ಹುಬ್ಬಳ್ಳಿ: 2 ಎಕರೆ ಆಸ್ತಿಗಾಗಿ ತಂದೆ, ಮಲತಾಯಿ ಕೊಚ್ಚಿ ಕೊಲೆಗೈದ ಪುತ್ರ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 10, 2025 | 5:22 PM

ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದಲ್ಲಿ ಭೀಕರ ಘಟನೆ ನಡೆದಿದೆ. ಎರಡು ಎಕರೆ ಜಮೀನಿನ ವಿವಾದದಿಂದಾಗಿ ತನ್ನ ತಂದೆ, ಮಲತಾಯಿಯನ್ನು ಪುತ್ರ ಕೊಚ್ಚಿ ಕೊಲೆ ಮಾಡಿದ್ದಾನೆ. ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಳ್ಳುವಂತೆ ಒತ್ತಾಯಿಸಿದ್ದರಿಂದ ಈ ಕೃತ್ಯ ನಡೆದಿದೆ. ಪರಾರಿಯಾಗಿರುವ ಗಂಗಾಧರಪ್ಪನನ್ನು ಪೊಲೀಸರು ಹುಡುಕುತ್ತಿದ್ದಾರೆ.

ಹುಬ್ಬಳ್ಳಿ: 2 ಎಕರೆ ಆಸ್ತಿಗಾಗಿ ತಂದೆ, ಮಲತಾಯಿ ಕೊಚ್ಚಿ ಕೊಲೆಗೈದ ಪುತ್ರ
ಹುಬ್ಬಳ್ಳಿ: 2 ಎಕರೆ ಆಸ್ತಿಗಾಗಿ ತಂದೆ, ಮಲತಾಯಿ ಕೊಚ್ಚಿ ಕೊಲೆಗೈದ ಪುತ್ರ
Follow us on

ಹುಬ್ಬಳ್ಳಿ, ಜನವರಿ 10: 2 ಎಕರೆ ಆಸ್ತಿಗಾಗಿ ತಂದೆ ಮತ್ತು ಮಲತಾಯಿಯನ್ನ ಕೊಚ್ಚಿ ಪುತ್ರ ಕೊಲೆಗೈದಿರುವಂತಹ (killed) ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ. ತಂದೆ ಅಶೋಕಪ್ಪ, ಮಲತಾಯಿ ಶಾರದಮ್ಮರನ್ನ ಪುತ್ರ ಗಂಗಾಧರಪ್ಪ ಕೊಂದು ಪರಾರಿ ಆಗಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಗಂಗಾಧರಪ್ಪ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

2 ಎಕರೆ ಜಮೀನನ್ನು ತನ್ನ ಹೆಸರಿಗೆ ಬರೆದುಕೊಡು ಎಂದು ಪುತ್ರ ಪೀಡಿಸುತ್ತಿದ್ದ. ಈ ವಿಚಾರವಾಗಿ ಅಪ್ಪ, ಮಗನ ನಡುವೆ ಜಗಳವಾಗಿದೆ. ಕುಡಿದು ಬಂದು ಇಂದು ಸಹ ಗಲಾಟೆ ಮಾಡಿದ್ದಾರೆ. ಈ ವೇಳೆ ಆಸ್ತಿ ಬರೆದುಕೊಡಲು ನಿರಾಕರಿಸಿದ್ದಕ್ಕೆ ಕೊಚ್ಚಿ ಕೊಲೆಗೈದ್ದಾರೆ.

ಇದನ್ನೂ ಓದಿ: ಸಾಲ ಮರುಪಾವತಿಸದ ಹಿನ್ನಲೆ ಹಲ್ಲೆ ಆರೋಪ: ಮಾಜಿ ಶಾಸಕ ಚರಂತಿಮಠ ಸೇರಿ ನಾಲ್ವರ ವಿರುದ್ಧ ದೂರು

ಘಟನೆ ನಂತರ ಮನೆ ಬಳಿ ನೂರಾರು ಜನ ಜಮಾವಣೆಯಾಗಿದ್ದರು. ಗಂಗಾಧರಪ್ಪನ ವಿರುದ್ಧ ಕುಸುಗಲ್ ಗ್ರಾಮದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಮಕ್ಕಳು ಯಾರಿಗೂ ಬೇಡ, ಸುಟ್ಟುಹಾಕಬೇಕೆಂದು ಆಗ್ರಹಿಸಿದ್ದಾರೆ. ದುಷ್ಕೃತ್ಯವನ್ನು ನೋಡಿದರೆ ಗಂಡುಮಕ್ಕಳೇ ಬೇಡವೆಂದು ಅನಿಸುತ್ತೆ. ಆರೋಪಿ ಗಂಗಾಧರಪ್ಪನನ್ನು ಸುಟ್ಟುಹಾಕಿ ಎಂದು ಹುಬ್ಬಳ್ಳಿ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಹಿಳೆಯರು ಒತ್ತಾಯಿಸಿದ್ದಾರೆ.

ಪರಾರಿಯಾಗಿರುವ ಗಂಗಾಧರಪ್ಪನ ಪತ್ತೆಗಾಗಿ ವಿಶೇಷ ತಂಡ ರಚನೆ

ಹುಬ್ಬಳ್ಳಿಯಲ್ಲಿ ಧಾರವಾಡ ಎಸ್​ಪಿ ಗೋಪಾಲ ಬ್ಯಾಕೋಡ್​ ಪ್ರತಿಕ್ರಿಯಿಸಿದ್ದು, ಕಬ್ಬಿಣದ ರಾಡ್​ನಿಂದ ಹೊಡೆದು ತಂದೆ, ಮಲತಾಯಿ ಕೊಂದಿದ್ದಾನೆ. ಆಸ್ತಿ ಕಲಹ ಹಿನ್ನೆಲೆಯಲ್ಲಿ ಕೊಲೆಗೈದು ಪುತ್ರ ಗಂಗಾಧರಪ್ಪ ಪರಾರಿ ಆಗಿದ್ದಾನೆ. ಹತ್ಯೆಯಾದ ಅಶೋಕ ಎಂಬುವರ ಮೊದಲ ಪತ್ನಿ ಶಾಂತಮ್ಮ 10 ವರ್ಷಗಳ ಹಿಂದೆ ಮೃತಪಟ್ಟಿದ್ದರು.

ಅಶೋಕನ ಮೊದಲ ಪತ್ನಿ ಶಾಂತಮ್ಮ ಪುತ್ರ ಈ ಗಂಗಾಧರಪ್ಪ. ಗಂಗಾಧರಪ್ಪನಿಂದ ತಂದೆ ಅಶೋಕ, ಮಲತಾಯಿ ಶಾರದಾ ಕೊಲೆ ಮಾಡಲಾಗಿದೆ. ಆರೋಪಿ ಗಂಗಾಧರಪ್ಪ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ: ಇಬ್ಬರು ಅಯ್ಯಪ್ಪ ಭಕ್ತರು ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿ ಇಬ್ಬರು ಅಯ್ಯಪ್ಪ ಭಕ್ತರು ಸಾವನ್ನಪ್ಪಿರುವಂತಹ ಘಟನೆ ತಮಿಳು‌ನಾಡಿನ ಕೊಯಮತ್ತೂರು ಜಿಲ್ಲೆಯ ಬಾಲ್ಕರನ್ ರಸ್ತೆಯಲ್ಲಿ ನಡೆದಿದೆ. ಮೂವರಿಗೆ ಗಂಭೀರ ಗಾಯ, ಕೊಯಮತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ತ್ರಿಬಲ್ ಮರ್ಡರ್: ಇಬ್ಬರು ಮಕ್ಕಳು, ಹೆಂಡ್ತಿಯನ್ನು ಕೊಂದ ಹೋಂ ಗಾರ್ಡ್‌!

ಅಯ್ಯಪ್ಪ ಭಕ್ತರಾದ ನಾಗಣ್ಣ(66), ವೆಂಕಟಾದ್ರಿ(70) ದುರ್ಮರಣ. ಮಹೇಶ್‌ ಕುಮಾರ್, ಸ್ವಾಮಿ, ದೊರೆಸ್ವಾಮಿಗೆ ಗಂಭೀರ ಗಾಯಗಳಾಗಿವೆ. ಕೊಯಮತ್ತೂರು ಆಸ್ಪತ್ರೆಯಲ್ಲಿ ಮೂವರಿಗೂ ಚಿಕಿತ್ಸೆ ಮುಂದುವರೆದಿದೆ. ಶಬರಿಮಲೆಯಿಂದ ಕೊಳ್ಳೇಗಾಲಕ್ಕೆ ವಾಪಸ್​ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:48 pm, Fri, 10 January 25