’ಜೀವ ರಕ್ಷಕ ಕನ್ನಡಕ’ ಆವಿಷ್ಕರಿಸಿದ ಹುಬ್ಬಳ್ಳಿ ವಿದ್ಯಾರ್ಥಿನಿ; ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು, ಇಲ್ಲಿದೆ ವಿವರ

ಅವಳೀಗ ಪಿಯುಸಿ ವಿದ್ಯಾರ್ಥಿನಿ. 9 ನೇ ತರಗತಿಯಲ್ಲಿ ಇದ್ದಾಗ ಕಂಡು ಹಿಡಿದ ಸ್ಪೆಕ್ಟ್ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೇವಲ 400 ರಿಂದ 450 ಖರ್ಚಾಗುವ ಸ್ಪೆಕ್ಟ್ ( ಕನ್ನಡಕ) ಹಲವಾರು ಜನರ ಪ್ರಾಣ ಉಳಿಸಲು ಸಹಾಯ ಆಗತ್ತೆ. ಒಂದು ಅಪಘಾತದಿಂದ ಸ್ಪೂರ್ತಿ ಪಡೆದ ಅವಳು, ಇದೀಗ ಜೀವ ಉಳಿಸುವ ಮಹತ್ಕಾರ್ಯಕ್ಕೆ ಮುಂದಾಗಿದ್ದಾಳೆ. ಆ ವಿದ್ಯಾರ್ಥಿ ಕಂಡು ಹಿಡಿದ ಕನ್ನಡಕ ದೆಹಲಿಯಲ್ಲಿ ಸದ್ದು ಮಾಡಿದೆ. ಏನಿದು ಜೀವ ರಕ್ಷಕ ಕನ್ನಡಕ ಅಂತೀರಾ? ಇಲ್ಲಿದೆ ನೋಡಿ.

’ಜೀವ ರಕ್ಷಕ ಕನ್ನಡಕ’ ಆವಿಷ್ಕರಿಸಿದ ಹುಬ್ಬಳ್ಳಿ ವಿದ್ಯಾರ್ಥಿನಿ; ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು, ಇಲ್ಲಿದೆ ವಿವರ
ಜೀವ ರಕ್ಷಕ ಕನ್ನಡಕ ಸಂಶೋಧನೆ ಮಾಡಿದ ಹುಬ್ಬಳ್ಳಿಯ ವಿದ್ಯಾರ್ಥಿನಿ ರಬೀಯಾ ಫಾರೂಕಿ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 18, 2023 | 10:52 PM

ಹುಬ್ಬಳ್ಳಿ, ಅ.18: ಹುಬ್ಬಳ್ಳಿ(Hubballi) ಯ ತಬೀಬ್ ಲ್ಯಾಂಡ್ ನಿವಾಸಿ ರಬೀಯಾ ಫಾರೂಕಿ ಅವರು ಸಂಶೋಧನೆ ಮಾಡಿರುವ ಕನ್ನಡಕ‌(Eye Glass)ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಹೌದು, ರಬೀಯಾ ಅವರು ಜೀವ ರಕ್ಷಕ ಕನ್ನಡಕ‌‌ ಸಂಶೋಧನೆ ಮಾಡಿದ್ದು, ಡ್ರೈವಿಂಗ್ ವೇಳೆ ಚಾಲಕ ತೂಕಡಿಸಿ ಅದೆಷ್ಟೋ ಜೀವಗಳು ಬಲಿಯಾಗಿವೆ. ಇದನ್ನು ದೂರ ಮಾಡಲು ಜೀವ ರಕ್ಷಕ ಕನ್ನಡಕ ಕಂಡು ಹಿಡಿದಿದ್ದಾಳೆ. ಆ್ಯಂಟಿ ಸ್ಲಿಪ್ ಡ್ರೊಸೆನೆಸ್ ಪ್ರವೆಂಟರ್ ಕನ್ನಡಕ ಸಂಶೋಧನೆ ಮಾಡಿದ್ದಾಳೆ. ಪಾರದರ್ಶಕ ಕನ್ನಡಕಕ್ಕೆ ಚಾರ್ಜೇಬಲ್ ಬ್ಯಾಟರಿ , ಸಿಬ್ ಭಝರ್ ಹಾಗೂ ಐಆರ್ ಸೆನ್ಸಾರ್ ಅಳವಡಿಸಿದ್ದಾಳೆ. ವಾಹನ ಚಾಲನೆ ಮಾಡುವಾಗ ಆಕಸ್ಮಾತ್ ಕಣ್ಣು ಮುಚ್ಚಿದ್ರೆ,  ಕ್ಷಣಾರ್ಧದಲ್ಲಿ ನ್ಯಾನೋ ಅರ್ಡುನೋ ಭಝರ್ ರಿಂಗಣಿಸಿ ಚಾಲಕನನ್ನ ಎಚ್ಚರಿಸುತ್ತೆ. ರೂಬಿಯಾ ಅವರು ಕಂಡು ಹಿಡಿದ ಕನ್ನಡಕ ಇದೀಗ ದೆಹಲಿಯಲ್ಲಿ ನಡೆದ ಇನ್ಸ್ಪೈರ್ ಅವಾರ್ಡ್ ಪ್ರದರ್ಶನದಲ್ಲಿ ರಾಷ್ಟ್ರ‌ ಮಟ್ಟದ ಉತ್ತಮ ಮಾದರಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಇದಲ್ಲದೆ ರೂಬಿಯಾ ಕಂಡು ಹಿಡಿದ ಈ ಕನ್ನಡಕ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರದರ್ಶನಕ್ಕೂ ಆಯ್ಕೆಯಾಗಿದೆ.

ಇನ್ನು ಕುರಿತು ಮಾತನಾಡಿದ ಕನ್ನಡಕ ಸಂಶೋಧಕಿ‌ ರೂಬಿಯಾ ಅವರು ‘ ಈ ಕನ್ನಡಕವನ್ನು ಹುಬ್ಬಳ್ಳಿಯ ಕಾನ್ವೆಂಟ್ ಹೈಸ್ಕೂಲ್ ನಲ್ಲಿ 9 ನೇ ತರಗತಿ ಓದುತ್ತಿರುವಾಗ ಕಂಡು ಹಿಡದಿದ್ದು, ಅವರು ಸಣ್ಣವಳಿದ್ದಾಗ ಪ್ರವಾಸಕ್ಕೆಂದು‌ ಊಟಿಗೆ ತೆರಳಿರುವ ಸಮಯದಲ್ಲಿ ನಡೆದ ಅಪಘಾತದಲ್ಲಿ ಮಕ್ಕಳು ಬಲಿಯಾಗಿದ್ದರು. ಇದು ನನ್ನ ಮನಸಿಗೆ ಬಹಳ‌ ಘಾಸಿಯಾಗಿತ್ತು. ಹೀಗಾಗಿ‌ ನಿದ್ರೆ ಕಣ್ಣಲ್ಲಿ ಅಪಘಾತ ತಪ್ಪಿಸಬೇಕು ಎಂದು ಕನ್ನಡಕ ಸಂಶೋಧನೆ‌‌ ಮಾಡಿರುವುದಾಗಿ ಹೇಳಿದರು. ಜೊತೆಗೆ ರೂಬಿಯಾ ತಂದೆ ಅಬ್ದುಲ್ ಶಹೀದ್, ತಾಯಿ ಅನೀಜಾ ಮತ್ತು ಶಿಕ್ಷಕರು ಈ ಸಂಶೋಧನೆಗೆ ಸಾಥ್ ನೀಡಿದ್ದಾರೆ. ಇದೀಗ ಮಗಳು ಕಂಡು ಹಿಡಿದ ಕನ್ನಡಕ‌ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತಿರೋದು ಪೋಷಕರು ಹಾಗೂ ಶಿಕ್ಷಕರಿಗೆ ಖುಷಿಯಾಗಿದೆ. ರೂಬಿಯಾ ಮೊದಲಿನಿಂದಲೂ ಅಭ್ಯಾಸದಲ್ಲಿ ಮೊದಲಿದ್ದಾರೆ. ವಿಜ್ಞಾನದಲ್ಲಿ ರೂಬಿಯಾಗೆ ಬಹಳ‌ ಅಸಕ್ತಿ ಇರುವ ಕಾರಣಕ್ಕೆ ಕನ್ನಡಕ ಸಂಶೋಧನೆಗೆ ಮುಂದಾಗಿದ್ದರಂತೆ.

ಇದನ್ನೂ ಓದಿ:ಕೃಷಿ ವಿವಿಗಳು ಇರುವುದು ಕೃಷಿಮೇಳ ಮಾಡಿ ಜಾತ್ರೆ ಮಾಡಲು ಅಲ್ಲ; ಸಂಶೋಧನೆಗಳು, ಯಂತ್ರಗಳು ರೈತರ ಜಮೀನಿಗೆ ತಲುಪಬೇಕು: ಸಿಎಂ

ಈ ಕನ್ನಡಕಕ್ಕೆ ಕೇವಲ 400 ರಿಂದ 500 ಖರ್ಚು

ಇನ್ನು ರೂಬಿಯಾ ಅವರು ಕಂಡು ಹಿಡಿದ ಕನ್ನಡಕಕ್ಕೆ ಕೇವಲ 400 ರಿಂದ 500 ಖರ್ಚಾಗುತ್ತದೆ. ನಿದ್ರೆ ಮಂಪರಿನಲ್ಲಿ ಅಪಘಾತ ಆಗಿ ಅದೆಷ್ಟೊ ಜೀವಗಳು ಬಲಿಯಾಗಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ರೂಬಿಯಾ ಕಂಡು ಹಿಡಿದ ಈ ಕನ್ನಡಕ ಧರಿಸಿದ್ರೆ ಅನೇಕರ ಪ್ರಾಣ ಉಳಿಯೋದ್ರಲ್ಲಿ ಅನುಮಾನವೇ‌ ಇಲ್ಲ. ಒಂದು ಅಪಘಾತದಿಂದ ಘಾಸಿಯಾಗಿ ಇದೀಗ ಸಾವಿರಾರು ಜನರ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಿರುವ ರೂಬಿಯಾ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ