Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ: ಮತದಾನ ಮಾಡಿದವರಿಗೆ ರಿಯಾತಿ ದರದಲ್ಲಿ ಉಪಾಹಾರ

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿದೆ. ಅಂದು ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಬೀದಿ ಬದಿ ಹೊಟೇಲ್​ ವ್ಯಪಾರಿ ರಿಯಾತಿ ದರದಲ್ಲಿ ಉಪಾಹಾರ ನೀಡಲು ನಿರ್ಧರಿಸಿದ್ದಾರೆ. ಹುಬ್ಬಳ್ಳಿಯ ದುರ್ಗದಬೈಲ್ ಸರ್ಕಲ್‌ನ ಇಡ್ಲಿ ಮಾರಾಟಗಾರ ಭಾಸ್ಕರ್ ಡೋಂಗ್ರೆ ಅವರು ಮೇ 7 ರಂದು ಮತ ಚಲಾಯಿಸುವವರಿಗೆ ಕೇವಲ 5 ರೂಪಾಯಿಗೆ ಇಡ್ಲಿ ನೀಡುವುದಾಗಿ ಘೋಷಿಸಿದ್ದಾರೆ.

ಹುಬ್ಬಳ್ಳಿ: ಮತದಾನ ಮಾಡಿದವರಿಗೆ ರಿಯಾತಿ ದರದಲ್ಲಿ ಉಪಾಹಾರ
ಮತದಾನ ಮಾಡಿದವರಿಗೆ ರಿಯಾತಿ ದರದಲ್ಲಿ ಉಪಹಾರ
Follow us
ವಿವೇಕ ಬಿರಾದಾರ
|

Updated on:May 06, 2024 | 8:04 AM

ಹುಬ್ಬಳ್ಳಿ ಮೇ 06: ಲೋಕಸಭೆ ಚುನಾವಣೆಗೆ (Lok Sabha Election) ರಾಜ್ಯದ ಮೊದಲ ಹಂತದ ಮತದಾನ (Voting) ದಿನ ಬೆಂಗಳೂರಿನ (Bengaluru) ಹೊಟೇಲ್​​ಗಳು ಮತದಾನ ಮಾಡಿದವರಿಗೆ ಉಚಿತ ಆಹಾರ ನೀಡಿದ್ದವು. ಇದೀಗ ರಾಜ್ಯದ ಎರಡನೇ ಹಂತದ ಮತದಾನ ಮೇ 7 ರಂದು ನಡೆಯಲಿದೆ. ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಅಂದು ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯ (Hubballi) ಬೀದಿ ಬದಿ ಹೊಟೇಲ್​ ವ್ಯಪಾರಿ ರಿಯಾತಿ ದರದಲ್ಲಿ ಉಪಾಹಾರ ನೀಡಲು ನಿರ್ಧರಿಸಿದ್ದಾರೆ. ಹುಬ್ಬಳ್ಳಿಯ ದುರ್ಗದಬೈಲ್ ಸರ್ಕಲ್‌ನ (Durgadbail Circle) ಇಡ್ಲಿ ಮಾರಾಟಗಾರ ಭಾಸ್ಕರ್ ಡೋಂಗ್ರೆ ಅವರು ಮೇ 7 ರಂದು ಮತ ಚಲಾಯಿಸುವವರಿಗೆ ಕೇವಲ 5 ರೂಪಾಯಿಗೆ ಇಡ್ಲಿ ನೀಡುವುದಾಗಿ ಘೋಷಿಸಿದ್ದಾರೆ.

ರಿಯಾತಿ ದರದಲ್ಲಿ ಉಪಹಾರ ಸೇವಿಸಬೇಕಿದ್ದರೇ ಗ್ರಾಹಕರು ತಮ್ಮ ಶಾಯಿ ಹಚ್ಚಿದ ಬೆರಳನ್ನು ತೋರಿಸಬೇಕು. ರಿಯಾತಿ ದರದಲ್ಲಿ ಇಡ್ಲಿ ನೀಡುವ ಮೂಲಕ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳುವುದು ಭಾಸ್ಕರ್ ಡೋಂಗ್ರೆ ಅವರ ಉದ್ದೇಶವಾಗಿದೆ.

ಈ ಬಗ್ಗೆ ಹೊಟೇಲ್​ ಮಾಲಿಕ ಭಾಸ್ಕರ್ ಡೋಂಗ್ರೆ ಮಾತನಾಡಿ, ನಗರ ಪ್ರದೇಶಗಳಲ್ಲಿನ ಕಳಪೆ ಮತದಾವನ್ನು ನೋಡಿದಾಗ, ನಾನು ಒಂದು ಇಡ್ಲಿಯನ್ನು 5 ರೂ.ಗೆ ಮಾರಾಟ ಮಾಡಲು ಯೋಜಿಸಿದೆ. ಇದು ಸಾಮಾನ್ಯ ಬೆಲೆಗಿಂತ ಅರ್ಧದಷ್ಟಾಗಿದೆ. ಪ್ರಸ್ತುತ, ನಾನು ಸುಮಾರು 500 ಮತದಾರರಿಗೆ ರಿಯಾತಿ ದರದಲ್ಲಿ ಇಡ್ಲಿ ನೀಡಲು ನಿರ್ಧರಿಸಿದ್ದೇನೆ. ಈ ಸಂಖ್ಯೆ ಮೀರಿದರೂ ನಾನು ಸಿದ್ಧನಿದ್ದೇನೆ. ನಾನು ಇದನ್ನು ಮೊದಲ ಬಾರಿಗೆ ಮಾಡುತ್ತಿರುವುದರಿಂದ, ಮತ ಚಲಾಯಿಸಿದ ನಂತರ ಎಷ್ಟು ಜನರು ನನ್ನ ಹೊಟೇಲ್​ ಭೇಟಿ ನೀಡುತ್ತಾರೆ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ 2024: ಬಹಿರಂಗ ಪ್ರಚಾರಕ್ಕೆ ಬ್ರೇಕ್, ಮೇ 7ಕ್ಕೆ 14 ಕ್ಷೇತ್ರಗಳಿಗೆ ಮತದಾನ

ಹೊಟೇಲ್​ ಬೆಳಿಗ್ಗೆ 7 ಗಂಟೆಗೆ ತೆರೆಯುತ್ತೇನೆ. ನಾನು ಇಡ್ಲಿಗಳನ್ನು ಬೆಳಿಗ್ಗೆ 9 ಗಂಟೆಯವರೆಗೆ ಮಾರಾಟ ಮಾಡಲು ಯೋಜಿಸಿದೆ. ಅಗತ್ಯವಿದ್ದರೆ, ನಾನು ಸಮಯವನ್ನು ವಿಸ್ತರಿಸುತ್ತೇನೆ. ರಿಯಾತಿ ದರದಲ್ಲಿ ಇಡ್ಲಿ ಪಡೆಯಲು ಮತದಾರರು ತಮ್ಮ ಶಾಯಿಯ ಬೆರಳನ್ನು ತೋರಿಸಬೇಕು. ಯಾವುದೇ ಪಾರ್ಸೆಲ್ ಸೇವೆಯನ್ನು ಒದಗಿಸುವುದಿಲ್ಲ ಹೇಳಿದರು.

ಇದೊಂದು ಉತ್ತಮ ಉಪಕ್ರಮ ಎಂದು ಸಾಮಾಜಿಕ ಹೋರಾಟಗಾರ ವಾದಿರಾಜ ಕುಲಕರ್ಣಿ ಹೇಳಿದರು. “ಜನರು ಮತದಾನಕ್ಕಾಗಿ ಮನೆಯಿಂದ ಹೊರಬಂದು ತಮ್ಮ ಹಕ್ಕು ಚಲಾಯಿಸಬೇಕು” ಎಂದು ಅವರು ಮನವಿ ಮಾಡಿದರು.

ಲೋಕಸಭೆ ಚುನಾವಣೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:52 am, Mon, 6 May 24

ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ