ಮಲ್ಲಿಕಾರ್ಜುನ ಖರ್ಗೆ ಬಿಜೆಪಿಗೆ ಬರುವ ಬಗ್ಗೆ ಅನುಮಾನ ಮೂಡುತ್ತಿವೆ: ಸಚಿವ ಪ್ರಲ್ಹಾದ್​ ಜೋಶಿ ವ್ಯಂಗ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 03, 2024 | 5:35 PM

ಹುಬ್ಬಳ್ಳಿ ಗೋಕುಲ ರಸ್ತೆಯ ಹೆಬಸೂರು ಭವನದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಗೆ ಬರುವ ಬಗ್ಗೆ ಅನುಮಾನ ಮೂಡುತ್ತಿವೆ ಎಂದು ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ನಂಬಿಕೆ ವಿಶ್ವಾಸವಿಲ್ಲ. ಯಾವಾಗಲೂ ಚಾಕು ಇಟ್ಟುಕೊಂಡೇ ಓಡಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಬಿಜೆಪಿಗೆ ಬರುವ ಬಗ್ಗೆ ಅನುಮಾನ ಮೂಡುತ್ತಿವೆ: ಸಚಿವ ಪ್ರಲ್ಹಾದ್​ ಜೋಶಿ ವ್ಯಂಗ್ಯ
ಕೇಂದ್ರ ಸಚಿವ ಜೋಶಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
Follow us on

ಹುಬ್ಬಳ್ಳಿ, ಫೆಬ್ರುವರಿ 3: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬಿಜೆಪಿಗೆ ಬರುವ ಬಗ್ಗೆ ಅನುಮಾನ ಮೂಡುತ್ತಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವ್ಯಂಗ್ಯವಾಡಿದ್ದಾರೆ. ನಗರದ ಗೋಕುಲ ರಸ್ತೆಯ ಹೆಬಸೂರು ಭವನದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಮಲ್ಲಿಕಾರ್ಜುನ ಖರ್ಗೆಯವರು 2024ಕ್ಕೂ ಅವರೇ ಅಂತಾ ಹೇಳಿದ್ದಾರೆ. ಇದನ್ನು ನೋಡಿದರೆ ಬಿಜೆಪಿಗೆ ಬರುತ್ತಾರೆ ಏನೋ ಅನ್ನೋ ಅನುಮಾನ ಇದೆ. ಖರ್ಗೆ ಹೇಳುವಾಗ ಅಲ್ಲೇ ಕೂತಿದ್ದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಕಾಂಗ್ರೆಸ್ ಭೀಕರ ಪರಿಸ್ಥಿತಿಗೆ ತಲುಪಿದೆ

ದೇಶದಲ್ಲಿ ಕಾಂಗ್ರೆಸ್ ಭೀಕರ ಪರಿಸ್ಥಿತಿಗೆ ತಲುಪಿದೆ. ಕೇಂದ್ರದಲ್ಲಿ ಎಂದೂ ಅಧಿಕಾರಕ್ಕೆ ಬರಲ್ಲ ಅಂತಾ ಡಿಸೈಡ್ ಮಾಡಿದೆ. ಯಾವ ಮುಟ್ಠಾಳನಾದರೂ ದೇಶ ಇಬ್ಭಾಗಿಸುತ್ತೇವೆ ಅಂತಾ ಹೇಳ್ತಾರಾ ಎಂದು ಪರೋಕ್ಷವಾಗಿ ಸಂಸದ ಡಿ.ಕೆ.ಸುರೇಶ್​ಗೆ ಮುಟ್ಠಾಳ ಎಂದಿದ್ದಾರೆ.

ಇದನ್ನೂ ಓದಿ: ಕುಣಿಲಿಕ್ಕೆ ಬಾರದವನಿಗೆ ನೆಲ ಡೊಂಕು ಅನ್ನುವ ಸ್ಥಿತಿ ರಾಜ್ಯ ಸರ್ಕಾರದ್ದು: ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವ್ಯಂಗ್ಯ

ದೇಶ ಇಬ್ಭಾಗಿಸೋಕೆ ಇದೇನೂ ಅವರಪ್ಪನ ಮನೆ ಆಸ್ತಿನಾ. ಅಕಸ್ಮಾತ್ ‘ಕಾಂಗ್ರೆಸ್​’ ಅಧಿಕಾರಕ್ಕೆ ಬಂದರೆ ದೇಶ ಒಂದಿರಬೇಕೋ ಬೇಡ್ವೋ. ಈ ಹಿಂದೆ ಇದೇ ಕಾಂಗ್ರೆಸ್ ದೇಶವನ್ನು ತುಂಡರಿಸಿದ್ದು. ಕಾಂಗ್ರೆಸ್ ಪಕ್ಷಕ್ಕೆ ದೇಶ ಅಂದ್ರೆ ಭೂಮಿ ಮಾತ್ರ ಆದರೆ ಬಿಜೆಪಿಯ ಕಾರ್ಯಕರ್ತರಿಗೆ ದೇಶ ಅಂದರೆ ಮಾತೃಭೂಮಿ. ಭೂಮಿಗೂ ಮಾತೃಭೂಮಿಗೂ ವ್ಯತ್ಯಾಸ ಇದೆ. ಹೀಗಾಗಿ ಕಾಂಗ್ರೆಸ್​ನವರು ಯಾವಾಗಲೂ ತುಂಡರಿಸುವ ಮಾತಾಡ್ತಾರೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ನಂಬಿಕೆ ವಿಶ್ವಾಸವಿಲ್ಲ

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ನಂಬಿಕೆ ವಿಶ್ವಾಸವಿಲ್ಲ. ಯಾವಾಗಲೂ ಚಾಕು ಇಟ್ಟುಕೊಂಡೇ ಓಡಾಡ್ತಿದ್ದಾರೆ. ಕಾಂಗ್ರೆಸ್​ ಶಾಸಕರು ಯಾವ ಕಾರಣಕ್ಕೆ ದೆಹಲಿಗೆ ಬರುತ್ತಿದ್ದೀರಿ. ಗ್ಯಾರಂಟಿ ಹಳ್ಳ ಹಿಡಿದಿರೋದಕ್ಕೋ, ಭ್ರಷ್ಟಾಚಾರ ಹೆಚ್ಚಾಗಿದ್ದಕ್ಕೋ? ನಿಮ್ಮ ಶಾಸಕರೇ 50 ಪರ್ಸೆಂಟ್ ಸರ್ಕಾರ ಅಂತಿದ್ದಾರೆ. ಕಾಂಗ್ರೆಸ್​ನರಂತಹ ದೇಶ ಒಡೆಯುವವರು, ದಗಾಕೋರರು. ಕಾಂಗ್ರೆಸ್​ನಂತಹ ಸುಳ್ಳು ಹೇಳುವವರು ಎಲ್ಲೂ ಸಿಗಲ್ಲ. ಅನ್ನಭಾಗ್ಯ ಕೊಟ್ಟ ಸಿದ್ದರಾಮಯ್ಯಗೆ ಸ್ವಾಗತ ಎಂದು ಹಾಕುತ್ತಾರೆ. ಅವರು ಒಂದು ಕಾಳು ಅಕ್ಕಿಯನ್ನೂ ಕೊಟ್ಟಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಪರೋಕ್ಷವಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​​ನ್ನು ಸಂಗ್ಯಾ ಬಾಳ್ಯಾ ಎಂದ ಸಚಿವ ಜೋಶಿ

ರಾಹುಲ್ ಗಾಂಧಿ ಮುಂದೆ ಸ್ಪರ್ಧಿಸುವುದಕ್ಕೆ ಸಂಗ್ಯಾ ಬಾಳ್ಯಾ ಇದ್ದಾರೆ. ಪರೋಕ್ಷವಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ರನ್ನು ಸಂಗ್ಯಾ ಬಾಳ್ಯಾ ಎಂದರು. ಒಬ್ಬರು ಜೋಡೋ ಅಂತಾರೆ, ಇನ್ನೊಬ್ಬರು ತುಕ್ಡೇ ಗ್ಯಾಂಗ್ ಜತೆ ಇದ್ದಾರೆ. ಮತ್ತೊಬ್ಬರು ದೇಶ ಒಡೆಯುತ್ತೇವೆ ಅಂತಾರೆ, ಇದು ಕಾಂಗ್ರೆಸ್​​ನ ಸ್ಥಿತಿ. ಎಲ್ಲರೂ ಸೇರಿಕೊಂಡು ಭಾರತೀಯ ಜನತಾ ಪಾರ್ಟಿಯನ್ನು ಗೆಲ್ಲಿಸೋಣ. ನಮ್ಮಲ್ಲಿ ಕೆಲ ಗೊಂದಲಗಳಿದ್ವು, ಶೆಟ್ಟರ್ ವಾಪಸ್ ಬಂದಿರೋದು ಸಂತೋಷ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:33 pm, Sat, 3 February 24