ಗೋವಾ ಪೊಲೀಸ್​ನನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು, ವಿಡಿಯೋ ನೋಡಿ

ಹಳೇ ಹುಬ್ಬಳ್ಳಿ ಪೊಲೀಸರು ಗೋವಾ ಕ್ರೈಂ ಬ್ರಾಂಚ್‌ನ ಅಮಿತ್ ನಾಯಕ್ ಎಂಬ ಪೊಲೀಸ್ ಅಧಿಕಾರಿಯನ್ನು ಬಂಧಿಸಿದ್ದಾರೆ. ನಟೋರಿಯಸ್ ಆರೋಪಿ ಸುಲೇಮಾನ್ ಸಿದ್ದಿಕಿ ಜೊತೆ ಪರಾರಿಯಾಗಿದ್ದ ನಾಯಕ್, ಹುಬ್ಬಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ. ಸಿದ್ದಿಕಿ ಹಲವು ರಾಜ್ಯಗಳಲ್ಲಿ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ. ಪೊಲೀಸ್ ಕಸ್ಟಡಿಯಿಂದ ಸಿದ್ದಿಕಿ ತಪ್ಪಿಸಿಕೊಂಡಾಗ ನಾಯಕ್ ಕೂಡ ಆತನೊಂದಿಗೆ ಪರಾರಿಯಾಗಿದ್ದ.

Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ವಿವೇಕ ಬಿರಾದಾರ

Updated on:Dec 14, 2024 | 11:47 AM

ಹುಬ್ಬಳ್ಳಿ, ಡಿಸೆಂಬರ್​ 14: ನಟೋರಿಯಸ್ ಕ್ರಿಮಿನಲ್ ಜೊತೆಗೆ ಬಂದಿದ್ದ ಗೋವಾ (Goa) ಪೊಲೀಸ್​ನನ್ನು ಹಳೇ ಹುಬ್ಬಳ್ಳಿಯ ಪೊಲೀಸರು (Old Hubballi Police) ಬಂಧಿಸಿದ್ದಾರೆ. ಬಂಧಿತ ಅಮಿತ ನಾಯಕ್ ಗೋವಾ ಪೊಲೀಸ್ ಕ್ರೈಂ ಬ್ರಾಂಚ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆರೋಪಿ ಸುಲೇಮಾನ್ ಸಿದ್ದಿಕಿ ಹೈದರಾಬಾದ್, ಪುಣೆ, ದೆಹಲಿ, ಗೋವಾ ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದಾನೆ. ಈತನ ವಿರುದ್ಧ ಕೊಲೆ, ಕೊಲೆ‌ ಯತ್ನ, ಬೆದರಿಕೆ, ವಂಚನೆ, ಭೂ ಮಾಫಿಯಾ ದಂಧೆ, ಸಾರ್ವಜನಿಕರನ್ನು ಹೆದರಿಸಿ ದುಡ್ಡು ಕೀಳುವುದು, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳಿವೆ.

ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್​ನಲ್ಲೂ ಗರ್ಭಿಣಿಯರು, ಶಿಶುಗಳ ಮರಣ ಬೆಳಕಿಗೆ!

ಈ ಹಿನ್ನೆಲೆಯಲ್ಲಿ ಹತ್ತಕ್ಕೂ ಹೆಚ್ಚು ರಾಜ್ಯಗಳಿಗೆ ಬೇಕಾಗಿರುವ ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿಯನ್ನು ಬಂಧಿಸಿ ಗೋವಾ ಪೊಲೀಸರು ಕಂಬಿ ಹಿಂದೆ ತಳ್ಳಿದ್ದರು. ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿ ಕಾಯಲು ಅಮಿತ್ ನಾಯಕನನ್ನ ನೇಮಕ ಮಾಡಲಾಗಿತ್ತು.

ಆದರೆ, ಸುಲೇಮಾನ್ ಸಿದ್ದಿಕಿಯನ್ನು ಶುಕ್ರವಾರ (ಡಿ.13) ಮಧ್ಯರಾತ್ರಿ ಕಸ್ಟಡಿಯಿಂದ ಬಿಟ್ಟಿದ್ದಲ್ಲದೇ, ಆತನೊಂದಿಗೆಯೇ ತಾನು ಪರಾರಿಯಾಗಿದ್ದನು. ನಟೋರಿಯಸ್ ಕ್ರಿಮಿನಲ್‌‌ ಜೊತೆಗೆ ಪೊಲೀಸ್ ಠಾಣೆಯಿಂದ ಎಸ್ಕೇಪ್ ಅಗಿದ್ದ ಅಮಿತ್ ನಾಯಕ ಗೋವಾದಿಂದ ತಲೆ‌ ಮರೆಸಿಕೊಳ್ಳಲು ಹುಬ್ಬಳ್ಳಿಗೆ ಬಂದಿದ್ದನು. ಇಲ್ಲಿ ಹಳೇ ಹುಬ್ಬಳ್ಳಿಯ ಪೊಲೀಸರ ಕೈವಶವಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:04 am, Sat, 14 December 24