AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಚ್‌ಡಿ ಪದವಿ ಪ್ರದಾನ ಮಾಡದೇ ಘಟಿಕೋತ್ಸವ ಮುಗಿಸಿದ ಕರ್ನಾಟಕ ವಿವಿ: ಭುಗಿಲೆದ್ದ ಆಕ್ರೋಶ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ 73ನೇ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್‌ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ನಮಗೂ ರಾಜ್ಯಪಾಲರಿಂದಲೇ ಪ್ರಮಾಣ ಪತ್ರ ಕೊಡಿಸಿ ಎಂದು ಪಿಎಚ್‌ಡಿ ಪದವೀಧರರಿಂದ ಪ್ರತಿಭಟನೆ ಮಾಡಲಾಗಿದೆ. ಪಿಎಚ್‌ಡಿ ಪದವಿ ಪ್ರದಾನ ಮಾಡದೇ ಘಟಿಕೋತ್ಸವ ಅಂತ್ಯ ಮಾಡಲಾಯಿತು.

ಪಿಎಚ್‌ಡಿ ಪದವಿ ಪ್ರದಾನ ಮಾಡದೇ ಘಟಿಕೋತ್ಸವ ಮುಗಿಸಿದ ಕರ್ನಾಟಕ ವಿವಿ: ಭುಗಿಲೆದ್ದ ಆಕ್ರೋಶ
ಪದವೀಧರರ ಪ್ರತಿಭಟನೆ
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಗಂಗಾಧರ​ ಬ. ಸಾಬೋಜಿ

Updated on:Oct 30, 2023 | 3:02 PM

ಧಾರವಾಡ, ಅಕ್ಟೋಬರ್​​​​ 30: ಕರ್ನಾಟಕ ವಿಶ್ವ ವಿದ್ಯಾಲಯ (Karnataka University) ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವೀಧರರಿಂದ ಪ್ರತಿಭಟನೆ ಮಾಡಲಾಗಿದೆ. ನಮಗೂ ರಾಜ್ಯಪಾಲರಿಂದಲೇ ಪ್ರಮಾಣ ಪತ್ರ ಕೊಡಿಸಿ ಎಂದು ಪಟ್ಟು ಹಿಡಿದಿದ್ದರು. ಹಾಗಾಗಿ ಪಿಎಚ್‌ಡಿ ಪದವಿ ಪ್ರದಾನ ಮಾಡದೇ ಘಟಿಕೋತ್ಸವ ಅಂತ್ಯ ಮಾಡಲಾಯಿತು. ಮಧ್ಯಾಹ್ನದ ಬಳಿಕ ಪಿಎಚ್‌ಡಿ ಕೊಡೋದಾಗಿ ಕುಲಪತಿ ಸಮಜಾಯಿಷಿ ನೀಡಿದ್ದರು. ರಾಜ್ಯಪಾಲರ ಭಾಷಣದ ಬಳಿಕವೂ ಕಾರ್ಯಕ್ರಮ ಮುಂದುವರೆದಿದ್ದು, 263 ಜನರಿಗೆ ಪಿಎಚ್‌ಡಿ ಪದವೀಧರರಿಗೆ ಪದವಿ ಪ್ರದಾನ ಮಾಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ್​​​ ಹೆಸರಿನಲ್ಲೂ ಚಿನ್ನದ ಪದಕ ಪ್ರದಾನ

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈ ವರ್ಷದಿಂದ ಚಿನ್ನದ ಪದಕ ದತ್ತಿ ಇಟ್ಟಿದ್ದು, ಹಾಗಾಗಿ ಅವರ​ ಹೆಸರಿನಲ್ಲೂ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ದಾದಾಗೌಡ ಪಾಟೀಲಗೆ ರಾಜ್ಯಪಾಲ ಥಾವರ್​ಚಂದ್​​​ ಗೆಹ್ಲೋಟ್​ರಿಂದ ಚಿನ್ನದ ಪದಕ ಪ್ರದಾನ ಮಾಡಲಾಗಿದೆ.

ಇದನ್ನೂ ಓದಿ: ಮತ್ತೆ ಮುನ್ನಲೆಗೆ ಬಂದ ದತ್ತಪೀಠ ವಿವಾದ: ಇಸ್ಲಾಂ ಆಚರಣೆಗೆ ಶ್ರೀರಾಮಸೇನೆ ವಿರೋಧ

ರಾಜ್ಯಪಾಲ ಥಾವರಚಂದ್ ಗೆಹ್ಲೋಟ್‌ರಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ 73ನೇ ಘಟಿಕೋತ್ಸವಕ್ಕೆ ಚಾಲನೆ ನೀಡಲಾಗಿದೆ. 254 ಸ್ವರ್ಣ ಪದಕಗಳನ್ನು 109 ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದೆ. 49 ಪಾರಿತೋಷಕ, 62 ಶಿಷ್ಯವೇತನ, 73 ರ್ಯಾಂಕ್​ ಹಾಗೂ 263 ಪಿ‌ಎಚ್‌ಡಿ ಪದವಿ ಪ್ರದಾನ ಮಾಡಲಾಗಿದೆ

ಇದನ್ನೂ ಓದಿ: ನಮ್ಮ ಮೆಟ್ರೋ ಹೆಸರು ಬದಲಾವಣೆ: ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಜೋರು, ಬೆಂಗಳೂರಿಗರಿಗೆ ಭಾವನಾತ್ಮಕ ವಿಷಯ ಎಂದ ನೆಟ್ಟಿಗರು

ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಸಮಾಜ ಸೇವಕರಾದ ರವಿಶಂಕರ ಗೋಪಾಳಪುರ ಮತ್ತು ಅರ್ಚನಾ ಸುರಾನಾರಿಗೆ ಗೌಡಾ ಪ್ರದಾನ ಮಾಡಿದ್ದು, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಭಾಗಿ ಆಗಿದ್ದರು.

ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಮಾಜಿ ಉಪರಾಷ್ಟ್ರಪತಿ ಬಿ.ಡಿ. ಜತ್ತಿ ಪುತ್ರರಾಗಿರುವ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಸಮಾಜ ಸೇವಾ ಕ್ಷೇತ್ರದಲ್ಲಿ ರವಿಶಂಕರ ಭೋಪಾಳಪುರ ಮತ್ತು ಅರ್ಚನಾ ಸುರಾನಾರಿಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್‌ರಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:01 pm, Mon, 30 October 23