ಕುಣಿಲಿಕ್ಕೆ ಬಾರದವನಿಗೆ ನೆಲ ಡೊಂಕು ಅನ್ನುವ ಸ್ಥಿತಿ ರಾಜ್ಯ ಸರ್ಕಾರದ್ದು: ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವ್ಯಂಗ್ಯ

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ರಾಜ್ಯಕ್ಕೆ ಅನುದಾನ ನೀಡವಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಆರ್ಥಿಕ ನಿರ್ವಹಣೆ ಮಾಡಲಾಗುತ್ತಿಲ್ಲ. ಘೋಷಣೆ ಮಾಡಿದ ಗ್ಯಾರಂಟಿಗಳು ಅರ್ಧಂಬರ್ಧ ಜಾರಿಯಾಗಿವೆ ಎಂದು ಕಿಡಿಕಾರಿದ್ದಾರೆ. ಅನುದಾನ ಹೆಚ್ಚಳ ಆಗಿರುವುದಕ್ಕೆ ಸಿದ್ದರಾಮಯ್ಯ ಧರಣಿ ಮಾಡುತ್ತಿದ್ದಾರೆ ಎಂದಿದ್ದಾರೆ.

ಕುಣಿಲಿಕ್ಕೆ ಬಾರದವನಿಗೆ ನೆಲ ಡೊಂಕು ಅನ್ನುವ ಸ್ಥಿತಿ ರಾಜ್ಯ ಸರ್ಕಾರದ್ದು: ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವ್ಯಂಗ್ಯ
ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Feb 03, 2024 | 3:44 PM

ಹುಬ್ಬಳ್ಳಿ, ಫೆಬ್ರುವರಿ 3: ಕುಣಿಲಿಕ್ಕೆ ಬಾರದವನಿಗೆ ನೆಲ ಡೊಂಕು ಅನ್ನುವ ಸ್ಥಿತಿ ರಾಜ್ಯ ಸರ್ಕಾರದ್ದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ (Pralhad Joshi) ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಅನುದಾನ ನೀಡವಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿಲ್ಲ. ಯುಪಿಎ ಸರ್ಕಾರ ಇದ್ದಾಗ ಕೇವಲ 81 ಸಾವಿರ ಕೋಟಿ ರೂ. ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ 2.60 ಲಕ್ಷ ಕೋಟಿ ರೂ. ಅನುದಾನ ಕೊಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಆರ್ಥಿಕ ನಿರ್ವಹಣೆ ಮಾಡಲಾಗುತ್ತಿಲ್ಲ. ಘೋಷಣೆ ಮಾಡಿದ ಗ್ಯಾರಂಟಿಗಳು ಅರ್ಧಂಬರ್ಧ ಜಾರಿಯಾಗಿವೆ ಎಂದು ಕಿಡಿಕಾರಿದ್ದಾರೆ.

ಅನುದಾನ ಹೆಚ್ಚಳವಾಗಿರುವುದಕ್ಕೆ ಸಿದ್ದರಾಮಯ್ಯ ಧರಣಿ ಮಾಡುತ್ತಿದ್ದಾರೆ

ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಅಂತ ಕಾಂಗ್ರೆಸ್ ಶಾಸಕರು ಆರೋಪ ಮಾಡಿದ್ದಾರೆ. ಕಾಂಗ್ರೆಸ್​ನವರು ದೆಹಲಿಯಲ್ಲಿ ಯಾವ ಕಾರಣಕ್ಕೆ ಧರಣಿ ಮಾಡುತ್ತಿದ್ದಾರೆ? 2004 – 2014 ರವರಗೆ 10 ವರ್ಷದಲ್ಲಿ ನೀಡಿದ ಅನುದಾನ 60 ಸಾವಿರ ಕೋಟಿ ರೂ. ಕಳೆದ 10 ವರ್ಷದಲ್ಲಿ ಪ್ರಧಾನಿ ಮೋದಿ ನೀಡಿದ ಅನುದಾನ 2.36 ಲಕ್ಷ ಕೋಟಿ ರೂ. ಅನುದಾನ ಹಂಚಿಕೆಯಲ್ಲಿ ಪ್ರತಿಶತ 243 ಹೆಚ್ಚಾಗಿದೆ. ಅನುದಾನ ಹೆಚ್ಚಳ ಆಗಿರುವುದಕ್ಕೆ ಸಿದ್ದರಾಮಯ್ಯ ಧರಣಿ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಮೋದಿಗೆ ಮತ ಹಾಕಿದರೆ ಮಾತ್ರ ದೇಶ ನಂಬರ್ ಒನ್ ಆಗಲಿದೆ; ಗಾಳಿಪಟ ಉತ್ಸವದಲ್ಲಿ ಮೋದಿಯವರನ್ನು ಹಾಡಿ ಹೊಗಳಿದ ಪ್ರಹ್ಲಾದ್ ಜೋಶಿ

ನಿಮಗೆ ಸರಿಯಾಗಿ ಸರ್ಕಾರ ನಡೆಸಲಾಗುತ್ತಿಲ್ಲ. ನಿಮ್ಮ ಶಾಸಕರೇ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ನೀವು ಭ್ರಷ್ಟಾಚಾರ ಮಾಡಿ ಹತ್ತು ಹಲವು ಹಗರಣ ಮಾಡಿದ್ದೀರಿ. ಯಾವುದೇ ರೀತಿಯ ಆರ್ಥಿಕ ಶಿಸ್ತನ್ನು ಪಾಲನೆ ಮಾಡಿದೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದೀರಿ. ಅವರಲ್ಲಿರುವ ಒಳಜಗಳ ಡೈವರ್ಟ್ ಮಾಡಲು ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ.

ಐದು ವರ್ಷದಲ್ಲಿ 62 ಸಾವಿರ ಕೋಟಿ ರೂ. ಅನ್ಯಾಯ ಆಗಿದೆ ಎಂಬ ಡಿಸಿಎಂ ಡಿಕೆ ಶಿವಕುಮಾರ್​ ದಾಖಲೆ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಅದೇನು ದಾಖಲೆ ಇದೆಯೊ ಡಿಕೆ ಶಿವಕುಮಾರ್​ ತೋರಿಸಲಿ. ಆ ದಾಖಲೆಯಲ್ಲಿ ಏನಿದೆ ಅಂತ ಅವರಿಗೂ ಅರ್ಥ ಆಗಿಲ್ಲ, ಬೇರೆಯವರಿಗೂ ಅರ್ಥವಾಗಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಅಡ್ವಾಣಿಗೆ ಕೊಟ್ಟಿದ್ದಕ್ಕೆ ತಕರಾರಿಲ್ಲ; ನಮ್ಮ ಸಿದ್ಧಗಂಗಾ ಶ್ರೀಗಳಿಗೂ ಭಾರತ ರತ್ನ ಕೊಡಿ – ಡಿಕೆ ಶಿವಕುಮಾರ್ ಆಗ್ರಹ

ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸದಿದ್ದರೆ ಗ್ಯಾರಂಟಿ ವಾಪಸ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಮೊದಲು ಅವರು ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೆ ತರಲಿ. ನಂತರ ಅದನ್ನು ವಾಪಸ್ ಪಡೆಯುವ ವಿಚಾರ ಮಾಡಲಿ ಎಂದು ಕಿಡಿಕಾರಿದ್ದಾರೆ.

ಅಡ್ವಾಣಿ ಅವರಿಗೆ ಭಾರತ ರತ್ನ‌ ಸಿಕ್ಕಿದ್ದು ಖುಷಿ ವಿಚಾರ

ಎಲ್​​ಕೆ ಅಡ್ವಾಣಿ ಅವರಿಗೆ ಭಾರತ ರತ್ನ‌ ಸಿಕ್ಕಿದ್ದು ಖುಷಿ ವಿಚಾರ. ಅವರು ಅತ್ಯಂತ ಶುದ್ಧ ರಾಜಕಾರಣ ಮಾಡಿದ್ದಾರೆ. ಅಡ್ವಾಣಿ ನಮಗೆಲ್ಲ ಆದರ್ಶ. ದೇಶವನ್ನು ಅವರಷ್ಟು ಸುತ್ತಿದವರು ಯಾರೂ ಇಲ್ಲ. ರಾಮಮಂದಿರ ನಿರ್ಮಾಣಕ್ಕೆ ಅವರದ್ದು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.