AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಜನರ ನಿದ್ದೆಗೆಡಿಸಿದ್ದ ದರೋಡೆ ಗ್ಯಾಂಗ್​ನ ಓರ್ವ ಆರೋಪಿ ಅರೆಸ್ಟ್​​​; ತಪ್ಪಿಸಿಕೊಳ್ಳಲು ಯತ್ನಿಸಿದವನ ಕಾಲಿಗೆ ಮಹಿಳಾ ಪೊಲೀಸ್​ಯಿಂದ ಗುಂಡೇಟು

ಆತ ಅಂತರಾಜ್ಯ ಕಳ್ಳ. ಮೂಲತಃ ಮುಂಬೈ ನಿವಾಸಿಯಾದ ಆತ ಕರ್ನಾಟಕ ಸೇರಿ ನಾಲ್ಕಕ್ಕೂ ಹೆಚ್ಚು ರಾಜ್ಯಗಳಲ್ಲಿ ಆತನ ಮೇಲೆ ಕೊಲೆ, ದರೋಡೆ, ಕಳ್ಳತನ ಸೇರಿ 15 ಕ್ಕೂ ಹೆಚ್ಚು ಕೇಸ್ ಇವೆ. ಕಳ್ಳತನ ಮಾಡೋಕು ಮುಂಚೆ ಆ ಗ್ಯಾಂಗ್ ಸ್ಥಳೀಯರಿಗೆ ಹಣದ ಆಸೆ ತೋರಿಸಿ ಸರ್ವೆ ಮಾಡಿ ಕಳ್ಳತನ ಮಾಡುತ್ತಿದ್ದರು. ಅದರಂತೆ ಚೋಟಾ ಮುಂಬೈನಲ್ಲಿ ಕಳೆದ 10 ದಿನಗಳಿಂದ ಆ ಗ್ಯಾಂಗ್ ಕಳ್ಳತನ ಮಾಡಿತ್ತು. ಆ ಗ್ಯಾಂಗ್​ನ ನಟೋರಿಯಸ್​ ಒಬ್ಬ ಪೊಲೀಸರ ಅತಿಥಿಯಾಗಿದ್ದ. ತನ್ನ ಸಹಚರರನ್ನ‌ ತೋರಿಸ್ತೀನಿ‌ ಅಂದವನ ಮೇಲೆ ಮಹಿಳಾ ಇನ್ಸ್ಪೆಕ್ಟರ್ ‌ಫೈರಿಂಗ್ ಮಾಡಿದ್ದಾರೆ. ಅಷ್ಟಕ್ಕೂ ನಟೋರಿಯಸ್ ಮೇಲೆ ಫೈರಿಂಗ್ ಮಾಡಿದ್ದು ಯಾಕೆ ಅಂತೀರಾ? ಈ ಸ್ಟೋರಿ ಓದಿ.

ಹುಬ್ಬಳ್ಳಿ ಜನರ ನಿದ್ದೆಗೆಡಿಸಿದ್ದ ದರೋಡೆ ಗ್ಯಾಂಗ್​ನ ಓರ್ವ ಆರೋಪಿ ಅರೆಸ್ಟ್​​​; ತಪ್ಪಿಸಿಕೊಳ್ಳಲು ಯತ್ನಿಸಿದವನ ಕಾಲಿಗೆ ಮಹಿಳಾ ಪೊಲೀಸ್​ಯಿಂದ ಗುಂಡೇಟು
ಬಂಧಿತ ಆರೋಪಿ, ಗುಂಡೇಟು ಹೊಡೆದ ಮಹಿಳಾ ಪಿಎಸ್​ಐ
ಶಿವಕುಮಾರ್ ಪತ್ತಾರ್
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jul 26, 2024 | 7:56 PM

Share

ಹುಬ್ಬಳ್ಳಿ, ಜು.26: ವಾಣಿಜ್ಯ ನಗರಿ ಹುಬ್ಬಳ್ಳಿ(Hubballi)ಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ‌ ಸದ್ದು ಮೊಳಗಿದೆ.  ಅದು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ನಟೋರಿಯಸ್ ಕಳ್ಳನ ಮೇಲೆ ಫೈರಿಂಗ್​ ಮಾಡಿದ್ದಾರೆ. ಹೌದು, ಜು.17 ರಂದು ಹುಬ್ಬಳ್ಳಿಯ ರಮೇಶ್ ಭವನ ಬಳಿ ಇರುವ ಭುವನೇಶ್ವರಿ ಗೋಲ್ಡ್ ಶಾಪ್​ಗೆ ಕನ್ನ ಹಾಕಿತ್ತು. ಗ್ಯಾಸ್ ಕಟರ್​ನಿಂದ ಶೂಟರ್ ಕಟ್ ಮಾಡಿ, ಸಿಸಿ ಕ್ಯಾಮೆರಾಗೆ ಸ್ಪ್ರೇ ಮಾಡಿ ಗೋಲ್ಡ್ ಶಾಪ್ ಕಳ್ಳತನ ಮಾಡಿತ್ತು. ಸುಮಾರು 850 ಗ್ರಾಂ ಬಂಗಾರ, 50 ಕೆ.ಜಿ ಬೆಳ್ಳಿ ಕಳ್ಳತನ ಆಗಿತ್ತು ಎಂದು ಹೇಳಲಾಗಿತ್ತು. ಈ ಕಳ್ಳತನ‌ ಪ್ರಕರಣ ಬಹಳ ಸೀರಿಯಸ್ ಆಗಿ ತಗೆದುಕೊಂಡ ಹುಬ್ಬಳ್ಳಿ-ಧಾರವಾಡ ಪೊಲೀಸರು‌, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದರು.

ಅಂತರಾಜ್ಯ ಕಳ್ಳನ ಬಂಧನ; ತಪ್ಪಿಸಿಕೊಳ್ಳಲು ಯತ್ನಿಸಿದವನ ಕಾಲಿಗೆ ಗುಂಡೇಟು

ಕಾಲ್ ಡಿಟೇಲ್ಸ್ ಹಿಂದೆ ನಡೆದ ಕಳ್ಳತನ, ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಅಂತರಾಜ್ಯ ಕಳ್ಳ ಫರಾನ್ ಶೇಖ್​ನನ್ನ ಹು-ಧಾ ಪೊಲೀಸರು ವಶಕ್ಕೆ ಪಡೆದಿದ್ದರು. ಫರಾನ್ ಶೇಕ್ ಹುಬ್ಬಳ್ಳಿಗೆ ಬಂದು ಕಳ್ಳತನಕ್ಕೆ ಮುಂಚೆ ಕೆಲವರನ್ನು ಪರಿಚಯ ಮಾಡಿಕೊಂಡಿದ್ದ. ವಿಚಾರಣೆ ವೇಳೆ ಅವರ ಹೆಸರು ಹೇಳಿದ ಕಾರಣ, ಪೊಲೀಸರು‌ ಇಂದು ಬೆಳಗಿನ ಜಾವ ಅವರನ್ನು ಪತ್ತೆ ಹಚ್ಚಲು ಫರಾನ್ ನನ್ನು ಕರೆದುಕೊಂಡು‌ ಹೋಗಿದ್ದರು. ಹುಬ್ಬಳ್ಳಿಯ ಗಾಮನ ಗಟ್ಟಿ ಪ್ರದೇಶದ ಬಳಿ ಕರೆದುಕೊಂಡು‌ ಹೋಗಿದ್ದ ವೇಳೆ ಪೊಲೀಸರನ್ನು ನೂಕಿ ತಪ್ಪಿಸಿಕೊಳ್ಳಲು ಯುತ್ನಸಿದ್ದಾನೆ. ಮೊದಲು ಎರಡು ಸುತ್ತು ಗಾಳಿಯಲ್ಲಿ ಗುಂಡು ಹೊಡೆಯಲಾಗಿದೆ. ಫರಾನ್ ಹೆದರದೆ ಇದ್ದಾಗ, ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆಯ ಮಹಿಳಾ ಇನ್ಸ್ಪೆಕ್ಟರ್ ಕವಿತಾ ಮಾಡ್ಯಾಳ ಫರಾನ್ ಮೇಲೆ ಫೈರಿಂಗ್‌ ಮಾಡಿದ್ದಾರೆ.

ಇದನ್ನೂ ಓದಿ:ಗುಂಡು ಹಾರಿಸಿದರೂ ಪೊಲೀಸ್ ಜೀಪ್​ ಮೇಲೆ ಕಲ್ಲು ಎಸೆದು ಪರಾರಿಯಾದ ಕಳ್ಳರು

ಇಬ್ಬರು‌ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪಿ

ಇನ್ನು ಫರಾನ್ ಶೇಕ್ ತನಗೆ ಸಹಾಯ ಮಾಡಿದ ಸಹಚರನ್ನು ತೋರಿಸಲು ಹೋದ ಸಮಯದಲ್ಲಿ ಇಬ್ಬರು‌ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ‌ಮಾಡಿದ್ದಾನೆ. ಹುಬ್ಬಳ್ಳಿಯ‌ ಕೇಶ್ವಾಪೂರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸುಜಾತಾ ಹಾಗೂ ಮಹೇಶ್ ‌ಮೇಲೆ‌ ಕಲ್ಲಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ಕವಿತಾ ಫೈರ್ ಮಾಡಿದ್ದಾರೆ. ಫರಾನ್ ಶೆಖ್ ಸಾಮನ್ಯ ಕ್ರಿಮಿನಲ್ ‌ಅಲ್ಲ, ಈ ನಟೋರಿಯಸ್ ಮೇಲೆ 15 ಕ್ಕೂ ಹೆಚ್ಚು ಕೇಸ್ ಗಳಿವೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್​ನಲ್ಲಿ ಅನೇಕ ಕೇಸ್​ಗಳಿವೆ. ಬಹುತೇಕ ಎಲ್ಲವೂ ಕಳ್ಳತನ , ಕೊಲೆ‌, ದರೋಡೆ ಕೇಸ್. ಇಂತಹ ಅಂತರಾಜ್ಯ ಕಳ್ಳನನ್ನ ಹುಬ್ಬಳ್ಳಿ ಪೊಲೀಸರು‌‌ ಮುಂಬೈನಲ್ಲಿ ಅರೆಸ್ಟ್ ಮಾಡಿ ಹುಬ್ಬಳ್ಳಿಗೆ ಕರೆತಂದಿದ್ದರು.

ಕಳೆದ 17 ಕ್ಕೆ ಬಂಗಾರದ ಅಂಗಡಿ ಕಳ್ಳತನ ಮಾಡೋ‌ ಮುಂಚೆ 14 ರಂದು ಗಾಮನಗಟ್ಟಿ ಪ್ರದೇಶದ ಇಬ್ಬರನ್ಮು ಪರಿಚಯ ಮಾಡಿಕೊಂಡಿದ್ದ. ಸಿಟಿ ಹೇಗಿದೆ, ಗೋಲ್ಡ್ ಶಾಪ್ ಎಲ್ಲಿವೆ ಎನ್ನೋದನ್ನ‌ ತಿಳಿಯಲು ಅವರಿಗೆ 2 ಸಾವಿರ ಹಣ ನೀಡಿದ್ದ. ಅದರ ಆಧಾರದ ಮೇಲೆ 17 ರಂದು ಮೂರು ಜನರ ಟೀಮ್,  ಗೋಲ್ಡ್ ಶಾಪ್ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಇವತ್ತು ತನಗೆ ಸಹಾಯ ಮಾಡಿದವರನ್ನ‌ ತೋರಿಸಲು ಹೋದ ಸಮಯದಲ್ಲಿ ತಪ್ಪಿಸಿಕೊಳ್ಳಲು ‌ಮುಂದಾದ ವೇಳೆ ಪೊಲೀಸರು ಫೈರಿಂಗ್‌ ಮಾಡಿದ್ದಾರೆ. ಕಳ್ಳತನ‌ ಕೇಸ್​ನ ಪ್ರಮುಖ ಆರೋಪಿಯಾಗಿರೋ ಫರಾನ್ ಶೇಖ್​ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಒಟ್ಟಾರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ‌ ಬೆಳ್ಳಂಬೆಳಗ್ಗೆ ಬಂದೂಕು ಸದ್ದು‌ ಮಾಡಿದೆ. ಸತತ ಹತ್ತು ದಿನಗಳಿಂದ ಈ ಗ್ಯಾಂಗ್ ಬೆನ್ನು ಬಿದ್ದಿರೋ ಪೊಲೀಸರು ನಟೋರಿಯಸ್​ನನ್ನ‌ ಬಂಧಿಸಿದೆ. ಇನ್ನುಳಿದ ಅಂತರಾಜ್ಯ ಕಳ್ಳರನ್ನು ಶೀಘ್ರವೇ ಅರೆಸ್ಟ್ ಮಾಡ್ತೀವಿ ಎಂದು ಹುಬ್ಬಳ್ಳಿ ಪೊಲೀಸರು ಹೇಳುತ್ತಿದ್ದಾರೆ. ನಟೋರಿಯಸ್ ಮೇಲೆ ಫೈರ್ ‌ಮಾಡಿದ ಮಹಿಳಾ ಅಧಿಕಾರಿಯ ಧೈರ್ಯವೂ ಮೆಚ್ಚುಗೆಗೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?