ಮಹದಾಯಿ ಜಲ ವಿವಾದ: ಮತ್ತೆ ನ್ಯಾಯಮಂಡಳಿಯ ಅವಧಿ ವಿಸ್ತರಣೆ, ಕೆರಳಿದ ಹೋರಾಟಗಾರರು

ಮಹದಾಯಿ ಜಲ ವಿವಾದ ನ್ಯಾಯಮಂಡಳಿಯ ಅವಧಿಯನ್ನು ಮತ್ತೆ ಆರು ತಿಂಗಳು ವಿಸ್ತರಿಸಿರುವುದು ಕರ್ನಾಟಕದ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. 2018ರ ಮಧ್ಯಂತರ ತೀರ್ಪಿನ ನೀರು ಇನ್ನೂ ಬಾರದಿರುವುದು ಮತ್ತು ಅಂತಿಮ ತೀರ್ಪು ವಿಳಂಬವಾಗುತ್ತಿರುವುದು ಹೋರಾಟಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಮಹದಾಯಿ ಯೋಜನೆಗೆ ಹೋರಾಟದ ಕಹಳೆ ಮೊಳಗುವ ಲಕ್ಷಣಗಳು ಗೋಚರಿಸಿತ್ತಿವೆ.

ಮಹದಾಯಿ ಜಲ ವಿವಾದ: ಮತ್ತೆ ನ್ಯಾಯಮಂಡಳಿಯ ಅವಧಿ ವಿಸ್ತರಣೆ, ಕೆರಳಿದ ಹೋರಾಟಗಾರರು
ಮಹದಾಯಿ ಜಲ ವಿವಾದ: ಮತ್ತೆ ನ್ಯಾಯಮಂಡಳಿಯ ಅವಧಿ ವಿಸ್ತರಣೆ, ಕೆರಳಿದ ಹೋರಾಟಗಾರರು
Edited By:

Updated on: Mar 02, 2025 | 3:03 PM

ಧಾರವಾಡ, ಮಾರ್ಚ್​​ 02: ಮಹದಾಯಿ (Mahadayi) ಜಲ ವಿವಾದ ಇಂದು ಮುಗಿಯುತ್ತೆ, ನಾಳೆ ಮುಗಿಯುತ್ತೆ ಅಂತಿರುವಾಗಲೇ ಇದೀಗ ಮಹದಾಯಿ ಜಲ ವಿವಾದ ನ್ಯಾಯಾಧೀಕರಣ ಅವಧಿ ಮತ್ತೆ ಆರು ತಿಂಗಳು ವಿಸ್ತರಣೆ ಮಾಡಲಾಗಿದೆ. ಪದೇ ಪದೇ ಇದೇ ರೀತಿಯಾಗಿ ಈ ಅವಧಿಯನ್ನು ವಿಸ್ತರಿಸುತ್ತಿರೋದು ಇದೀಗ ಮಹದಾಯಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಮಹದಾಯಿ ಯೋಜನೆಗೆ ಹೋರಾಟದ ಕಹಳೆ ಮೊಳಗುವ ಲಕ್ಷಣಗಳು ಗೋಚರಿಸಿತ್ತಿವೆ.

ಮಹದಾಯಿ ನೀರಿನ ಪಾಲು ಕರ್ನಾಟಕಕ್ಕೂ ಸೇರಿದ್ದು ಅನ್ನೋ ವಾದ ಭುಗಿಲೆದ್ದಾಗ, ಮೊದಲು ಅಡ್ಡಿ ಮಾಡಿದ್ದು ಗೋವಾ. ಗೋವಾದ ಬೆನ್ನಿಗೆ ನಿಂತು ಮಹಾರಾಷ್ಟ್ರ ಸಹ ಕ್ಯಾತೆ ತೆಗೆದಿತ್ತು. ಹೀಗಾಗಿ ಬಗೆ ಹರಿಯಬೇಕಾದ ನದಿ ನೀರು ಹಂಚಿಕೆ ವಿವಾದ ಜಟಿಲವಾದ ಕಾರಣಕ್ಕೆ, ಇದರ ಇತ್ಯರ್ಥಕ್ಕಾಗಿಯೇ ಮಹದಾಯಿ ಜಲ ವಿವಾದ ನ್ಯಾಯಮಂಡಳಿಯನ್ನು ಕೇಂದ್ರ ಜಲ ಶಕ್ತಿ ಸಚಿವಾಲಯ ರಚನೆ ಮಾಡಿತ್ತು. ಈ ನ್ಯಾಯ ಮಂಡಳಿ ಅವಧಿ ಇದೇ ಫೆಬ್ರುವರಿ 16ಕ್ಕೆ ಅಂತ್ಯಗೊಂಡಿದ್ದು, ಇಷ್ಟರಲ್ಲೇ ಅಂತಿಮ ತೀರ್ಪಿನ ವರದಿ ಬರಬೇಕಿತ್ತು. ಆದರೆ ಅದು ಮಾತ್ರ ಬರಲೇ ಇಲ್ಲ. ಹೀಗಾಗಿ ಈಗ ಮತ್ತೆ ಇದರ ಅವಧಿಯನ್ನು ಸಚಿವಾಲಯ ಆರು ತಿಂಗಳಿಗೆ ವಿಸ್ತರಿಸಿದೆ.

ಇದನ್ನೂ ಓದಿ: ಮಹದಾಯಿ ಯೋಜನೆ: ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ತೀರ್ಮಾನ

ಇದನ್ನೂ ಓದಿ
ಮಹದಾಯಿ ಯೋಜನೆ: ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ತೀರ್ಮಾನ
ಮಹದಾಯಿ ಜಲ ವಿವಾದ; ಕಣಕುಂಬಿಗೆ ಕೇಂದ್ರ ತಂಡ ಭೇಟಿ
ಮಹದಾಯಿಗೆ ಗೋವಾ ಸರ್ಕಾರದಿಂದ ಮತ್ತೆ ಕ್ಯಾತೆ: ಬೆಳಗಾವಿಗೆ ಕೇಂದ್ರ ತಂಡ ಭೇಟಿ
ಮಹದಾಯಿ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಬದ್ಧ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಇದು ಸಹಜವಾಗಿ ಮಹದಾಯಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರ 2018ರ ಆಗಸ್ಟ್ 14ರಂದು ಇದೇ ನ್ಯಾಯಾಧೀಕರಣ ಮಧ್ಯಂತರ ತೀರ್ಪಿನಲ್ಲಿ ಕರ್ನಾಟಕಕ್ಕ 13.42 ಟಿಎಂಸಿ ನೀರು ಹಂಚಿಕೆ ಮಾಡಿತ್ತು. ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಆದರೆ ಇದೀಗ ಮತ್ತೆ ಅವಧಿ ವಿಸ್ತರಣೆಯಾಗಿದೆ. ಹೀಗಾಗಿ ಮಲಪ್ರಭಾ ನದಿಯಲ್ಲಿನ ನಮ್ಮ ನೀರು ನಾವು ಕಾಪಾಡಿಕೊಳ್ಳುತ್ತೇವೆ‌. ಆಗ ಈ ಜನಪ್ರತಿನಿಧಿಗಳು ತಮ್ಮ ಮತದಾರರಿಗೆ ಎಲ್ಲಿಂದ ನೀರು ಕೊಡುತ್ತಾರೆ ನೋಡೋಣ ಎಂದು ಸವಾಲು ಹಾಕಿದ್ದಾರೆ. ಏಕೆಂದರೆ ಈಗ ಮಲಪ್ರಭಾದಿಂದ ನಾಲ್ಕು ಜಿಲ್ಲೆಗಳಿಗೆ ಬರುತ್ತಿರೋ ನೀರಿನಲ್ಲಿ ಬಹುತೇಕ ರೈತರ ಹೆಸರಿನಲ್ಲಿ ‌ಹಂಚಿಕೆಯಾಗಿದ್ದೇ ಇದೆ. ಹೀಗಾಗಿ ಈ ನೀರು ಕೊಡಬೇಡಿ ಅಂತಾ ಹೋರಾಟ ಮಾಡಿದರೆ ಏನಾದೀತು ಊಹಿಸಿ ಅಂತ ಮಹದಾಯಿ ಹೋರಾಟಗಾರರು ಎಚ್ಚರಿಕೆ ಕೊಟ್ಟಿದ್ದಾರೆ.

ಮಹದಾಯಿ ನ್ಯಾಯಾಧೀಕರಣ 2010ರ ನವೆಂಬರ್ 16ರಂದು ರಚನೆಯಾಗಿದೆ. ಆಗ 3 ವರ್ಷದೊಳಗೆ ಅಂದರೆ 2013ರ ನವೆಂಬರ್ 15ರೊಳಗೆ ಅಂತಿಮ ವರದಿ ಸಲ್ಲಿಸುವಂತೆ ನ್ಯಾಯಮಂಡಳಿಗೆ ಗಡುವು ನೀಡಲಾಗಿತ್ತು. ಆದರೆ ಆಗ ಇನ್ನಷ್ಟು ಕಾಲಾವಕಾಶ ಕೇಳಿದ್ದ ನ್ಯಾಯಮಂಡಳಿ ಯಾವುದೇ ವರದಿ ನೀಡಿರಲಿಲ್ಲ. ಆಗ ಕೇಂದ್ರ ಸರ್ಕಾರ 2025ರ ಫೆ.16 ರವರೆಗೆ ಗಡುವು ವಿಸ್ತರಣೆ ಮಾಡಿತ್ತು. ಈ ಮಧ್ಯೆ 2016ರಲ್ಲಿ ಕರ್ನಾಟಕಕ್ಕೆ ವ್ಯತಿರಿಕ್ತವಾದ ತೀರ್ಪು ಬಂದಾಗ ನವಲಗುಂದ-ನರಗುಂದ ಭಾಗದಲ್ಲಿ ಮಹದಾಯಿ ಹೋರಾಟ ಹಿಂಸಾತ್ಮಕ ರೂಪ ಪಡೆದಿತ್ತು. ನೂರಾರು ರೈತರು ಜೈಲು ಸೇರಿದ್ದರು. ಬಳಿಕ 2018ರ ಆಗಸ್ಟ್ 14ರಂದು ನ್ಯಾಯಮಂಡಳಿ ಮಧ್ಯಂತರ ತೀರ್ಪು ಬಂದಿತ್ತು‌‌. ಆಗಿನಿಂದ ಹೋರಾಟ ಸ್ವಲ್ಪ ತಣ್ಣಗಾಗುತ್ತ ಬಂದಿದೆ. ಆದರೆ ಈಗ ಅವಧಿ ವಿಸ್ತರಣೆಯಾಗಿದ್ದು, ಮತ್ತೆ ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಪುನಃ ಹೋರಾಟ ಮಾಡುತ್ತೇವೆ ಅಂತಾ ರೈತರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಮಹದಾಯಿ ಜಲ ವಿವಾದ; ಕಣಕುಂಬಿಗೆ ಕೇಂದ್ರ ತಂಡ ಭೇಟಿ, ಹೋರಾಟದ ಎಚ್ಚರಿಕೆ ನೀಡಿದ ಅಶೋಕ ಚಂದರಗಿ

ಕರ್ನಾಟಕದ ವಿಷಯದಲ್ಲಿ ಮಹದಾಯಿ ಜಟಿಲವಾಗುತ್ತಲೇ ಹೊರಟಿದೆ. ಇದುವರೆಗೂ ಮಧ್ಯಂತರ ತೀರ್ಪಿನ ನೀರು ಬಂದಿಲ್ಲ. ಈಗ ನೋಡಿದರೆ ನ್ಯಾಯ ಮಂಡಳಿಯೂ ಅಂತಿಮ ವರದಿ ನೀಡುತ್ತಿಲ್ಲ. ಅವಧಿ ವಿಸ್ತರಣೆಯಾಗುತ್ತಲೇ ಹೊರಟಿದ್ದು, ಮತ್ತೆ ನವಲಗುಂದ-ನರಗುಂದ ಭಾಗದಲ್ಲಿ ಹೋರಾಟ ಮತ್ತೆ ಆರಂಭಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.