IPL Betting Murder: ಐಪಿಎಲ್​ ಬೆಟ್ಟಿಂಗ್ ಹಣ ಕೊಡದಿದ್ದಕ್ಕೆ ಹತ್ಯೆ -ಅಪರಾಧಿ ಫಾರೂಕ್​ಗೆ ಜೀವಾವಧಿ ಶಿಕ್ಷೆ

| Updated By: ಸಾಧು ಶ್ರೀನಾಥ್​

Updated on: Apr 11, 2022 | 9:04 PM

IPL​ ಕ್ರಿಕೆಟ್​ ಬೆಟ್ಟಿಂಗ್​ನಲ್ಲಿ ವಿಕ್ರಮ್​ 2,000 ರೂ. ಸೋತಿದ್ದ. ಆ ಬಾಬತ್ತಿನಲ್ಲಿ ವಿಕ್ರಮ್ ಹಣ ನೀಡದಿದ್ದಕ್ಕೆ ಫಾರೂಕ್ ಚಾಕುವಿನಿಂದ ಇರಿದು ಕೊಂದಿದ್ದ. ಧಾರವಾಡದ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

IPL Betting Murder: ಐಪಿಎಲ್​ ಬೆಟ್ಟಿಂಗ್ ಹಣ ಕೊಡದಿದ್ದಕ್ಕೆ ಹತ್ಯೆ -ಅಪರಾಧಿ ಫಾರೂಕ್​ಗೆ ಜೀವಾವಧಿ ಶಿಕ್ಷೆ
ಐಪಿಎಲ್​ ಬೆಟ್ಟಿಂಗ್ ಹಣ ಕೊಡದಿದ್ದಕ್ಕೆ ಹತ್ಯೆ -ಅಪರಾಧಿ ಫಾರೂಕ್​ಗೆ ಜೀವಾವಧಿ ಶಿಕ್ಷೆ
Follow us on

ಧಾರವಾಡ: ಐಪಿಎಲ್​ ಬೆಟ್ಟಿಂಗ್ ಹಣ ಕೊಡದಿದ್ದಕ್ಕೆ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಅಪರಾಧಿ ಫಾರೂಕ್​ ಬೆಳಗಾಂವಕರಗೆ ಜೀವಾವಧಿ ಶಿಕ್ಷೆ ವಿಧಿಸಿ, ಧಾರವಾಡದ 4ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. 2019ರಲ್ಲಿ ಪಿ.ಜಿ.ಯಲ್ಲಿ ವಿಕ್ರಮ್​ನನ್ನು ಫಾರೂಕ್ ಕೊಂದಿದ್ದ. IPL​ ಕ್ರಿಕೆಟ್​ ಬೆಟ್ಟಿಂಗ್​ನಲ್ಲಿ ವಿಕ್ರಮ್​ 2,000 ರೂ. ಸೋತಿದ್ದ. ಆ ಬಾಬತ್ತಿನಲ್ಲಿ ವಿಕ್ರಮ್ ಹಣ ನೀಡದಿದ್ದಕ್ಕೆ ಫಾರೂಕ್ ಚಾಕುವಿನಿಂದ ಇರಿದು ಕೊಂದಿದ್ದ. ಧಾರವಾಡದ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಐಪಿಎಲ್ ಬೆಟ್ಟಿಂಗ್​, ಇಬ್ಬರ ಬಂಧನ:
ಬಳ್ಳಾರಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದ್ದ ಅಡ್ಡೆಗಳ ಮೇಲೆ ಪ್ರತ್ಯೇಕವಾಗಿ ದಾಳಿ ನಡೆಸಿರುವ ಬಳ್ಳಾರಿ ನಗರದ ಗಾಂಧಿನಗರ ಮತ್ತು ಬ್ರೂಸ್‌ಪೇಟೆ ಪೊಲೀಸ್ ಠಾಣೆಗಳ ಪೊಲೀಸರು, ಇಬ್ಬರನ್ನು ಬಂಧಿಸಿ, 3 ಲಕ್ಷಕ್ಕೂ ಅಧಿಕ ರೂ. ನಗದು, 2 ಮೊಬೈಲ್‌ಗಳನ್ನು ವಶಪಡಿಸಿಕೊಂಡು 48 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರಸಕ್ತ ಐಪಿಎಲ್ ಕ್ರಿಕೆಟ್ ಲೀಗ್‌ನಲ್ಲಿ ಎಪ್ರಿಲ್ 8 ರಂದು ನಡೆದ ಪಂಚಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಪಂದ್ಯಕ್ಕೆ ನಗರದ ನಟರಾಜ್ ಚಿತ್ರಮಂದಿರ ಬಳಿ ಸಾರ್ವಜನಿಕ ಸ್ಥಳದಲ್ಲಿ ಬೆಟ್ಟಿಂಗ್ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಬ್ರೂಸ್‌ಪೇಟೆ ಠಾಣೆ ಪೊಲೀಸರು, ಬಾಪೂಜಿ ನಗರದ ಮಂಜುನಾಥ್ (35) ಎನ್ನುವನನ್ನು ಬಂಧಿಸಿ, ಆತನೊಂದಿಗೆ ಸಂಪರ್ಕದಲ್ಲಿದ್ದ 24 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಾಳಿಯಲ್ಲಿ ಬೆಟ್ಟಿಂಗ್ ಕಟ್ಟಿದ್ದ 1.55 ಲಕ್ಷ ರೂ. ನಗದು, 1 ಮೊಬೈಲ್‌ನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಇದೇ ಮ್ಯಾಚ್‌ಗೆ ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗಾಂಧಿನಗರ ಠಾಣೆ ಪೊಲೀಸರು ಸಹ ನಗರದ ಅಮೃತ ಲ್ಯಾಬ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ನಡೆಸಿದ್ದು, ಬಾಪೂಜಿ ನಗರದ ಸಣ್ಣ ತಾಯಪ್ಪ (36) ಎಂಬುವನನ್ನು ಬಂಧಿಸಿ, 1.55 ಲಕ್ಷ ರೂ. ನಗದು, ಒಂದು ಮೊಬೈಲ್‌ನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಬಳಿ ದೊರೆತ ಮಾಹಿತಿ ಮೇರೆಗೆ 24 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಎಸ್‌ಪಿ ಸೈದುಲು ಅಡಾವತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೂ ಓದಿ:
Qantas Airways: ಬೆಂಗಳೂರಿನಿಂದ ಸಿಡ್ನಿಗೆ ತಡೆರಹಿತ ವಿಮಾನ ಹಾರಾಟ! ಕ್ವಂಟಾಸ್‌ನಿಂದ ಇಂಡಿಗೊ ಸಹಯೋಗದಲ್ಲಿ ನೇರ ವಿಮಾನ

ಇದೂ ಓದಿ:
SSLC ಪರೀಕ್ಷೆಗಾಗಿ ತಾಯಿ ಜೊತೆ ಹೋಗ್ತಿದ್ದಾಗ ಅಪಘಾತ, ಆಂಬುಲೆನ್ಸ್ ನಲ್ಲಿ ವಿದ್ಯಾರ್ಥಿನಿಯ ಕರೆತಂದು ಪರೀಕ್ಷೆ ಬರೆಯಿಸಿದ ಶಾಲೆ!

Published On - 9:02 pm, Mon, 11 April 22