ಹುಬ್ಬಳ್ಳಿ; ಹಳೇ ದ್ವೇಷಕ್ಕೆ ಕುತ್ತಿಗೆ ಕಟ್ ಮಾಡಿ 23 ಪಾರಿವಾಳಗಳ ಕೊಲೆ, ಮಾಲೀಕನಿಂದ ದೂರು ದಾಖಲು
ಹುಬ್ಬಳ್ಳಿಯಲ್ಲಿ ರಾಹುಲ್ ದಾಂಡೇಲಿ ಎಂಬುವವರಿಗೆ ಸೇರಿದ 23 ಪಾರಿವಾಳಗಳನ್ನು ಚಾಕುವಿನಿಂದ ಕುತ್ತಿಗೆ ಕಟ್ ಮಾಡಿ ಸಾಯಿಸಲಾಗಿದೆ. ರಾಹುಲ್ ಅವರು ಕಳೆದ ಆರು ತಿಂಗಳಿಂದ ಪಾರಿವಾಳ ಸಾಕುತ್ತಿದ್ದರು. ಅದರೆ ಹಳೇ ದ್ವೇಷದ ಹಿನ್ನಲೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪಾರಿವಾಳ ಸಾಯಿಸಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.
ಹುಬ್ಬಳ್ಳಿ, ಸೆ.11: ಹಳೇ ದ್ವೇಷಕ್ಕೆ ಕುತ್ತಿಗೆ ಕಟ್ ಮಾಡಿ 23 ಪಾರಿವಾಳಗಳನ್ನು ಸಾಯಿಸಿರುವ ಅಮಾನವೀಯ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಯಾವಗಲ್ ಫ್ಲಾಟ್ನಲ್ಲಿ ನಡೆದಿದೆ. ಮನೆಯಲ್ಲಿ ಸಾಕಿದ 23 ಪಾರಿವಾಳಗಳನ್ನ ಕಿರಾತಕರು ಸಾಯಿಸಿದ್ದಾರೆ. ಭೀಕರ ರೀತಿಯಲ್ಲಿ ಮೃತಪಟ್ಟ ಪರಿವಾಳಗಳನ್ನು ನೋಡಿ ಮಾಲೀಕ ಕಣ್ಣೀರು ಹಾಕಿದ್ದಾರೆ. ಶಾಂತಿಯ ಸಂಕೇತವಾದ ಪರಿವಾಳಗಳನ್ನು ಕಿಡಿಗೇಡಿಗಳು ಕತ್ತು ಕಟ್ ಮಾಡಿ ಸಾಯಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಹುಲ್ ದಾಂಡೇಲಿ ಎಂಬುವವರಿಗೆ ಸೇರಿದ 23 ಪಾರಿವಾಳಗಳನ್ನು ಚಾಕುವಿನಿಂದ ಕುತ್ತಿಗೆ ಕಟ್ ಮಾಡಿ ಸಾಯಿಸಲಾಗಿದೆ. ರಾಹುಲ್ ಅವರು ಕಳೆದ ಆರು ತಿಂಗಳಿಂದ ಪಾರಿವಾಳ ಸಾಕುತ್ತಿದ್ದರು. ಆದರೆ ಹಳೇ ದ್ವೇಷದ ಹಿನ್ನಲೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಪಾರಿವಾಳಗಳ ಗೂಡನ್ನು ಧ್ವಂಸ ಮಾಡಿ ಅವುಗಳನ್ನು ಸಾಯಿಸಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಪಾರಿವಾಳ ಸಾಯಿಸಿದವರನ್ನ ಕೂಡಲೇ ಅರೆಸ್ಟ್ ಮಾಡಬೇಕೆಂದು ಆಗ್ರಹಿಸಿ ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ರಾಹುಲ್ ಅವರು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಎಂಟು ತಿಂಗಳಲ್ಲೇ ಒಂದು ಲಕ್ಷ ಎಲೆಕ್ಟ್ರಿಕ್ ವಾಹನಗಳ ನೋಂದಣಿ
ಅನ್ಯಕೋಮಿನ ವ್ಯಕ್ತಿಗಳ ಮೇಲೆ ಹಿಂದೂಪರ ಸಂಘಟನೆ ಕಾರ್ಯಕರ್ತರ ಅಟ್ಯಾಕ್
ಗದಗ: ಗದಗ ಜಿಲ್ಲೆಯ ಬಂಡಾಯದ ನಾಡು ನರಗುಂದ ಪಟ್ಟಣದಲ್ಲಿ ರೈತರ ಎಮ್ಮೆ ಸಂತೆಯಲ್ಲಿ ಮಾರಾಟ ಆಗಿಲ್ಲ ಅಂತ ಟಾಟಾ ಏಸ್ ವಾಹನದಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಆದರೆ, ಕೆಲ ಹಿಂದೂಪರ ಸಂಘಟನೆ ಕಾರ್ಯಕರ್ತರು ಎನ್ನಲಾದ ಗುಂಪು ಈ ವಾಹನದಲ್ಲಿ ಗೋವುಗಳ ಸಾಗಾಟ ಮಾಡಲಾಗ್ತಿದೆ ಅಂತ ಏಕಾಏಕಿ ಅನ್ಯಕೋಮಿನ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆಯಿಂದ ಇಡೀ ಬಂಡಾಯದ ನಾಡಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುವಂತೆ ಮಾಡಿದೆ. ವರ್ಷದ ಹಿಂದೆ ಕ್ಷುಲಕ ಕಾರಣಕ್ಕೆ ಅನ್ಯಕೋಮಿನ ಯುವಕ ಕೊಲೆಯಾಗಿದ್ರಿಂದ ಅಲರ್ಟ್ ಆದ ಪೊಲೀಸ್ ಇಲಾಖೆ ಬಂಡಾಯದ ನಾಡಿನ ಗಲ್ಲಿ ಗಲ್ಲಿಯಲ್ಲೂ ಖಾಕಿ ಪಡೆ ನಿಯೋಜನೆ ಮಾಡಿ ಹದ್ದಿನ ಕಣ್ಣು ಇಟ್ಟಿದೆ.
ನಿನ್ನೆ ಸಂಜೆ ನರಗುಂದ ಪಟ್ಟಣದ ಹೊರವಲಯದಲ್ಲಿ ಟಾಟಾ ಏಸ್ ವಾಹದಲ್ಲಿ ಎಮ್ಮೆ ಸಾಗಾಟ ಮಾಡಲಾಗುತ್ತಿತ್ತು. ವಾಹನಕ್ಕೆ ಡಿಸೆಲ್ ಖಾಲಿಯಾಗಿದ್ರಿಂದ ನಿಲ್ಲಿಸಿದ್ದಾರೆ. ಆದ್ರೆ, ನರಗುಂದ ಪಟ್ಟಣ 15ಜನ್ರ ಯುವಕರ ಗುಂಪು ಏಕಾಏಕಿ ವಾಹನದ ಮೇಲೆ ದಾಳಿ ಮಾಡಿ ಚಾಲಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಾಹನದಲ್ಲಿ ಗೋವುಗಳು ಸಾಗಾಟ ಮಾಡಲಾಗುತ್ತಿದೆ ಎಂಬ ಅನುಮಾನದ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ಅನ್ಯಕೋಮಿಗೆ ಸೇರಿದ್ರಿಂದ ನರಗುಂದ ಪಟ್ಟಣ ಅಕ್ಷರಶಃ ಬೂದಿಮುಚ್ಚಿದ ಕೆಂಡವಾಗಿದೆ. ಬೀಗುವಿನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ತಕ್ಷಣ ಅಲರ್ಟ್ ಅದ ಪೊಲೀಸ್ ಇಲಾಖೆ ನರಗುಂದ ಪಟ್ಟಣದ ಪ್ರಮುಖ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಅಷ್ಟೇ ಅಲ್ಲ ನಿನ್ನೇ ರಾತ್ರಿಯಿಂದಲೇ ನರಗುಂದ ಪಟ್ಟಣದಲ್ಲಿ ಗದಗ ಎಸ್ಪಿ ಬಿ ಎಸ್ ನೇಮಗೌಡ ಠಿಕಾಣಿ ಹೂಡಿದ್ದಾರೆ. ಇಬ್ಬರು ಡಿವೈಎಸ್ಪಿ ನೇತೃತ್ವದಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಪಹರೆ ನಿಯೋಜಿಸಲಾಗಿದೆ. ಎರಡು ಡಿಆರ್ ತುಕಡಿ ಸೇರಿದಂತೆ 150ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಈಗಾಗಲೇ ಹಲ್ಲೆ ಮಾಡಿದ ಗುಂಪಿನಲ್ಲಿ ಐದು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಅಂತ ಎಸ್ಪಿ ಟಿವಿ9ಗೆ ಹೇಳಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:13 am, Mon, 11 September 23