ಹುಬ್ಬಳ್ಳಿ, ಸೆಪ್ಟೆಂಬರ್ 9: ಜೆಡಿಎಸ್, ಬಿಜೆಪಿ ಮೈತ್ರಿ ಬಹುತೇಕ ಪೂರ್ವ ನಿರ್ಧಾರ ಆಗಿತ್ತು. ಈ ಮೈತ್ರಿಯೊಂದಿಗೆ JDS ಜಾತ್ಯತೀತ ಅಲ್ಲ ಅನ್ನುವುದು ಸಾಬೀತು ಆಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶ ಉಳಿವಿಗಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ ಅಂದರು. ಇಲ್ಲಿವರೆಗೂ ದೇಶ ಹಾಳಾಗಿತ್ತು ಅಂತಾನೇ ಅರ್ಥ ಅಲ್ಲವೇ. ಹಾಗಿದ್ದರೆ ಕಳೆದ 10 ವರ್ಷದಲ್ಲಿ ಅಧಿಕಾರದಲ್ಲಿ ಇದ್ದವರು ಯಾರು ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ವಿಚಾರವಾಗಿ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ಏನು ಹೇಳಿಕೆ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ಯಾವ ಅರ್ಥದಲ್ಲಿ ಹೇಳಿದ್ದಾರೆ ಅವರಿಂದಲೇ ತಿಳಿಯಬೇಕು. ಬಿ.ಕೆ.ಹರಿಪ್ರಸಾದ್ಗೆ ಅಸಮಾಧಾನ ಇದೆ ಅಂತಾ ಅನಿಸುವುದಿಲ್ಲ. ಕಾಂಗ್ರೆಸ್ ದೊಡ್ಡ ಪಕ್ಷ, ಈ ನಿಟ್ಟಿನಲ್ಲಿ ಪಕ್ಷ ಸೂಕ್ತ ಕ್ರಮ ಕೈಗೊಳ್ಳುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇಂಡಿಯಾ-ಭಾರತ ಎರಡು ಒಂದೇ ತಾನೆ? ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ದ ಬೇಸರ ವ್ಯಕ್ತಪಡಿಸಿದ ಸ್ಪೀಕರ್ ಯುಟಿ ಖಾದರ್
ಸನಾತನ ಧರ್ಮದ ಕುರಿತು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸನಾತನ ಧರ್ಮದ ಕುರಿತು ಹೇಳಿಕೆ ಕೊಟ್ಟವರು ತಮಿಳುನಾಡಿನವರು. ಇದರ ವಿರುದ್ಧ ಕಾಂಗ್ರೆಸ್ ಬಹುತೇಕ ನಾಯಕರು ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿಯವರು ಅದೇ ಹೇಳಿಕೆಗಳನ್ನು ಕೊಡುವುದನ್ನು ಮಾಡಿದ್ದಾರೆ. ಅವರೇನಾದರೂ ಬೀದಿಗಿಳಿದು ಹೋರಾಟ ಮಾಡಿದ್ದಾರಾ ಎಂದರು.
ಇಷ್ಟು ಮಾತನಾಡುವ ಬಿಜೆಪಿ ನಾಯಕರು ಬೇಕಿದ್ದರೆ ತಮಿಳುನಾಡುವರೆಗೂ ಪಾದಯಾತ್ರೆ ಮಾಡಲಿ. ಸೆಕ್ಯುಲರ್ ಇರುವುದು ನಮ್ಮ ಪಕ್ಷದ ನಿಲುವು. ನಮ್ಮ ನಿಲುವಿಗೆ ನಾವು ಬದ್ಧರಿದ್ದೇವೆ. ಒನ್ ನೇಷನ್, ಒನ್ ಎಲೆಕ್ಷನ್ ಬೇಡ. ಒನ್ ನೇಷನ್ ಫ್ರೀ ಎಜುಕೇಶನ್ ಮಾಡಿ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಒನ್ ನೇಷನ್ ಒನ್ ಎಲೆಕ್ಷನ್, ಭಾರತ ಎಂದು ಹೆಸರು ಬದಲಾಯಿಸುವ ಇತ್ಯಾದಿ ಗಿಮಿಕ್ ನಡಿತಿವೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಸುಭಾಷ್ ಚಂದ್ರ ಬೋಸ್ ಅವರನ್ನು ಕಾಂಗ್ರೆಸ್ನವರೇ ಹತ್ಯೆ ಮಾಡಿದ್ದಾರೆ; ಬಸನಗೌಡ ಪಾಟೀಲ್ ಯತ್ನಾಳ್ ಆರೋಪ
ಇಲ್ಲಿವರೆಗೂ ಪ್ರಧಾನಿ ಮೋದಿ ಸರ್ಕಾರ ಅಂತಾನೆ ಬಿಂಬಿಸುತ್ತಾ ಬಂದರು. ಮೋದಿ ಸರ್ಕಾರ ಅಂತ ಪ್ರಚಾರ ಮಾಡಿದ್ದು ಇದೇ ಬಿಜೆಪಿ. ಮೇಕಿನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಶೈನಿಂಗ್ ಇಂಡಿಯಾ ಎಂಬಿತ್ಯಾದಿ ಇಂಡಿಯಾ ಪ್ರಮೋಟ್ ಮಾಡಿದ್ದು ಇವರೇ. ಈಗ ಭಾರತ ಪ್ರಮೋಟ್ ಮಾಡಲಿಕ್ಕೆ ಹೊರಟಿದ್ದಾರೆ.
ಪ್ರಧಾನಿ ಮೋದಿ ಅವರು ಪಾಪ್ಯುಲರ್ ಇದ್ದರೆ ಚುನಾವಣೆ ಬಂದಾಗ ಒಂದು ತಿಂಗಳು ಟಿವಿಯಲ್ಲಿ ಕಾಣಿಸಿಕೊಳ್ಳದಿರಲಿ. ಚುನಾವಣೆಯಲ್ಲಿ ಗೆದ್ದು ತೋರಿಸಲಿ. ಮೋದಿ ಅವರು ಮಾಡುತ್ತಿರುವ ಟ್ರಿಕ್ಸ್ನಿಂದ ಮೋದಿ ಅವರಿಗೆ ಮತ್ತು ಬಿಜೆಪಿಗೆ ಲಾಭ ಆಗಿರಬಹುದು. ಆದರೆ ದೇಶಕ್ಕೆ ಒಂದು ರೂಪಾಯಿ ಲಾಭವು ಆಗಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:30 pm, Sat, 9 September 23