ಶಕ್ತಿ ಯೋಜನೆ ಅಡ್ಡ ಪರಿಣಾಮ, ಕುಂಟುತ್ತಿದೆ ವಾಯವ್ಯ ಸಾರಿಗೆ ಸಂಸ್ಥೆ ಆದಾಯ: ಸಂಬಳ ಕೊಡಲು ಆರ್ಥಿಕ ನೆರವು ಬೇಕಿದೆ- ಸರ್ಕಾರಕ್ಕೆ ಎಂಡಿ ಪತ್ರ
ಸಿಬ್ಬಂದಿಗೆ ಜೂನ್ ಸಂಬಳ ಪಾವತಿಸಲಾಗಿದೆ. ಅಕಸ್ಮಾತ್ ಸರ್ಕಾರ 65 ಕೋಟಿ ಬಿಡುಗಡೆ ಮಾಡದೆ ಹೋದ್ರೆ ಸಾರಿಗೆ ಇಲಾಖೆ ನೌಕರರಿಗೆ ಜುಲೈ ತಿಂಗಳಿಂದ ಸಂಬಳ ನೀಡೋದು ಕಷ್ಟವಾಗತ್ತೆ. ಇದೀಗ 65 ಕೋಟಿ ಹಣ ಬೇಕೆಂದು ವಾಯವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಶಕ್ತಿ ಯೋಜನೆ (Shakti Yojana) ಜಾರಿಯಾಗಿ ಹೆಚ್ಚು ಕಡಿಮೆ ಎರಡು ತಿಂಗಳಾಗಿದೆ.ಶಕ್ತಿ ಯೋಜನೆಗೆ ಸಖತ್ ರೆಸ್ಪಾನ್ಸ್ ಕೂಡಾ ವ್ಯಕ್ತವಾಗಿದೆ..ಮಹಿಳಾ ಮಣಿಗಳು ತಂಡೋಪತಂಡವಾಗಿ ಬಸ್ (Bus) ಹತ್ತುತ್ತಿದ್ದಾರೆ.ಯಾವ ಬಸ್ ನೋಡಿದ್ರು ಮಹಿಳೆಯರೇ ತುಂಬಿ ತುಳುಕುತ್ತಿದ್ದಾರೆ.ವಾಯುವ್ಯ ಸಾರಿಗೆ ಇಲಾಖೆಯ ಅರು ಜಿಲ್ಲೆಗಳಲ್ಲಿ ಹೆಚ್ಚು ಕಡಿಮೆ ಎರಡು ಕೋಟಿ ಮಹಿಳಾ ಮಣಿಗಳು ಪ್ರಯಾಣ ಮಾಡಿದ್ದಾರೆ.ಇದರ ಅಂದಾಜು ಟಿಕೆಟ್ ಮೌಲ್ಯ 60 ಕೋಟಿ ದಾಟಿದೆ.ಇದೀಗ 65 ಕೋಟಿ ಹಣ ಬೇಕೆಂದು ಸಾರಿಗೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ (Siddaramaiah) ಪತ್ರ ಬರೆದಿದ್ದಾರೆ..
ಉತ್ತರ ಕರ್ನಾಟಕದ 6 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಜುಲೈ ತಿಂಗಳ ವೇತನ ನೀಡಲು 65 ಕೋಟಿ ಅನುದಾನ ನೀಡುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜೂನ್ ತಿಂಗಳಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡುವಾಗ, ಮಹಿಳಾ ಪ್ರಯಾಣಿಕರ ಪ್ರಯಾಣದ ವೆಚ್ಚವನ್ನು ಭರಿಸುವುದಾಗಿ ಸರ್ಕಾರ ಹೇಳಿತ್ತು ಎಂಬುದು ಗಮನಾರ್ಹ.
ಜೂನ್ 11 ರಿಂದ 30 ರವರೆಗೆ ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ 2.50 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಅವರ ಪ್ರಯಾಣದ ವೆಚ್ಚ, ಅಂದಾಜು 66 ಕೋಟಿಯಾಗಿದೆ. ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಬಾಗಲಕೋಟೆ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿ ಹೊಂದಿರುವ ಸಂಸ್ಥೆಯಲ್ಲಿ ಬಸ್ ಚಾಲಕರು, ನಿರ್ವಾಹಕರು, ಆಡಳಿತ ವರ್ಗ ಸೇರಿ 21641 ಸಿಬ್ಬಂದಿ ಇದ್ದಾರೆ. ಇವರೆಲ್ಲರಿಗೂ ಒಟ್ಟು ವೇತನ ಮಾಡಲು ನೀಡಲು ಪ್ರತಿ ತಿಂಗಳು 48 ಕೋಟಿ ರೂ. ಬೇಕು ಎಂದು ಭರತ್, ಸರ್ಕಾರದ ಗಮನಕ್ಕೆ ತಂದಿದ್ದಾರೆ.ಹಾಗೂ ಇತರೇ ಖರ್ಚಿಗಾಗಿ ಒಟ್ಟು 65 ಕೋಟಿ ಬೇಕೆಂದು ಭರತ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.. ಸರ್ಕಾರ ಹಂತ ಹಂತವಾಗಿ ಹಣ ಬಿಡುಗಡೆ ಮಾಡೋದಾಗಿ ಭರವಸೆ ನೀಡಿದೆ ಅಂತೀದಾರೆ.
ಶಕ್ತಿ ಯೋಜನೆಗೂ ಮುನ್ನ ಜೂನ್ 1 ರಿಂದ 10 ರವರೆಗೆ ಸಂಸ್ಥೆಗೆ 47 ಕೋಟಿ ರೂ. ಆದಾಯ ಬಂದಿತ್ತು. ಆಗ ಪುರುಷರು ಸೇರಿ ಮಹಿಳೆಯರೂ ಹಣ ಕೊಟ್ಟು ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿಯಾದ ಜೂನ್ 11 ರಿಂದ 30 ರ ವರೆಗಿನ ಅವಧಿಯಲ್ಲಿ 23 ಕೋಟಿ ಆದಾಯ ಬಂದಿದೆ. ಮಹಿಳೆಯರು ಉಚಿತವಾಗಿ ಪ್ರಯಾಣಿಸಿದರೆ, ಪುರುಷರು ಹಣ ಕೊಟ್ಟು ಪ್ರಯಾಣಿಸಿದ್ದರು. ಒಟ್ಟು ಪ್ರಯಾಣಿಕರಿಂದ ಒಟ್ಟು 70 ಕೋಟಿ ಆದಾಯ ಬಂದಿತ್ತು. ಬೇರೆ ಬೇರೆ ಮೂಲಗಳಿಂದ ಸೇರಿ ಒಟ್ಟು 110 ಕೋಟಿ ಆದಾಯ ಬಂದಿತ್ತು.
ಈ ಹಣ ಬಳಸಿಕೊಂಡು, ಸಿಬ್ಬಂದಿಗೆ ಜೂನ್ ಸಂಬಳ ಪಾವತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಅಕಸ್ಮಾತ್ ಸರ್ಕಾರ 65 ಕೋಟಿ ಬಿಡುಗಡೆ ಮಾಡದೆ ಹೋದ್ರೆ ಸಾರಿಗೆ ಇಲಾಖೆ ನೌಕರರಿಗೆ ಸಂಬಳ ನೀಡೋದು ಕಷ್ಟವಾಗತ್ತೆ.ಮಹಿಳೆಯರು ಉಚಿತ ಪ್ರಯಾಣದ ಖುಷಿ ಅನುಭವಿಸುತ್ತಿದ್ರೆ,ಅದರ ಅಡ್ಡ ಪರಿಣಾಮವೂ ಹೆಚ್ಚಾಗಿದೆ.
ಹೀಗೆ ಮುಂದುವರೆದರೆ ಸಾರಿಗೆ ಇಲಾಖೆ ನಷ್ಟದ ಸುಳಿಯಲ್ಲಿ ಸಿಲುಕಲಿದೆ..ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡೋ ಸಿಬ್ಬಂದಿಗೂ ಹಣ ಇಲ್ಲದಂತಾಗತ್ತೆ.ಎಂ ಡಿ ಭರತ್ ಅವರಿಗೆ ಸರ್ಕಾರ ಹಣ ನೀಡತ್ತೆ ಅನ್ನೋ ಭರವಸೆ ಇದ್ರು, ಯಾವಾಗ ಬರತ್ತೆ ಅನ್ನೋದು ಕಾದು ನೋಡಬೇಕಿದೆ. ಈ ಮಧ್ಯೆ, ಶಕ್ತಿ ಯೋಜನೆ ಕುರಿತು ಬಿಜೆಪಿ ನಾಯಕಿ ಕೇಂದ್ರ ಸಚಿವೆ, ಶೋಭಾ ಕರಂದ್ಲಾಜೆ ಮಾತಾಡಿದ್ದು, ಹೀಗೆ ಆದ್ರೆ KSRTC ಸಿಬ್ಬಂದಿಗೆ ಸಂಬಳ ಕೊಡೋದು ಕಷ್ಟ ಆಗತ್ತೆ ಎಂದಿದ್ದಾರೆ.
ಒಟ್ಟಿನಲ್ಲಿ ಶಕ್ತಿ ಯೋಜನೆ ಹಿನ್ನೆಲೆ ಮಹಿಳಾ ಮಣಿಗಳು ಖುಷ್ ಆಗಿದ್ದರೇ,ಅದರ ಅಡ್ಡ ಪರಿಣಾಮವೂ ಜೋರಾಗಿದೆ.ಆಟೋ ಚಾಲಕರು ಬೀದಿಗಿಳಿದ ಹೋರಾಟ ಮಾಡ್ತೀದಾರೆ.ಈ ಮಧ್ಯೆ ತಾಂತ್ರಿಕ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದಿದ್ದು,ಹಣ ಬರದೆ ಹೋದ್ರೆ ಸಾರಿಗೆ ಇಲಾಖೆ ಸಿಬ್ಬಂದಿಗೆ ಸಂಕಷ್ಟ ಗ್ಯಾರಂಟಿ ಎಂದಿದ್ದಾರೆ.
ಧಾರವಾಡ ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ