AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿನ ಮನೆ ಆಯ್ತು, ಈಗ ತರಕಾರಿ ವ್ಯಾಪಾರಿಯ ತಳ್ಳುಗಾಡಿ ಕದ್ದೊಯ್ದ ಖತರ್ನಾಕ್​ ಕಳ್ಳ

ನಿನ್ನೆಯಷ್ಟೇ (ಜು.16) ಮೈಸೂರಿನಲ್ಲಿ ಸಾವಿನ ಮನೆಯನ್ನೂ ಬಿಡದ ಖದೀಮರು, ತಾಯಿ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ವೇಳೆ ಮನೆಯಲ್ಲಿದ್ದ ಚಿನ್ನಾಭರಣ, ನಗದನ್ನು ದೋಚಿದ ಘಟನೆ ನಡೆದಿತ್ತು. ಅದರ ಬೆನ್ನಲ್ಲೇ ಇದೀಗ ಕಳ್ಳನೊಬ್ಬ ಮೈಸೂರಿನ ಹೃದಯಭಾಗದಲ್ಲಿರುವ ಸರಸ್ವತಿಪುರಂನಲ್ಲಿ ತಳ್ಳುವ ಗಾಡಿಯನ್ನ ಕಳ್ಳತನ ಮಾಡಿದ್ದಾನೆ.

ಸಾವಿನ ಮನೆ ಆಯ್ತು, ಈಗ ತರಕಾರಿ ವ್ಯಾಪಾರಿಯ ತಳ್ಳುಗಾಡಿ ಕದ್ದೊಯ್ದ ಖತರ್ನಾಕ್​ ಕಳ್ಳ
ಮೈಸೂರಿನಲ್ಲಿ ತರಕಾರಿ ವ್ಯಾಪಾರಿಯ ತಳ್ಳುಗಾಡಿಯನ್ನ ಕದ್ದೊಯ್ದ ಖತರ್ನಾಕ್​ ಕಳ್ಳ
ರಾಮ್​, ಮೈಸೂರು
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jul 17, 2024 | 8:12 PM

Share

ಮೈಸೂರು, ಜು.17: ಕಾಲ ಕೆಟ್ಟೋಗಿದೆ ಶ್ರೀಮಂತರ ಬಳಿ ಚಿನ್ನ, ಬೆಳ್ಳಿ ಹಣ ಕದಿಯುತ್ತಿದ್ದವರು, ಈಗ ಬಡವರ ವಸ್ತುಗಳನ್ನು ಕದಿಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿ(Mysore)ನಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿಯಾಗಿದೆ. ಹೌದು,  ಮೈಸೂರಿನ ಹೃದಯಭಾಗದಲ್ಲಿರುವ ಸರಸ್ವತಿಪುರಂನಲ್ಲಿ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುತ್ತಿದ್ದ ತಿಮ್ಮೇಗೌಡ ಎಂಬುವವರ ತಳ್ಳುವ ಗಾಡಿಯನ್ನು ಕಳ್ಳತನ ಮಾಡಲಾಗಿದೆ.

ಪ್ರತಿದಿನವೂ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡಿ ಜೀವನ ಮಾಡುತ್ತಿದ್ದ ತಿಮ್ಮೇಗೌಡ ಅವರ ಕುಟುಂಬ ಈಗ ಸಂಕಷ್ಟಕ್ಕೆ ಸಿಲುಕಿದೆ. ‘ಸಾಲ ಸೋಲ ಮಾಡಿ ಒಂದು ತಳ್ಳುವ ಗಾಡಿ ಖರೀದಿ ಮಾಡಿ ಅದರಲ್ಲಿ ಈರುಳ್ಳಿ ತರಕಾರಿ ಮಾರಿ ಜೀವನ ನಡೆಸುತ್ತಿದ್ದರು. ಪ್ರತಿದಿನ ಸರಸ್ವತಿಪುರಂ ಬಡಾವಣೆಯ ಜವರೇಗೌಡ ಪಾರ್ಕ್‌ ಬಳಿ ವ್ಯಾಪಾರ ಮಾಡುತ್ತಿದ್ದರು. ಕಳೆದ ಸೋಮವಾರ ಸಹ ಎಂದಿನಂತೆ ವ್ಯಾಪಾರ ಮಾಡುತ್ತಿದ್ದರು. ಆದರೆ, ಮಧ್ಯಾಹ್ನದ ವೇಳೆಗೆ ಮಳೆ ಶುರುವಾದ ಕಾರಣ ವ್ಯಾಪಾರ ನಿಲ್ಲಿಸಿ ತರಕಾರಿ ಗಾಡಿಗೆ ಟಾರ್ಪಲ್ ಹೊದಿಸಿ ಮನೆಗೆ ಊಟಕ್ಕೆ ಹೋಗಿದ್ದರು.

ಇದನ್ನೂ ಓದಿ:ಹಣ ಹಾಕದೆಯೇ ಎಟಿಎಂ ಕಳ್ಳತನವೆಂದು ದೂರು: ಬೆಡ್ ಶೀಟ್ ಹಾಕ್ಕೊಂಡು ಬಂದಿದ್ದ ಬ್ಯಾಂಕ್ ಸಿಬ್ಬಂದಿಯ ಕಳ್ಳಾಟ ಬಯಲು

ಈ ವೇಳೆ ಅಲ್ಲಿಗೆ ಬಂದ ಬೈಕ್ ಸವಾರ, ಆ ಗಾಡಿಯನ್ನು ತನ್ನ ಬೈಕ್ ಹಿಂಭಾಗಕ್ಕೆ ಕಟ್ಟಿಕೊಂಡು ಹೋಗಿದ್ದಾನೆ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಈ ಸಂಬಂಧ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧಾರಿಸಿ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಇದೆಲ್ಲಾ ಏನೇ ಇರಲಿ, ಜೀವನಕ್ಕೆ ಆಧಾರವಾಗಿದ್ದ ಗಾಡಿಯನ್ನೇ ಪಾಪಿಯೊಬ್ಬ ಕಳ್ಳತನ ಮಾಡಿರುವುದು ದುರಂತವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:12 pm, Wed, 17 July 24