AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಪ್ರಥಮ ಬಾರಿಗೆ ‘ಅರಿವೇ ಗುರು’ ಪ್ರಶಸ್ತಿ ಪ್ರದಾನ

ಕಲೆ, ಸಮಾಜವಿಜ್ಞಾನ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ವತಿಯಿಂದ ಅರಿವೆ ಗರು ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಪ್ರಥಮ ಬಾರಿಗೆ ‘ಅರಿವೇ ಗುರು’ ಪ್ರಶಸ್ತಿ ಪ್ರದಾನ
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ
TV9 Web
| Updated By: ವಿವೇಕ ಬಿರಾದಾರ|

Updated on:Oct 15, 2022 | 5:30 PM

Share

ಧಾರವಾಡ: ಮುಂಬೈ ಕರ್ನಾಟಕದ (Mumbai Karnataka) ದ್ವಾರಬಾಗಿಲು ಎಂದೇ ಪ್ರಸಿದ್ಧಿಯಾದ ವಿದ್ಯಾಕಾಶಿ ಧಾರವಾಡದಲ್ಲಿ (Dharwad) 1956 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ (Karnataka University) ಜನ್ಮ ತಾಳಿತು. ಕಳೆದ 75 ವರ್ಷಗಳಿಂದ ಉತ್ತರ ಕರ್ನಾಟಕದಲ್ಲಿ ಉಚ್ಛ ಶಿಕ್ಷಣದಲ್ಲಿ ಕ್ರಾಂತಿಯನ್ನು ಮಾಡಿದೆ. ಈ ಭಾಗದ ಯುವ ಜನತೆಗೆ ಜ್ಞಾನ ಪ್ರಸಾರ ಮಾಡುವ ಕಾರ್ಯದಲ್ಲಿ ಸಂಪೂರ್ಣ ಕೃತಕೃತ್ಯವಾಯಿತು. ಆಧುನಿಕ ಸಂಸ್ಕೃತಿಯ ಹೆಗ್ಗುರುತಾಗಿ ಯುವಕರ ತಿಳುವಳಿಕೆಯ ಜ್ಞಾನ ಕ್ಷೀತಿಜವನ್ನು ವಿಸ್ತಾರಗೊಳಿಸಿ ಇಡೀ ಭರತ ಖಂಡದಲ್ಲಿಯೇ ಪ್ರಖ್ಯಾತಿ ಹೊಂದಿ ಕಳೆದ ೨೫ ವರ್ಷಗಳಿಂದ ‘ಎ’ ಗ್ರೇಡ್ ಮಾನ್ಯತೆಯನ್ನು ಉಳಿಸಿಕೊಂಡು ಬಂದಿರುವುದು ಶಿಕ್ಷಣ ಕಾಶಿಗೆ ಹೆಗ್ಗುರುತಾಗಿದೆ.

ಕಲೆ, ವಿಜ್ಞಾನ, ತಂತ್ರಜ್ಞಾನ, ಸಾಮಾಜಿಕ ಜ್ಞಾನಗಳನ್ನು ಆಧುನಿಕರಿಗೆ ಬಿತ್ತುವಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ವಿಶೇಷ ಪಾತ್ರವನ್ನು ಗಳಿಸಿಕೊಂಡು ಬಂದಿದೆ. ಇಂಥ ದೂರದೃಷ್ಟಿ ಆಶಯವನ್ನು ಇಟ್ಟುಕೊಂಡು ಇಲ್ಲಿ ಆಡಳಿತ ನಡೆಸಿದ ಶ್ರೀ ಆರ್.ಎ.ಜಾಗೀರದಾರ, ಶ್ರೀ.ಸಿ.ಸಿ.ಹುಲಕೋಟಿ, ಡಾ.ಡಿ.ಸಿ.ಪಾವಟೆ, ಡಾ.ಎ.ಎಸ್.ಅಡಕೆ, ಶ್ರೀಮತಿ ಜಯಲಕ್ಷಮ್ಮಣ್ಣಿ, ಡಾ.ಆರ್.ಸಿ.ಹಿರೇಮಠ, ಪ್ರೊ.ಸದಾಶಿವ ಒಡೆಯರ, ಡಾ.ಡಿ.ಎಂ.ನಂಜುಂಡಪ್ಪ, ಡಾ.ಎಸ್.ಜಿ.ದೇಸಾಯಿ, ಡಾ.ಜಿ.ಕೆ.ನಾರಾಯಣರೆಡ್ಡಿ, ಡಾ.ಎಸ್.ರಾಮೇಗೌಡ, ಡಾ.ಎ.ಎಂ.ಪಠಾಣ, ಡಾ.ಎಂ.ಖಾಜಾಪೀರ, ಡಾ.ಎಸ್.ಕೆ.ಸೈದಾಪೂರ, ಡಾ.ಎಚ್.ಬಿ.ವಾಲಿಕಾರ, ಡಾ.ಪಿ.ಬಿ.ಗಾಯಿ ಹಾಗೂ ಇಂದಿನ ಪ್ರಸ್ತುತ ಕುಲಪತಿಗಳಾದ ಪ್ರೊ.ಕೆ.ಬಿ.ಗುಡಸಿ ಅವರ ವರೆಗೆ ಬೆಳೆದುಕೊಂಡು ಬಂದಿದೆ. ಇವರ ತಮ್ಮ ಆಡಳಿತಾವಧಿಯಲ್ಲಿ ವಿಶ್ವವಿದ್ಯಾಲಯಕ್ಕೆ ಮಹತ್ವವಾದ ಆಡಳಿತಾತ್ಮಕ ಕೊಡುಗೆಗಳನ್ನು ನೀಡಿದ್ದಾರೆ.

ಇದರಲ್ಲಿ ವಿಶೇಷವಾಗಿ ಪ್ರೊ.ಕೆ.ಬಿ.ಗುಡಸಿ ಅವರ ಕುಲಪತಿಗಳ ಆಡಳಿತ ಅವಧಿಯಲ್ಲಿ ಪ್ರಪ್ರಥಮ ಬಾರಿಗೆ ವಿಶ್ವವಿದ್ಯಾಲಯದಿಂದ ‘ಅರಿವೇ ಗುರು’ ಎಂಬ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡುವ ಕಾರ್ಯವನ್ನು ಜಾರಿಗೆ ತಂದಿರುವುದು ಕರ್ನಾಟಕದ ಜನತೆಗೆ ಸಂದ ಗೌರವದ ಅಭೂತಪೂರ್ವವಾದ ಕೊಡುಗೆಯಾಗಿದೆ. ಈ ದೆಸೆಯಲ್ಲಿ ಕ.ವಿ.ವಿ. ಕುಲಪತಿಗಳು ದಿನಾಂಕ ೧೨-೧೦-೨೦೨೨ ರಂದು ವಿಶ್ವವಿದ್ಯಾಲಯದಲ್ಲಿ ಸಭೆಯನ್ನು ನಡೆಸಿ ಪ್ರಶಸ್ತಿ ನೀಡಲು ತೀರ್ಮಾನಿಸಿರುವುದು ವಿಶ್ವವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದೆ.

ಅರಿವೇ ಗುರು ಪ್ರಶಸ್ತಿ

ಈ ವರ್ಷದ ಕರ್ನಾಟಕ ರಾಜ್ಯೋತ್ಸವ ದಿನದಂದೇ ‘ಅರಿವೇ ಗುರು’ ಎಂಬ ಹೆಸರಿನಲ್ಲಿ ಕಲೆ, ಸಮಾಜವಿಜ್ಞಾನ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಮೂರು ಜನ ಸಾಧಕರಿಗೆ ರಾಜ್ಯಮಟ್ಟದ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ತಲಾ ೨೫,೦೦೦/- ರೂಪಾಯಿ ನಗದು ಬಹುಮಾನ, ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಪ್ರಶಸ್ತಿಗಳ ಪಾರದರ್ಶಕ ಆಯ್ಕೆಗಾಗಿ ಉನ್ನತ ಮಟ್ಟದ ಶೋಧನಾ ಸಮಿತಿಯನ್ನು ಕೂಡಾ ರಚಿಸಲಾಗಿದೆ. ಪ್ರಶಸ್ತಿ ನೀಡುವ ಈ ಪ್ರಕ್ರಿಯೆಯು ಪ್ರತಿವರ್ಷ ಮುಂದುವರಿಯುವುದೆಂದು ಕ.ವಿ.ವಿ. ಕುಲಸಚಿವರಾದ ಶ್ರೀ ಯಶಪಾಲ್ ಕ್ಷೀರಸಾಗರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:10 pm, Sat, 15 October 22

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ