ಹುಬ್ಬಳ್ಳಿ: ಜಿಲ್ಲೆಯ ಕಿಮ್ಸ್‌ನಲ್ಲಿ(KIMS Hospital) ಮಗು ಕಳ್ಳತನ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಮಗುವನ್ನ ತಾನೇ ಬೇರೆಯವರಿಗೆ ಕೊಟ್ಟು ತಾಯಿ ನಾಟಕವಾಡಿದ್ಲಾ ಎಂಬ ಅನುಮಾನ ಹುಟ್ಟಿದೆ. ಜೂನ್ 13ರಂದು 40 ದಿನದ ಮಗುವನ್ನು ತಾಯಿ ಕೈಯಿಂದ ಕಿತ್ತುಕೊಂಡು ಹೋಗಲಾಗಿತ್ತು ಎಂದು ಸುದ್ದಿಯಾಗಿತ್ತು. ಆದ್ರೆ ಈಗ ಈ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಮಗು ಕಿತ್ತುಕೊಂಡು ಹೋದ್ರು ಎಂದು ರಂಪಾಟ ಮಾಡಿದ್ದ ತಾಯಿಯೇ ಇಷ್ಟೆಲ್ಲಾ ಡ್ರಾಮ ಕ್ರಿಯೆಟ್ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ಖಾಕಿ ತನಿಖೆಯಲ್ಲಿ ಮಗು ಕಳ್ಳತನದ ಅಸಲಿಯತ್ತು ಬಯಲಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳದ ನೆಹರೂ ನಗರದ ನಿವಾಸಿ ಸಲ್ಮಾ, ವಾಂತಿಯಿಂದ ಬಳಲುತ್ತಿದ್ದ 40 ದಿನದ ಹೆಣ್ಣು ಮಗುವನ್ನು ಬೇರೆಯವರಿಗೆ ನೀಡಿದ್ದ ಸ್ಫೋಟಕ ಸತ್ಯ ಬಯಲಾಗಿದೆ. ಈ ಬಗ್ಗೆ ಟಿವಿ9ಗೆ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ತಾಯಿ ಸಲ್ಮಾ ತಾನೇ ಕಾರಿಡಾರ್ಗೆ ಬಂದು ಮಗು ನೀಡಿ ಇಷ್ಟೆಲ್ಲಾ ಡ್ರಾಮ ಮಾಡಿದ್ದಾರೆ. ಕಿಮ್ಸ್ ಸಿಸಿಟಿವಿ ಪರಿಶೀಲನೆ ಬಳಿಕ ತಾಯಿ ಸಲ್ಮಾ ಬೇರೆಯವರಿಗೆ ಮಗು ನೀಡಿ, ಕಿಮ್ಸ್ನಲ್ಲಿನ 103 ವಾಡ್೯ ನಲ್ಲಿದ್ದ ಮಗುವನ್ನ ಕಸಿದುಕೊಂಡು ಹೋದರೆಂದು ಕಥೆ ಕಟ್ಟಿದ್ದ ನಾಟಕ ಬಯಲಾಗಿದೆ. ಸದ್ಯ ಪೋಷಕರ ಮನವಿ ಮೇರೆಗೆ ಪೊಲೀಸರು ತಾಯಿ ಮಗುವಿಗೆ ಚಿಕೆತ್ಸೆಗೆ ಅನುವು ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಜೂನ್ 20 ಮತ್ತು 21ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಬೇಟಿ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
ಘಟನೆ ಹಿನ್ನೆಲೆ ಜೂನ್ 13 ನಾಪತ್ತೆಯಾಗಿದ್ದ 40 ದಿನದ ಮಗು ಕಿಮ್ಸ್ ಆಸ್ಪತ್ರೆ (KIMS Hospital) ಆವರಣದಲ್ಲಿ ಪತ್ತೆಯಾಗಿತ್ತು. ಆಸ್ಪತ್ರೆಯಲ್ಲಿ ಮಧ್ಯಾಹ್ನದ ಹೊತ್ತಿಗೆ ತಾಯಿ ಕೈಯಲ್ಲಿದ್ದ ಹಸುಗೂಸನ್ನು ಖದೀಮರು ಕಿತ್ತುಕೊಂಡು ಪರಾರಿಯಾಗಿದ್ದರು. ಮಗುವಿಗಾಗಿ ಪೊಲೀಸರು ಮೂರು ತಂಡ ರಚಿಸುವ ಮೂಲಕ ಬಲೆ ಬೀಸಿದ್ದರು. ಪೊಲೀಸರ ತನಿಖೆ ಚುರುಕುಗೊಂಡ ಹಿನ್ನೆಲೆ ಭಯಗೊಂಡ ಆರೋಪಿತರು ಮಗುವನ್ನು ತಂದು ಆಸ್ಪತ್ರೆ ಆವರಣದಲ್ಲಿ ಬಿಟ್ಟು ಹೋಗಿದ್ದರು. ಕುಂದಗೋಳದ ನೆಹರು ನಗರದ ನಿವಾಸಿ ಉಮ್ಮೇ ಜೈನಾಬ್, ಹುಸೇನ್ ಸಾಬ್ ಶೇಖ್ ಎಂಬ ದಂಪತಿಗೆ 40 ದಿನಗಳ ಹಿಂದೆ ಮಗು ಜನಿಸಿತ್ತು. ಉಮ್ಮೇ ಜೈನಾಬ್ಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಖದೀಮರು ಮಗುವನ್ನು ಕದ್ದು ಪರಾರಿಯಾಗಿದ್ದರು ಎಂದು ಕಥೆ ಕಟ್ಟಲಾಗಿದೆ. ಸದ್ಯ ಈ ಪ್ರಕರಣ ಸತ್ಯಾಂಶ ಬಯಲಾಗಿದೆ.
ಹುಬ್ಬಳ್ಳಿಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ