ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಿಂದ ಜಲಪಾತಗಳ ವೀಕ್ಷಣೆಗಾಗಿ ವಿಶೇಷ ಬಸ್ ವ್ಯವಸ್ಥೆ

NWKRTC: ವಾರಾಂತ್ಯ ಹಾಗೂ ರಜೆ ದಿನಗಳಂದು ಹುಬ್ಬಳ್ಳಿಯಿಂದ ಜೋಗ ಫಾಲ್ಸ್​​, ಧಾರವಾಡ ದಿಂದ ಗೋಕಾಕ್ ಫಾಲ್ಸ್ ಮತ್ತು ದಾಂಡೇಲಿಗೆ ಹಾಗೂ ಬೆಳಗಾವಿಯಿಂದ ಅಂಬೋಲಿ ಫಾಲ್ಸ್ ಮತ್ತು ಗೋಕಾಕ್ ಫಾಲ್ಸ್​ಗೆ ವಿಶೇಷ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ.

ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಿಂದ ಜಲಪಾತಗಳ ವೀಕ್ಷಣೆಗಾಗಿ ವಿಶೇಷ ಬಸ್ ವ್ಯವಸ್ಥೆ
ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಿಂದ ಜಲಪಾತಗಳ ವೀಕ್ಷಣೆಗಾಗಿ ವಿಶೇಷ ಬಸ್ ವ್ಯವಸ್ಥೆ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: Rakesh Nayak Manchi

Updated on:Aug 01, 2023 | 10:56 PM

ಹುಬ್ಬಳ್ಳಿ, ಆಗಸ್ಟ್ 1: ಇತ್ತೀಚೆಗೆ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಪಾತಗಳ (Waterfalls) ವೀಕ್ಷಣೆಗಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ವಾರಾಂತ್ಯ ಹಾಗೂ ಸಾರ್ವಜನಿಕ ರಜೆ ದಿನಗಳಂದು ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಉತ್ತರ ಕರ್ನಾಟಕ ಭಾಗದ ಬಹುತೇಕ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹಲವಾರು ಜಲಪಾತಗಳು ಮೈದುಂಬಿ ಕೊಂಡಿವೆ.ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಬೇಡಿಕೆಯ ಮೇರೆಗೆ ವಾರಾಂತ್ಯ ಹಾಗೂ ರಜೆ ದಿನಗಳಂದು ಹುಬ್ಬಳ್ಳಿಯಿಂದ ಜೋಗ ಫಾಲ್ಸ್, ಧಾರವಾಡ ದಿಂದ ಗೋಕಾಕ್ ಫಾಲ್ಸ್ ಮತ್ತು ದಾಂಡೇಲಿಗೆ ಹಾಗೂ ಬೆಳಗಾವಿಯಿಂದ ಅಂಬೋಲಿ ಫಾಲ್ಸ್ ಮತ್ತು ಗೋಕಾಕ್ ಫಾಲ್ಸ್​ಗೆ ವಿಶೇಷ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ರವಿವಾರ, 2ನೇ ಮತ್ತು 4ನೇ ಶನಿವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಈ ಬಸ್​ಗಳ ಸೇವೆ ಲಭ್ಯವಿದೆ. ಒಂದೇ ದಿನದಲ್ಲಿ ಎರಡರಿಂದ ನಾಲ್ಕು ಸ್ಥಳಗಳ ವೀಕ್ಷಣೆಗೆ ಅನುಕೂಲವಾಗುವಂತೆ ವೇಳಾಪಟ್ಟಿ ರೂಪಿಸಲಾಗಿದೆ. ಮಿತವ್ಯಯಕರ ಪ್ರಯಾಣದರ ನಿಗದಿಪಡಿಸಲಾಗಿದೆ.

ಹುಬ್ಬಳ್ಳಿ -ಜೋಗ್ ಫಾಲ್ಸ್

ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದಿಂದ ರಾಜಹಂಸ ಬಸ್ಸು ಬೆಳಗ್ಗೆ 7:45 ಕ್ಕೆ ಹೊರಡುತ್ತದೆ. ರಾತ್ರಿ 9:30ಕ್ಕೆ ಹಿಂದಿರುಗುತ್ತದೆ ಪ್ರಯಾಣ ದರ ರೂ. 450. ವೋಲ್ವೋ ಎಸಿ ಬಸ್ಸು ಬೆಳಗ್ಗೆ 8 ಕ್ಕೆ ಹೊರಡುತ್ತದೆ. ರಾತ್ರಿ 9ಕ್ಕೆ ಹಿಂದಿರುತ್ತದೆ ಪ್ರಯಾಣ ದರ ರೂ.600. ಮಾರ್ಗ ಮಧ್ಯದಲ್ಲಿ ಶಿರಸಿ ಮಾರಿಕಾಂಬ ದೇವಸ್ಥಾನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ 7760991674 / 7760991682 ಕ್ಕೆ ಸಂಪರ್ಕಿಸಬಹುದು.

ಇದನ್ನೂ ಓದಿ: Gokak Falls: ಉಕ್ಕಿ ಹರಿಯುತ್ತಿದೆ ಭಾರತದ ನಯಾಗರ ಜಲಪಾತ: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಗೋಕಾಕ್ ಫಾಲ್ಸ್

ಧಾರವಾಡ- ದಾಂಡೇಲಿ, ಉಳವಿ

ವೇಗದೂತ ಬಸ್ ಧಾರವಾಡ ಹೊಸ ಬಸ್ ನಿಲ್ದಾಣದಿಂದ ಬೆಳಿಗ್ಗೆ 7-30ಕ್ಕೆ ಹೊರಡುತ್ತದೆ. ದಾಂಡೇಲಿ ಮೊಸಳೆ ಪಾರ್ಕ್, ಮೌಲಂಗಿ ಫಾಲ್ಸ್, ಕೂಳಗಿ ನೇಚರ್ ಪಾರ್ಕ್ ಹಾಗೂ ಉಳವಿ ದೇವಸ್ಥಾನ ವೀಕ್ಷಣೆ ಮುಗಿಸಿಕೊಂಡು ಸಂಜೆ 7 ಕ್ಕೆ ಹಿಂದಿರುಗುತ್ತದೆ. ಪ್ರಯಾಣ ದರ ರೂ.340.

ಧಾರವಾಡ- ಗೋಕಾಕ್ ಫಾಲ್ಸ್

ವೇಗದೂತ ಬಸ್ ಧಾರವಾಡ ಹೊಸ ಬಸ್ ನಿಲ್ದಾಣದಿಂದ ಬೆಳಿಗ್ಗೆ 7-30ಕ್ಕೆ ಹೊರಡುತ್ತದೆ. ನವಿಲು ತೀರ್ಥ ಡ್ಯಾಮ್, ಗೋಕಾಕ್ ಫಾಲ್ಸ್ ಹಾಗೂ ಹಿಡಕಲ್ ಡ್ಯಾಮ್ ವೀಕ್ಷಣೆ ಮುಗಿಸಿಕೊಂಡು ಧಾರವಾಡಕ್ಕೆ ಸಂಜೆ 7ಕ್ಕೆ ಹಿಂದಿರುಗುತ್ತದೆ. ಪ್ರಯಾಣ ದರ ರೂ.340. ಹೆಚ್ಚಿನ ಮಾಹಿತಿಗೆ 9148266332 / 7760982552 ಕ್ಕೆ ಸಂಪರ್ಕಿಸಬಹುದು.

ಬೆಳಗಾವಿ – ಗೋಕಾಕ್ ಫಾಲ್ಸ್

ವೇಗದೂತ ಬಸ್ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ 9 ಗಂಟೆಗೆ ಹೊರಡುತ್ತದೆ. ಹಿಡಕಲ್ ಡ್ಯಾಮ್, ಗೋಡಚಿನಮಕ್ಕಿ ಹಾಗೂ ಗೋಕಾಕ್ ಫಾಲ್ಸ್ ವೀಕ್ಷಣೆ ಮುಗಿಸಿಕೊಂಡು ಸಂಜೆ 6 ಕ್ಕೆ ಹಿಂದಿರುಗುತ್ತದೆ. ಪ್ರಯಾಣ ದರ ರೂ. 190.

ಬೆಳಗಾವಿ- ಅಂಬೋಲಿ ಫಾಲ್ಸ್

ವೇಗದೂತ ಬಸ್ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ 9 ಗಂಟೆಗೆ ಹೊರಡುತ್ತದೆ. ನಾಗರತಾಸ್ ಫಾಲ್ಸ್ ಹಾಗೂ ಅಂಬೋಲಿ ಫಾಲ್ಸ್ ವೀಕ್ಷಣೆ ಮುಗಿಸಿಕೊಂಡು ಸಂಜೆ 6 ಕ್ಕೆ ಹಿಂದಿರುಗುತ್ತದೆ. ಪ್ರಯಾಣ ದರ ರೂ.290.

ಹೆಚ್ಚಿನ ಮಾಹಿತಿಗೆ 7760991612/ 7760991613 / 7760991625 ಕ್ಕೆ ಸಂಪರ್ಕಿಸಬಹುದು. ಈ ವಿಶೇಷ ಬಸ್ಸುಗಳಲ್ಲಿ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ.

ಮುಂಗಡ ಟಿಕೆಟ್ ಬುಕ್ಕಿಂಗ್

ಬಸ್ ನಿಲ್ದಾಣಗಳಲ್ಲಿ, ಅವತಾರ್ ಕೌಂಟರ್ ಗಳಲ್ಲಿ, KSRTC Mobile App ಹಾಗೂ ವೆಬ್ ಸೈಟ್ www.ksrtc.in ನಲ್ಲಿ ಮುಂಚಿತವಾಗಿ ಟಿಕೆಟ್ ಬುಕ್ಕಿಂಗ್ ಮಾಡಬಹುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:28 pm, Tue, 1 August 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ