ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಹಳೇ ಹುಬ್ಬಳ್ಳಿಯಲ್ಲಿ ಗಲಾಟೆ; ಕಾಣದ ಕೈಗಳಿಗಾಗಿ ಬಲೆ ಬೀಸಿದ ಪೊಲೀಸ್, ಒಟ್ಟು 104 ಜನ ಅರೆಸ್ಟ್
ಆರೋಪಿಗಳನ್ನು ವಿಡಿಯೋ ಕಾನ್ಪೆರೆನ್ಸ್ ಮೂಲಕ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಶನಿವಾರ ಹಳೇ ಹುಬ್ಬಳ್ಳಿಯಲ್ಲಿ ಗಲಭೆ ವೇಳೆ ಪೊಲೀಸ್ ಜೀಪ್ ಮೇಲೆ ನಿಂತು ಪ್ರಚೋದನಾತ್ಮಕ ಭಾಷಣ ಮಾಡಿದ ವ್ಯಕ್ತಿಯ ಸುಳಿವು ಪತ್ತೆಯಾಗಿದೆ.
ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 12 ಪ್ರಕರಣ ದಾಖಲಾಗಿದೆ. ನಿನ್ನೆ ಮತ್ತೆ 15 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು 12 ಪ್ರಕರಣಗಳಲ್ಲಿ 104 ಆರೋಪಿಗಳ ಬಂಧನವಾಗಿದೆ. ಕೊಲೆ ಯತ್ನ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿರುವುದು, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಸೇರಿ ಹಲವು ಪ್ರಕರಣ ದಾಖಲಾಗಿವೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರಿಂದ ತಲಾಶ್ ಶುರುವಾಗಿದೆ.
ಆರೋಪಿಗಳನ್ನು ವಿಡಿಯೋ ಕಾನ್ಪೆರೆನ್ಸ್ ಮೂಲಕ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಶನಿವಾರ ಹಳೇ ಹುಬ್ಬಳ್ಳಿಯಲ್ಲಿ ಗಲಭೆ ವೇಳೆ ಪೊಲೀಸ್ ಜೀಪ್ ಮೇಲೆ ನಿಂತು ಪ್ರಚೋದನಾತ್ಮಕ ಭಾಷಣ ಮಾಡಿದ ವ್ಯಕ್ತಿಯ ಸುಳಿವು ಪತ್ತೆಯಾಗಿದೆ. ಕಾಂಗ್ರೆಸ್ ಮುಖಂಡ ಅಲ್ತಾಫ ಹಳ್ಳೂರ ಜತೆಗೆ ನಿಂತಿದ್ದ ವ್ಯಕ್ತಿಯ ಸುಳಿವು ಪೊಲೀಸ್ ಟೀಮ್ ಜಾಲಾಡುತ್ತಿದೆ.
ಇನ್ನು ಮತ್ತೊಂದು ಕಡೆ ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಕಳೆದೊಂದು ತಿಂಗಳಿನಿಂದ ನಡೆಯುತ್ತಿರೋ ಧರ್ಮ ದಂಗಲ್‌ನ ಸೇಡಿನಿಂದಲೆ ನಡಿಯಿತಾ? ಎಂಬ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಮುಸ್ಲಿಂ ಯುವಕರ ಮಾತು ಪುಷ್ಠಿ ನೀಡುವಂತಿದೆ. ಹಳೇ ಹುಬ್ಬಳ್ಳಿಯ ಠಾಣೆ ಬಳಿ ಜಮಾಯಿಸಿದ್ದ ಮುಸ್ಲಿಂ ಯುವಕರು ಇನ್ನು ಎಷ್ಟು ದಿನ ಸಹಿಸಕೊಳ್ಳಬೇಕು ಎನ್ನುತ್ತಿದ್ದರಂತೆ. ಈ ಒಂದು ಮಾತನ್ನು ಕೇಳಿಸಿಕೊಂಡರೆ ಬಹುಶಃ ಧರ್ಮ ದಂಗಲ್ನ ಸೇಡಿನಿಂದಲೇ ಹಳೇ ಹುಬ್ಬಳ್ಳಿಯಲ್ಲಿ ಗಲಾಟೆ ನಡೆದದ್ದು ಎಂಬಂತಿದೆ. ಕಲ್ಲಂಗಡಿ ಬೀದಿಗೆಸೆದ್ದರಿಂದ ಭಾರಿ ಸಿಟ್ಟು ಅವರಲ್ಲಿ ಮನೆ ಮಾಡಿತ್ತು. ಅದೇ ಸಿಟ್ಟು, ಸೇಡು ಈ ಘಟನೆಯಲ್ಲಿ ತೋರಿಸಿ ಬಿಟ್ರಾ? ಎಐಎಂಐಎಂ ಮುಖಂಡ ಇರ್ಫಾನ್ ಭಾಗಿ ಹಿನ್ನಲೆ ರಾಜಕೀಯ ಕರಿನೆರಳಿನ ಅನುಮಾನ ವ್ಯಕ್ತವಾಗಿದೆ.
ಆತನೇ ತನ್ನ ವಾರ್ಡಿನ ಜನರನ್ನ ಜಮಾಯಿಸಲು ಕರೆ ನೀಡಿದ್ದ ಎಂದು ಬಂಧಿತ ಕಿಡಿಗೇಡಿಗಳು ಖಾಕಿ ಎದರು ಮಾಹಿತಿ ಬಿಚ್ಚಿಟ್ಟಿದ್ದಾರೆ. ಆತನೇ ತಮ್ಮನ್ನು ಠಾಣೆಯ ಬಳಿ ಕರೆದಿದ್ದು ಎಂದು ಕಿಡಗೇಡಿಗಳು ತಿಳಿಸಿದ್ದಾರೆ. ಹೀಗಾಗೇ ಪ್ರಕರಣದಲ್ಲಿ ರಾಜಕೀಯ ಛಾಯೆ ಕಂಡು ಬಂದಿದ್ದು ಈ ಆ್ಯಂಗಲ್ ನಲ್ಲೂ ಖಾಕಿ ವಿಚಾರಣೆ ನಡೆಸುತ್ತಿದೆ. ಇನ್ನು ಗಲಭೆ ಸ್ಪಷ್ಟ ಕಾರಣವೇ ಧರ್ಮಗುರು ಎನ್ನೋದು ಜಗಜ್ಜಾಹಿರಾಗಿದೆ. ಆತನೇ ಅತೀ ಹೆಚ್ಚು ಪ್ರಚೋದನೆ ನೀಡಿದ್ದು ಬಹಿರಂಗವಾಗಿದೆ. ಸುಮ್ಮನೇ ಠಾಣೆ ಬಳಿ ಪ್ರತಿಭಟಿಸುತ್ತಿದ್ದ ಮುಸ್ಲಿಮರನ್ನು ರೊಚ್ಚಿಗೇಳುವಂತೆ ಮಾಡಿದ್ದೇ, ವಸೀಂ ಮೊಬಲಿಕ್ ಎನ್ನೊ ಧರ್ಮಗುರುವಿನ ಮಾತು ಕೇಳಿ ಯುವಕರು ಈ ರೀತಿ ವರ್ತಿಸಿದ್ದಾರೆ.
ಶಾಂತಿ ಮಂತ್ರ ಜಪಿಸಬೇಕಿದ್ದ ಮೌಲ್ವಿಯೇ ಕುಮ್ಮಕ್ಕ ನೀಡಿದ್ದಾರೆ. ಠಾಣೆಗೆ ಬರೋದಕ್ಕೂ ಮುಂಚೆ ಹುಬ್ಬಳ್ಳಿ ಕಿಂಗ್ಸ್ ಎನ್ನೊ ವಾಟ್ಸಾಪ್ ಗ್ರೂಪ್ನಲ್ಲಿ ಕರೆ ನೀಡಿದ್ದಾರೆ. ಸದ್ಯ ಮೌಲ್ವಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕಳೆದೆರಡೂ ದಿನಗಳಿಂದ ಮೌಲ್ವಿ ನಾಪತ್ತೆಯಾಗಿದ್ದಾರೆ.
ಹುಬ್ಬಳ್ಳಿ ಗಲಾಟೆ ಘಟನೆ ರಾಜ್ಯದ ಮುಂದಿನ ಭವಿಷ್ಯದ್ದಾಗಿದೆ ಹುಬ್ಬಳ್ಳಿಯ ಗಲಾಟೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇನ್ನೊಂದು ವಿಷಯ ಬಂದಾಗ ಇದನ್ನು ಮರೆಯಬಾರದು ಎಂದು ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿ ಗಲಾಟೆ ಘಟನೆ ರಾಜ್ಯದ ಮುಂದಿನ ಭವಿಷ್ಯದ್ದಾಗಿದೆ. ಆರಗಗೆ ಗೃಹ ಇಲಾಖೆಗೆ ನಿಭಾಯಿಸಲು ಆಗದಿದ್ದರೆ ಸಿಎಂ ಬಸವರಾಜ ಬೊಮ್ಮಾಯಿಗೆ ಆರಗ ಜ್ಞಾನೇಂದ್ರ ತಿಳಿಸಲಿ. ಬೇರೆ ಯಾರಿಗಾದರೂ ಗೃಹ ಇಲಾಖೆ ನೀಡುವಂತೆ ಹೇಳಲಿ. ಕೆಲಸದ ಟೆನ್ಷನ್‌ನಲ್ಲಿ ರಾತ್ರಿ ನಿದ್ದೆ ಬರುತ್ತಿಲ್ಲ ಎಂದು ಹೇಳಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ನನಗೆ ತಿಳಿಸಿದ್ದಾರೆ. ಅವರಿಗೆ ಬೇರೆ ಇಲಾಖೆ ವಹಿಸಿಕೊಳ್ಳಲು ಸಲಹೆ ನೀಡಿದ್ದೇನೆ. ಗೃಹ ಸಚಿವ ಆರಗ ಜ್ಞಾನೇಂದ್ರ ಒಳ್ಳೆಯ ಸ್ವಭಾವದ ಮನುಷ್ಯ. ಆದರೆ ಆರಗ ಜ್ಞಾನೇಂದ್ರಗೆ ಗೃಹ ಖಾತೆ ಸೆಟ್ ಆಗುವುದಿಲ್ಲ ಎಂದು ವಿಜಯಪುರದಲ್ಲಿ BJP ಶಾಸಕ ಬಸನಗೌಡ ಯತ್ನಾಳ್ ತಿಳಿಸಿದ್ದಾರೆ.
ಶಾಂತಿ ಕಾಪಾಡುವುದಕ್ಕೆ ಘಟನಾ ಸ್ಥಳಕ್ಕೆ ಹೋಗಿದ್ದೆ-ಅಲ್ತಾಪ್ ಕೋಮುಗಲಭೆ ಸೃಷ್ಟಿಸಲು ನಾನು ಘಟನಾ ಸ್ಥಳಕ್ಕೆ ಹೋಗಿಲ್ಲ. ಶಾಂತಿ ಕಾಪಾಡುವುದಕ್ಕೆ ಘಟನಾ ಸ್ಥಳಕ್ಕೆ ಹೋಗಿದ್ದೆ ಎಂದು ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಸ್ಪಷ್ಟನೆ ನೀಡಿದ್ದಾರೆ. ಗಲಾಟೆ ಮಾಡಬೇಡಿ ಎಂದು ಹೇಳಲು ಸ್ಥಳಕ್ಕೆ ಹೋಗಿದ್ದೆ. ಗಾಡಿ ಮೇಲೆ ಹತ್ತಿ ಗಲಾಟೆ ಮಾಡಬೇಡಿ ಎಂದು ಹೇಳಿದ್ದೇನೆ. ಹುಬ್ಬಳ್ಳಿಯ ಗಲಾಟೆಗೆ ಪೋಸ್ಟ್ ಮಾಡಿದವರೇ ಕಾರಣ. ಪೋಸ್ಟ್ ಹಾಕಿದವನ ಹಿಂದೆ ದೊಡ್ಡ ಸಂಘಟನೆ ಕೈವಾಡವಿದೆ. ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಹೊರಗೆ ಬರುತ್ತೆ. ಪೋಸ್ಟ್ ಹಾಕಿದ ಯುವಕನ ಆಡಿಯೋ ಪೊಲೀಸರಿಗೆ ನೀಡಿದ್ದೇನೆ. ಸ್ಟೇಟಸ್ ತೆಗೆಯಬೇಡ ಏನಾಗುತ್ತೋ ನೋಡೋಣ ಎಂದಿದ್ದಾರೆ ಎಂದು ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ತಿಳಿಸಿದ್ದಾರೆ.
ಇದನ್ನೂ ಓದಿ: ದುನಿಯಾ ವಿಜಯ್ ನಿರ್ದೇಶನದ ‘ಭೀಮ’ ಚಿತ್ರಕ್ಕೆ ಸಿಕ್ತು ಚಾಲನೆ; ಸೆಲೆಬ್ರಿಟಿಗಳ ಸಾಥ್
ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಮಳೆ: ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಪವರ್ ಕಟ್, ಅಪಘಾತದಲ್ಲಿ ಯುವಕ ಸಾವು
Published On - 8:59 am, Tue, 19 April 22