2 ಎಕರೆ ಜಮೀನು ಇದ್ದರೆ ಭೂಪರಿವರ್ತನೆಗೆ ಅವಕಾಶ; ಸಚಿವ ಎಂಬಿ ಪಾಟೀಲ್

ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಪಾಟೀಲ, ಎರಡು ಎಕರೆ ಜಮೀನು ಇದ್ದರೆ ಪರಿವರ್ತನೆ ಮಾಡಲು ಅವಕಾಶ ಕೊಡುತ್ತೇವೆ. ಫುಡ್ ಇಂಡಸ್ಟ್ರಿ ಮಾಡುವವರಿದ್ದರೆ ಮಾಡಬಹುದು. ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

2 ಎಕರೆ ಜಮೀನು ಇದ್ದರೆ ಭೂಪರಿವರ್ತನೆಗೆ ಅವಕಾಶ; ಸಚಿವ ಎಂಬಿ ಪಾಟೀಲ್
ಎಂಬಿ ಪಾಟೀಲ್

Updated on: Jun 26, 2023 | 10:33 PM

ಧಾರವಾಡ: ಎರಡು ಎಕರೆ ಜಮೀನು ಇದ್ದರೆ ಭೂಪರಿವರ್ತನೆ ಮಾಡಲು ಅವಕಾಶ ನೀಡುತ್ತೇವೆ. ಅಂಥವರು ಭೂಪರಿವರ್ತನೆ ಮಾಡಿಸಿಕೊಂಡು ಆಹಾರ ಉದ್ಯಮ ಮಾಡಬಹುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್​ (MB Patil) ಹೇಳಿದ್ದಾರೆ. ಧಾರವಾಡದಲ್ಲಿ (Dharawad) ಮಾತನಾಡಿದ ಅವರು, ರಾಜ್ಯದಲ್ಲಿ ಆಹಾರ ಉದ್ಯಮ ಬೆಳೆಯಲು ಪ್ರೋತ್ಸಾಹ ನೀಡುತ್ತೇವೆ. ಭೂಪರಿವರ್ತನೆ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಮಾವಿನ ಮಾರುಕಟ್ಟೆ ದರ ಕುಸಿದಾಗ ಆಹಾರ ಸಂಸ್ಕರಣೆ (ಫುಡ್ ಪ್ರೊಸೆಸ್) ಮಾಡಬಹುದು. ಕೈಗಾರಿಕಾ ಪ್ರದೇಶದಲ್ಲಿ ತಪ್ಪು ಏನಿದೆ ನೋಡಿಕೊಂಡು ಸುಧಾರಣೆ ತರ್ತೇವೆ ಎಂದು ಅವರು ಹೇಳಿದ್ದಾರೆ.

ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಪಾಟೀಲ, ಎರಡು ಎಕರೆ ಜಮೀನು ಇದ್ದರೆ ಪರಿವರ್ತನೆ ಮಾಡಲು ಅವಕಾಶ ಕೊಡುತ್ತೇವೆ. ಫುಡ್ ಇಂಡಸ್ಟ್ರಿ ಮಾಡುವವರಿದ್ದರೆ ಮಾಡಬಹುದು. ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ. ಆಹಾರ ಉದ್ಯಮ ಬೆಳೆಸಲು ಪ್ರೋತ್ಸಾಹ ನೀಡುತ್ತೇವೆ. ಧಾರವಾಡದಲ್ಲಿ ಮಾವಿನ ಹಣ್ಣಿನ ಜೊತೆಗೆ ಬೇರೆ ಬೇರೆ ರೀತಿಯ ರಸ ತೆಗೆಯುತಿದ್ದಾರೆ. ಇದು ವಿದೇಶಕ್ಕೆ ರಫ್ತಾಗುತ್ತಿದೆ. ಮಾವಿನ ಮಾರುಕಟ್ಟೆ ಬೆಲೆ ಕುಸಿತ ಅದಾಗ ಫುಡ್ ಪ್ರೊಸೆಸ್ ಮಾಡಬಹುದು. ಇದರಿಂದ ಬೆಳೆಗಾರರಿಗೆ ಬೆಂಬಲ ಸಿಗಲಿದೆ. ಇದನ್ನು ನೋಡಲು ಬಂದಿದ್ದೆ ಎಂದು ಅವರು ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: Did DK Suresh warn MB Patil? ಯಾರಿಂದಲೂ ವಾರ್ನ್ ಮಾಡಿಸಿಕೊಳ್ಳುವಷ್ಟು ದುರ್ಬಲ ನಾನಲ್ಲ: ಎಂಬಿ ಪಾಟೀಲ್, ಸಚಿವರು

ಕೈಗಾರಿಕಾ ಪ್ರದೇಶದಲ್ಲಿ ತಪ್ಪು ಏನಿದೆ ನೋಡಿಕೊಂಡು ಸುಧಾರಣೆ ತರಬೇಕಿದೆ. ಲಾರಿಗಳು ಬರಲು ಕೈಗಾರಿಕಾ ಪ್ರದೇಶಕ್ಕೆ ರಸ್ತೆ ಬೇಕು. ಅದನ್ನು ಪರಿಶೀಲಿಸಲೆಂದೇ ಇಲ್ಲಿಗೆ ಬಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:32 pm, Mon, 26 June 23

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us