Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ಟ್ವೀಟ್​​ಗೆ ಸಚಿವ ಪ್ರಲ್ಹಾದ್​ ಜೋಶಿ ಕಿಡಿ

ದೇಶದ ವಿವಿಧೆಡೆ ಸನಾತನ ಧರ್ಮದ ಅವಹೇಳನ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಂಥವರೂ ಸೂಕ್ತ ಪ್ರತ್ಯುತ್ತರ ನೀಡುತ್ತಾರೆ. ಪ್ರಧಾನಿ ಮೋದಿ ಅವರೂ ಅದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರಬಹುದು. ಆದರೆ ಸಿಎಂ ಸಿದ್ದರಾಮಯ್ಯ ಅವರು ಸನಾತನ ಧರ್ಮದ ಅವಹೇಳನ ಹೇಳಿಕೆ ಖಂಡಿಸುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ಟ್ವೀಟ್​​ಗೆ ಸಚಿವ ಪ್ರಲ್ಹಾದ್​ ಜೋಶಿ ಕಿಡಿ
ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: Sep 08, 2023 | 8:47 PM

ಹುಬ್ಬಳ್ಳಿ, ಸೆಪ್ಟೆಂಬರ್​ 8: ದೇಶದ ವಿವಿಧೆಡೆ ಸನಾತನ ಧರ್ಮದ ಅವಹೇಳನ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಂಥವರೂ ಸೂಕ್ತ ಪ್ರತ್ಯುತ್ತರ ನೀಡುತ್ತಾರೆ. ಪ್ರಧಾನಿ ಮೋದಿ ಅವರೂ ಅದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರಬಹುದು. ಆದರೆ ಸಿಎಂ ಸಿದ್ದರಾಮಯ್ಯ ಅವರು ಸನಾತನ ಧರ್ಮದ ಅವಹೇಳನ ಹೇಳಿಕೆ ಖಂಡಿಸುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ (Pralhad Joshi) ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಏನು ಮಾತನಾಡುತ್ತಿದ್ದಿರಿ. ನೀವು ತುಷ್ಟಿಕರಣದಿಂದ ರಾಜ್ಯದಲ್ಲಿ ಗೆದ್ದಿರಬಹುದು. ಆದರೆ ನೀವು ದೇಶದ ಲೋಕಸಭೆಯಲ್ಲಿ ಕಳೆದ ಹತ್ತು ವರ್ಷಗಳಿಂದ ವಿರೋಧ ಪಕ್ಷದವರಾಗಿಲ್ಲ. ಕಳೆದ 45 ವರ್ಷದಿಂದ ದೇಶದಲ್ಲಿ ಸ್ವಂತ ತಾಕತ್ತಿನ ಮೇಲೆ ಅಧಿಕಾರಕ್ಕೆ ಬಂದಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಬಹಳ ದುರಂಕಾರದಲ್ಲಿ ಮಾತನಾಡಬೇಡಿ: ಸಿದ್ದರಾಮಯ್ಯ ವಿರುದ್ಧ ಜೋಶಿ ಕಿಡಿ

ಕಾಂಗ್ರೆಸ್​ನ ಮುತ್ತಜ್ಜ, ಅಜ್ಜ, ಮಗ ಇವರೇ ಆಡಳಿತ ನಡೆಸಿದ್ದರು ಇವರ ಕೈಯಲ್ಲಿ ಸರ್ವಸ್ವ ಇತ್ತು. ಆದರೆ ವಿಪಕ್ಷ ನಾಯಕ ಸ್ಥಾನ ಕಳೆದು ಕೊಂಡಿದ್ದಿರಿ. ಬಹಳ ದುರಂಕಾರದಲ್ಲಿ ಮಾತನಾಡಬೇಡಿ. ನಾನು ಕೂಡ ಆ ಸಭೆಯಲ್ಲಿ ಇದ್ದೆ ಮೋದಿಯವರು ಆ ರೀತಿಯ ಹೇಳಿಲ್ಲ. ಮೋದಿಯವರ ಹೇಳಿಕೆ ವಿಡಿಯೋ ಯಾರು ನೋಡಿಲ್ಲ. ಸಂವಿಧಾನದ ಮೂಲಕ ವಿರೋಧ ವ್ಯಕ್ತಡಿಸಿ ಅಂತ ಹೇಳಿದ್ದಾರೆ. ಆಕಸ್ಮಾತ ಹೇಳಿದ್ದರೂ ಏನ್ ತಪ್ಪು. ಯಾರು ಈ ಪ್ರಶ್ನೆ ಟ್ವಿಟ್ ಮಾಡಿದ್ದಾರೆ ಅವರಿಗೆ ಈ ಪ್ರಶ್ನೆ ಕೇಳುತ್ತಿದ್ದೇನೆ ಎಂದರು.

ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ಮಾಹಿತಿ ಇಲ್ಲ ಎಂದ ಸಚಿವ ಪ್ರಲ್ಹಾದ್​​ ಜೋಶಿ

ಎ ರಾಜಾ ಮತ್ತು ಉದಯ್ ಹೇಳಿಕೆ ಖಂಡಿಸುವ ಪ್ರಯತ್ನವನ್ನು ಕಾಂಗ್ರೆಸ್ ಇನ್ನೂ ತೋರುತ್ತಿಲ್ಲ. ಘಮಂಡಿ ಘಟಬಂಧನ ಪ್ರಚಾರ ಬಹಳಷ್ಟು ನಡೆಯುತ್ತಿದೆ. ದೆಹಲಿಯಲ್ಲಿ ಸಭೆ ಸಹ ಇದೆ. ಆದರೆ ಇದು ಅರ್ಥವಿಲ್ಲದ ಘಟಬಂಧನ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಕಮ್ಯುನಿಸ್ಟ್ ವಿರುದ್ಧ ಕಾಂಗ್ರೆಸ್ ಸಾಕಷ್ಟು ಕಡೆ ಸ್ಪರ್ಧೆ ಮಾಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಜನ ಉತ್ತರ ನೀಡಲಿದ್ದಾರೆ: ಹಿಂದೂ ಧರ್ಮ ಹುಟ್ಟಿನ ಹೇಳಿಕೆ ವಿಚಾರದಲ್ಲಿ ಗೃಹ ಸಚಿವ ಪರಮೇಶ್ವರ ಪ್ರತಿಕ್ರಿಯೆ

ಮುಂಬೈ, ಪಾಟ್ನಾ, ದೊಸ್ತಿ, ಕೇರಳದಲ್ಲಿ ಕುಸ್ತಿ ಇದು ಅವರ ನೀತಿ. ಮಮತಾ ಬ್ಯಾನರ್ಜಿಯವರು ಕಮ್ಯೂನಿಸ್ಟ್‌ ವಿರುದ್ಧವಾಗಿ ಸ್ಪರ್ಧೆ ಮಾಡಿದ್ದಾರೆ. ಇದು ತುಷ್ಟಿಕರಣದ ಘಟಬಂಧನ. ಇದರಿಂದ ದೇಶ ಸನಾನತ ಧರ್ಮ, ಸಂಸ್ಕೃತಿಗಳ ಹಿಯಾಳಿಸುವ ಕೆಲಸವಾಗಿದೆ. ಕೇವಲ ವೋಟಗಾಗಿ‌ ಹಿಂದೂ ಧರ್ಮವನ್ನು ಹಿಯಾಳಿಸಲಾಗುತ್ತಿದೆ ಎಂದರು.

ದೇಶದ ಜನರಿಗೆ ಇವರು ಬೇಕಂತಲೆ ಹಿಯಾಳಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿದೆ. ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋಗಿ ಪೂಜೆ‌ ಮಾಡಿಸಿ ಡ್ರಾಮಾ ಮಾಡುತ್ತಾರೆ. ಸ್ವತಃ ಉದಯ್ ಸ್ಟಾಲಿನ್ ದೈವ ಭಕ್ತ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.