹೇಳಿದರು.

ಈಗಾಗಲೇ ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿಯಿಂದ ಮುಕ್ತಿ ಕೊಡಲು ರೂಪಿಸಲಾಗಿರುವ ಲಘು ರೈಲು ಸಾರಿಗೆ ವ್ಯವಸ್ಥೆ ಯೋಜನೆಯನ್ನು ಬೆಂಗಳೂರು ಮೆಟ್ರೋ ನಿಗಮಕ್ಕೆ ನೀಡಲಾಗಿದೆ. ಅದೇ ಮಾದರಿಯನ್ನು ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಅಳವಡಿಕೆ ಮಾಡುವ ಒಂದು ಹಂತದ‌ ಚಿಂತನೆ ಸಹ ಆಗಿದೆ‌ ಎಂದು ತಿಳಿಸಿದ್ದಾರೆ.

ಲಘು ರೈಲಿನ ವಿಶೇಷತೆ

ಈ ಲಘು ರೈಲಿನ ವಿಶೇಷವೆಂದರೇ ಇದು ಬಸ್​ಗಳಂತೆ ರಸ್ತೆ ಮಧ್ಯೆಯೇ ಸಂಚರಿಸಲಿದೆ. ಹೌದು ಈ ರೈಲಿಗೆ ರಸ್ತೆ ಮೇಲೆಯೇ ಹಳಿಗಳನ್ನು ಜೋಡಿಸಲಾಗುತ್ತದೆ. ಈ ಹಳಿಗಳ ಮೇಲೆ ರೈಲು ಸಂಚರಿಸಲಿದೆ. ಇದು ಸಾಮಾನ್ಯ ಬಸ್​​ನಂತೆ ಎಲ್ಲ ಸ್ಟಾಪ್​​ಗಳಲ್ಲೂ ನಿಲ್ಲುತ್ತದೆ. ಇನ್ನು ಹುಬ್ಬಳ್ಳಿಯಲ್ಲಿ ಈ ರೈಲು ಸಂಚಾರಕ್ಕೆ ಈಗಾಗಲೆ ಪ್ರಾರಂಭವಾಗಿರುವ ಬಿಆರ್​ಟಿಸಿಎಸ್​​ ಬಸ್​ ಮಾರ್ಗವನ್ನೇ ಬಳಸಲು ಸರ್ಕಾರ ಚಿಂತಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:03 pm, Tue, 18 July 23

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು