ಆನ್ಲೈನ್ ಗೇಮ್ನಲ್ಲಿ 11 ಕೋಟಿ ಗೆದ್ದಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಅಪಹರಣ ಸುಖಾಂತ್ಯ; 1 ಕೋಟಿಗೆ ಬೇಡಿಕೆ, 7 ಮಂದಿ ಅರೆಸ್ಟ್
online casino game: ಆನ್ಲೈನ್ ಕ್ಯಾಸಿನೊ ಗೇಮ್ನಲ್ಲಿ 11 ಕೋಟಿ ಹಣ ಗೆದ್ದಿದ್ದ ಮುಲ್ಲಾ ತಾನು ಹಣ ಸಂಪಾದಿಸಿದ್ದರ ಬಗ್ಗೆ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಹುಬ್ಬಳ್ಳಿಯ ಮಂಟೂರು ರಸ್ತೆಯ ನಿವಾಸಿ ಮುಲ್ಲಾ ಕೈಗೆ ಹಣ ಬಂದಾಗ ಬೇಕಾಬಿಟ್ಟಿ ಖರ್ಚು ಮಾಡುತ್ತಿದ್ದ. ಆಗಸ್ಟ್ 6 ರಂದು ಮುಲ್ಲಾನನ್ನು ಅಪಹರಿಸಲಾಗಿತ್ತು.
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಗರೀಬ್ ನವಾಜ್ ಮುಲ್ಲಾ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯ (Hubballi engineering student) ಕಿಡ್ನ್ಯಾಪ್ ಪ್ರಕರಣ (Kidnap) ಸುಖಾಂತ್ಯಗೊಂಡಿದೆ. ಆನ್ಲೈನ್ ಕ್ಯಾಸಿನೊ ಗೇಮ್ನಲ್ಲಿ (online casino game) 11 ಕೋಟಿ ಹಣ ಗೆದ್ದಿದ್ದ ಮುಲ್ಲಾ ತಾನು ಹಣ ಸಂಪಾದಿಸಿದ್ದರ ಬಗ್ಗೆ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಹುಬ್ಬಳ್ಳಿಯ ಮಂಟೂರು ರಸ್ತೆಯ ನಿವಾಸಿ ಮುಲ್ಲಾ ಕೈಗೆ ಹಣ ಬಂದಾಗ ಬೇಕಾಬಿಟ್ಟಿ ಖರ್ಚು ಮಾಡುತ್ತಿದ್ದ. ಆಗಸ್ಟ್ 6 ರಂದು ಮುಲ್ಲಾನನ್ನು ಅಪಹರಿಸಲಾಗಿತ್ತು. ಅದರಲ್ಲಿ1 ಕೋಟಿ ರೂಪಾಯಿ ಕೊಡುವಂತೆ ಯುವಕನ ತಂದೆಗೆ ಕರೆ ಮಾಡಿ ಬೇಡಿಕೆ ಇಟ್ಟಿದ್ದ 7 ಅಪಹರಣಕಾರರನ್ನು ಪೊಲೀಸರು ಬಂಧಿಸಿ, ಮುಲ್ಲಾನನ್ನು ಸುರಕ್ಷಿತವಾಗಿ ಬಿಟ್ಟು ಕಳಿಸಿದ್ದಾರೆ. ಮೊಹ್ಮದ್ ಆರಿಫ್, ಇಮ್ರಾನ್, ತೌಸಿಫ್ ಮತ್ತಿ, ಹುಸೇನ್ ಸಾಬ್, ಅಬ್ದುಲ್ ಕರೀಂ, ಇಮ್ರಾನ್ ಮದರಲಿ, ಮೊಹ್ಮದ್ ರಜಾಕ್ ಸೆರೆ ಸಿಕ್ಕ ಪಾತಕಿಗಳು.
ಈ ಏಳು ಆರೋಪಿಗಳು ಗರೀಬ್ ನವಾಜ್ ಮುಲ್ಲಾನನ್ನು ಆಕ್ಟೋಬರ್ 6ರಂದು ಗೋಕುಲ ರಸ್ತೆಯ ಡೆಕಥ್ಲಾನ್ ಬಳಿ ಅಪಹರಿಸಿದ್ದರು. ಪೋಷಕರಿಗೆ ಕರೆ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲು 1 ಕೋಟಿ, ಬಳಿಕ 15 ಲಕ್ಷವಾದರೂ ನೀಡುವಂತೆ ಡಿಮ್ಯಾಂಡ್ ಮಾಡಿದ್ದರಂತೆ. ಪ್ರಕರಣ ಪೊಲೀಸರ ಕಿವಿಗೆ ಬಿದ್ದಾಗ ಪೊಲೀಸರು ಮೊಬೈಲ್ ಕರೆಗಳಿಗೆ ಕಿವಿಗೊಟ್ಟಿದ್ದಾರೆ. ಕೊನೆಗೆ ಮೊಬೈಲ್ ಜಾಡು ಹಿಡಿದು ಪೊಲೀಸರು ಬೆಳಗಾವಿ ಜಿಲ್ಲೆಯ ಕಿತ್ತೂರು ಬಳಿ ಅಷ್ಟೂ ಆರೋಪಿಗಳನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಮಿಷನರ್ ಲಾಭೂರಾಮ್ ನೇತೃತ್ವದಲ್ಲಿ (Hubballi Police) ಕಾರ್ಯಚರಣೆ ನಡೆದು, ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು.
Published On - 2:51 pm, Wed, 10 August 22