ಕಳೆದುಹೋಗಿದ್ದ ಬರೋಬ್ಬರಿ 1 ಕೋಟಿ ರೂ. ಮೌಲ್ಯದ 400 ಮೊಬೈಲ್ ಪತ್ತೆ ಮಾಡಿದ ಹುಬ್ಬಳ್ಳಿ ಧಾರವಾಡ ಪೊಲೀಸರು
ಅದು ರಾಜ್ಯದಲ್ಲಿಯೇ ಹೈ ವೋಲ್ಟೇಜ್ ಸಿಟಿ. ಎರಡನೇ ಅತಿದೊಡ್ಡ ಮಹಾನಗರ ಕೂಡ ಹೌದು, ಈ ನಗರದಲ್ಲಿ ಸ್ವಲ್ಪ ಯಾಮಾರಿದರೂ ಮೊಬೈಲ್ ಕೈ ತಪ್ಪುತ್ತಿತ್ತು. ಬಸ್ ಹತ್ತಿ ಇಳಿಯುವಷ್ಟರಲ್ಲಿ ಮೊಬೈಲ್ ಕಳ್ಳತನವಾಗುತ್ತಿತ್ತು. ಆದರೆ ಈಗ ಪೊಲೀಸ್ ಇಲಾಖೆಯ ಕಾರ್ಯದಿಂದ ಕಳೆದಿದ್ದ ಮೊಬೈಲ್ ಮಾಲೀಕರ ಕೈ ಸೇರುವಂತಾಗಿದೆ. ಅಷ್ಟಕ್ಕೂ ಒಂದು ಎರಡು ಮೊಬೈಲ್ ಅಲ್ಲ, ಬರೋಬ್ಬರಿ 1 ಕೋಟಿ ಮೌಲ್ಯದ 400 ಮೊಬೈಲ್ಗಳನ್ನ ಪೊಲೀಸರು ವಾಪಸ್ ಹಸ್ತಾಂತರ ಮಾಡಿದ್ದಾರೆ.
ಹುಬ್ಬಳ್ಳಿ: ಒಂದು ಕಡೆ ಒಂದೇ ತಿಂಗಳಲ್ಲಿ 400 ಮೊಬೈಲ್ ಫೋನ್ ಪತ್ತೆ ಮಾಡಿದ ಪೊಲೀಸರು(Police). ಮತ್ತೊಂದು ಕಡೆ ಮೊಬೈಲ್ ಕಳೆದುಕೊಂಡವರಿಗೆ ಹಿರಿಯ ಅಧಿಕಾರಿಗಳಿಂದ ಮೊಬೈಲ್ ಹಸ್ತಾಂತರ. ಇನ್ನೊಂದೆಡೆ ಮೊಬೈಲ್ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗಿಯಾದ ಹಿರಿಯ ಪೊಲೀಸ್ ಅಧಿಕಾರಿಗಳು. ಹೌದು ಒಂದು ತಿಂಗಳ ಅವಧಿಯಲ್ಲಿ ಹುಬ್ಬಳ್ಳಿ ಧಾರವಾಡ ಅವಳಿ ನಗರ ಪೊಲೀಸರು ಬರೋಬ್ಬರಿ 1 ಕೋಟಿ ರೂ ಮೌಲ್ಯದ 400 ಮೊಬೈಲ್ನ್ನು ಪತ್ತೆ ಮಾಡಿದ್ದಾರೆ. ಈ ಸ್ಪಂದನ ಮೂಲಕ ಕಳೆದಹೋದ 400 ಮೊಬೈಲ್ ಪತ್ತೆ ಮಾಡಿದ್ದಾರೆ. ಹೀಗಾಗಿಯೇ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸುಮ್ಮಖದಲ್ಲಿ ಹುಬ್ಬಳ್ಳಿಯ ಬಿವಿಬಿ ಕಾಲೇಜ್ನಲ್ಲಿ ಕಾರ್ಯಕ್ರಮ ಮಾಡಿ 400 ಜನರಿಗೆ ಮೊಬೈಲ್ ಹಸ್ತಾಂತರ ಮಾಡಿದ್ದಾರೆ.
ಈ ಸ್ವಂದನ ಆ್ಯಪ್ ಮೂಲಕ 400 ಮೊಬೈಲ್ಗಳ ಪತ್ತೆ
ಇನ್ನು ಸಾರ್ವಜನಿಕರ ಕಳೆದ ಹಾಗೂ ಕಳ್ಳತನ ಮಾಡಿದ ಮೊಬೈಲ್‌ಗಳನ್ನು ಪತ್ತೆ ಹಚ್ಚಲು ಹುಬ್ಬಳ್ಳಿ ಧಾರವಾಡ ನಗರ ಪೊಲೀಸರು ಆರಂಭಿಸಿದ ಇ–ಪೋರ್ಟ್ಲ್ ಎಂಬ ನೂತನ ಪ್ರಯೋಗ ಯಶಸ್ವಿಯಾಗಿದೆ. ಒಂದು ತಿಂಗಳ ಅವಧಿಯಲ್ಲಿ ಒಂದು ಕೋಟಿ ಮೌಲ್ಯದ ಮೊಬೈಲ್ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು ಮೊಬೈಲ್ ಕಳೆದವರು ಅನವಶ್ಯಕವಾಗಿ ಪೊಲೀಸ್ ಠಾಣೆಯ ಮಟ್ಟಿಲೇರಿ ದೂರ ನೀಡಬೇಕಿತ್ತು. ಇದರಿಂದ ಅವರ ಸಮಯ ವ್ಯರ್ಥವಾಗುತ್ತಿತ್ತು. ಪೊಲೀಸ್ ಬೇರೆ ಕೆಲಸದ ಒತ್ತಡದಲ್ಲಿ ಯಾವುದೇ ಕಳೆದು ಹೋದ ಮೊಬೈಲ್‌ಗಳು ಸಿಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಈಗ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವಿನೂತನ ಪ್ರಯೋಗದ ಮೂಲಕ ಮೊಬೈಲ್ ಕಾರ್ಯಾಚರಣೆ ನಡೆಸುತ್ತಿದೆ. ಈ ಸ್ವಂದನ ಎನ್ನುವ ಆ್ಯಪ್ ಮೂಲಕ ಕಳೆದ ಒಂದು ತಿಂಗಳ ಅವಧಿಯಲ್ಲಿ ವಿವಿಧ ಕಂಪನಿಯ ಸುಮಾರು 400 ಮೊಬೈಲ್ಗಳನ್ನ ಹುಬ್ಬಳ್ಳಿ ಧಾರವಾಡ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ:ಬಳ್ಳಾರಿ: ಖೈದಿಗಳ ಕೈಯಲ್ಲಿ ಮೊಬೈಲ್, ಜೈಲಿನಿಂದಲೇ ಕಾಲಿಂಗ್; ಏನಿದು ಕಥೆ?
ಸದ್ಯ ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಒಂದು ತಾಂತ್ರಿಕ ಕೊಠಡಿ ಆರಂಭಿಸಿದ್ದು, ಡಿಸಿಪಿ ಗೋಪಾಲ ಬ್ಯಾಕೋಡ ಅವರ ಮಾರ್ಗದರ್ಶನದಲ್ಲಿ ನಾಲ್ಕು ಜನರ ತಂಡ ಕಾರ್ಯನಿರ್ವಹಿಸುತ್ತಿದೆ. ಮೊಬೈಲ್ ಕಳೆದುಕೊಂಡ ಮಾಲೀಕರಿಗೆ ಮೊಬೈಲ್ ಹಸ್ತಾಂತರ ಕಾರ್ಯಕ್ರಮವನ್ನು ಹುಬ್ಬಳ್ಳಿ ವಿದ್ಯಾನಗರದ ಬಿವಿಬಿ ಕ್ಯಾಂಪಸ್ ಆವರಣದಲ್ಲಿ ಆಯೋಜಿಸಲಾಗಿದ್ದು, ರಾಜ್ಯ ಪೊಲೀಸ್ ಮಹಾನಿರ್ದೆಶಕ ಪ್ರವೀಣ ಸೂದ್ ನೇತೃತ್ವದಲ್ಲಿ ಹಸ್ತಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇನ್ನು 400 ಮೊಬೈಲ್ ಹಸ್ತಾಂತರ ಮಾಡಿದ ಪೊಲೀಸ್ ಅಧಿಕಾರಿಗಳು, ಇ–ಸ್ಪಂದನ, ಇ.ವಿ.ಆರ್.ಎಸ್ ಹಾಗೂ ಲೋಕಸ್ಪಂದನ ಮೂಲಕ ಮೊಬೈಲ್ ಪತ್ತೆ ಹಚ್ಚಿದ ಪೊಲೀಸ್ ಸಿಬ್ಬಂದಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರಮಣಗುಪ್ತಾ, ಎಸ್ಪಿ ಲೋಕೇಶ್ ಜಗಲಾಸರ್, ಡಿಸಿ ಗುರುದತ್ತ ಹೆಗಡೆ, ಪಾಲಿಕೆ ಆಯುಕ್ತರಾದ ಗೋಪಾಲಕೃಷ್ಣ ಅವರ ಉಪಸ್ಥಿತಿಯಲ್ಲಿಯೇ ವಿತರಣೆ ಮಾಡಲಾಯಿತು. ಇನ್ನು ಇದೇ ಸಂದರ್ಭದಲ್ಲಿ ಲೋಕ ಸ್ಪಂದನ ಕ್ಯೂ ಆರ್ ಕೋಡ್ ಹಾಗೂ 112 ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯ್ತು. ವಿವಿಧ ಜಾಗದಲ್ಲಿ ಮೊಬೈಲ್ ಕಳೆದುಕೊಂಡು ಆತಂಕದಲ್ಲಿದ್ದ ಜನರಿಗೆ ವಾಪಸ್ ಮೊಬೈಲ್ ಸಿಕ್ಕಿದ್ದು ಬಹಳ ಸಂತೋಷವಾಗಿತ್ತು. ಹಿಂದೆ ಮೊಬೈಲ್ ಕಳೆದುಕೊಂಡರೆ ಪೊಲೀಸ್ ಠಾಣೆ ಅಲೆದಾಡಿ ಅಲೆದಾಡಿ ಸುಸ್ತಾಗುತ್ತಿದ್ದರು. ಆದರೆ ಇದೀಗ ಕೇವಲ ಒಂದು ಮೆಸೇಜ್ನಲ್ಲಿ ಮೊಬೈಲ್ ಸಿಕ್ಕಿದ್ದಕ್ಕೆ ಸಖತ್ ಖುಷ್ ಆಗಿದೆ ಎನ್ನುತ್ತಿದ್ದಾರೆ.
ಇದನ್ನೂ ಓದಿ:Tech Tips: ಮೊಬೈಲ್ನಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಸೆಂಡ್ ಮಾಡುವುದು ಹೇಗೆ?
ಒಟ್ಟಿನಲ್ಲಿ ನಗರ ಪೊಲೀಸರು ಇ–ಪೋರ್ಟ್ಲ್ ಆರಂಭಿಸಿದ್ದು, ಅವರು ನೀಡಿದ ದೂರವಾಣಿ ಸಂಖ್ಯೆಗೆ ಮೊಬೈಲ್ ಕಳೆದುಕೊಂಡವರು ಹಾಯ್ ಎಂದು ಸಂದೇಶ ಕಳುಹಿಸಿದರೆ ಅವರಿಗೆ ಮರಳಿ ಒಂದು ವೆಬ್‌ಸೈಟ್ ಲಿಂಕ್ ಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ವೆಬ್‌ಸೈಟ್ ಓಪನ್‌ಆಗಿ ಮೊಬೈಲ್ ಬಗ್ಗೆ ಮಾಹಿತಿಯ ಹಲವು ಪ್ರಶ್ನೆಗಳು ಬರುತ್ತವೆ. ಅಲ್ಲಿ ಎಲ್ಲದಕ್ಕೂ ಸೂಕ್ತವಾಗಿ ಉತ್ತರಿಸಬೇಕು. ಬಳಿಕ ಪೊಲೀಸರು ಈ ಮಾಹಿತಿಯ ಸಹಾಯದಿಂದ ಮೊಬೈಲ್ ಪತ್ತೆ ಹಚ್ಚಲು ಪ್ರಯತ್ನಿಸುತ್ತಾರೆ. ಮೊಬೈಲ್ ಸಿಕ್ಕರೆ ತಕ್ಷಣ ನಿಮ್ಮ ದೂರವಾಣಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಇದೀಗ ಈ ಸ್ಫಂದನ ದಿಂದ ಒಂದು ತಿಂಗಳ ಅವಧಿಯಲ್ಲಿ 400 ಮೊಬೈಲ್ಗಳನ್ನ ಪತ್ತೆ ಮಾಡಿರುವ ಅವಳಿ ನಗರದ ಪೊಲೀಸರ ಕಾರ್ಯ ಶ್ಲಾಘನೀಯವಾಗಿದೆ.
ವರದಿ: ಶಿವಕುಮಾರ ಪತ್ತಾರ ಟಿವಿ9 ಹುಬ್ಬಳ್ಳಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:42 am, Mon, 10 April 23