AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2024ರಲ್ಲಿ ಭಾರತ ವಿಶ್ವದ ನಂಬರ್ ತ್ರೀ ಆರ್ಥಿಕ ಪ್ರಗತಿಯ ರಾಷ್ಟ್ರವಾಗೋದು ಗ್ಯಾರಂಟಿ -ಪ್ರಲ್ಹಾದ ಜೋಶಿ ವಿಶ್ವಾಸ

ರಾಜ್ಯ ಹಾಗೂ ದೇಶದ ಜನರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷದಲ್ಲಿ ಭಾರತ ದೇಶ ಆರ್ಥಿಕತೆಯಲ್ಲಿ ವಿಶ್ವದ ಟಾಪ್ ಮೂರನೇ ರಾಷ್ಟ್ರವಾಗಲಿದೆ. ಈಗಾಗಲೇ ನಾವು ಟಾಪ್ ಐದನೇ ಸ್ಥಾನದಲ್ಲಿದ್ದೇವೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

TV9 Web
| Updated By: ಆಯೇಷಾ ಬಾನು|

Updated on:Dec 31, 2023 | 12:45 PM

Share

ಹುಬ್ಬಳ್ಳಿ, ಡಿಸೆಂಬರ್ 31: ಆರ್ಥಿಕ ಪ್ರಗತಿಯಲ್ಲಿ ಭಾರತ ವಿಶ್ವದ ಟಾಪ್ ಮೂರನೇ ಸ್ಥಾನಕ್ಕೆ ಬರೋದು ಸನ್ನಿಹಿತವಾಗಿದೆ ಎಂಬ ವಿಶ್ವಾಸವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ರಾಜ್ಯ ಹಾಗೂ ದೇಶದ ಜನರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷದಲ್ಲಿ (New Year) ಭಾರತ ದೇಶ ಆರ್ಥಿಕತೆಯಲ್ಲಿ ವಿಶ್ವದ ಟಾಪ್ ಮೂರನೇ ರಾಷ್ಟ್ರವಾಗಲಿದೆ. ಈಗಾಗಲೇ ನಾವು ಟಾಪ್ ಐದನೇ ಸ್ಥಾನದಲ್ಲಿದ್ದೇವೆ. ಹೊಸ ವರ್ಷದಲ್ಲಿ ಟಾಪ್ ಮೂರನೇ ಸ್ಥಾನಕ್ಕೆ ಬರಲಿದ್ದೇವೆ. ಅದಾದ ನಂತರ ಹಂತ ಹಂತವಾಗಿ ವಿಶ್ವದಲ್ಲೇ ಭಾರತ ನಂಬರ್ ವನ್ ಸ್ಥಾನಕ್ಕೆ ಏರೋದು ಗ್ಯಾರಂಟಿ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರ ಬಂಧನ ಪ್ರಕರಣದ ಬಗ್ಗೆ ಮಾದ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಲ್ಹಾದ ಜೋಶಿ, ಪ್ರತಾಪಸಿಂಹ ಜೊತೆ ನಾನು ಈ ಬಗ್ಗೆ ಮಾತನಾಡುವೆ, ಏನು ಅಂತ ವಿಚಾರ ತಿಳಿದುಕೊಳ್ಳುವೆ. ಆದರೆ ಇಷ್ಟು ದಿನ ಬಿಟ್ಟು ಈಗ ಯಾಕೆ ಅರೆಸ್ಟ್ ಮಾಡಿದ್ದಾರೆ? ಇದರ ಹಿನ್ನಲೆ ಏನು? ಎಂಬಂತಹ ಬಹಳಷ್ಟು ಪ್ರಶ್ನೆಗಳಿವೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನಂತರ ಪ್ರತಿಕ್ರಿಯೆ ನೀಡುವೆ ಎಂದರು.

ಇದನ್ನೂ ಓದಿ:ವಿಕ್ರಂ ಸಿಂಹ ಬಂಧನ: ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ 

ಮೈಸೂರು ಲೋಕಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧಿಸುವ ಸಾಧ್ಯತೆಯ ಹಿನ್ನಲೆಯಲ್ಲಿ ಹೀಗೆ ಪ್ರತಾಪ ಸಿಂಹರನ್ನ ಟಾರ್ಗೆಟ್ ಮಾಡಲಾಗಿದೆಯಾ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಪ್ರಲ್ಹಾದ ಜೋಶಿ, ” ಹಾಗೆ ಆಗಿರುವ ಸಾಧ್ಯತೆ ಇದೆ, ನಾನು ಚೆಕ್ ಮಾಡಿದ ನಂತರ ಮಾತನಾಡುವೆ” ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:44 pm, Sun, 31 December 23