ಹುಬ್ಬಳ್ಳಿಯಲ್ಲಿ ಇಂದು ವಿದ್ಯುತ್​ ವ್ಯತ್ಯಯ: ಇಲ್ಲಿದೆ ಕರೆಂಟ್​ ಕಟ್​ ಆಗುವ ಏರಿಯಾ ಪಟ್ಟಿ

ಹುಬ್ಬಳ್ಳಿಯ ಪ್ರಮುಖ ಟ್ರಾನ್ಸ್‌ಫಾರ್ಮರ್ ಸೆಂಟರ್ ಶಿಫ್ಟ್ ಆಗಿರುವ ಕಾರಣ ಈ ಕೆಳಕಂಡ ಪ್ರದೇಶಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಹುಬ್ಬಳ್ಳಿಯಲ್ಲಿ ಇಂದು ವಿದ್ಯುತ್​ ವ್ಯತ್ಯಯ: ಇಲ್ಲಿದೆ ಕರೆಂಟ್​ ಕಟ್​ ಆಗುವ ಏರಿಯಾ ಪಟ್ಟಿ
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ

Updated on: Apr 26, 2023 | 1:08 PM

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ದೇಶದಲ್ಲೇ ಸಾಕಷ್ಟು ಚರ್ಚೆಯಲ್ಲಿದೆ. ಸ್ಮರ್ಟ್​​ ಸಿಟಿ ಪ್ರಾಜೆಕ್ಟ್​ ಅಡಿಯಲ್ಲಿ ಹುಬ್ಬಳ್ಳಿ ಸಾಕಷ್ಟು ಅಭಿವೃದ್ದಿಯಾಗುತ್ತಿದೆ. ಸ್ಮಾರ್ಟ್​ ಸಿಟಿ ಕೆಲಸ ಈಗಾಗಲೆ ಆರಂಭವಾಗಿದೆ. ಈ ಯೋಜನೆಯಡಿ ವಿದ್ಯುತ್​ ಸರಬರಾಜಿಗೂ ಹೊಸ ರೂಪ ನೀಡಲಾಗುತ್ತಿದೆ. ನಗರದ ಟ್ರಾನ್ಸ್‌ಫಾರ್ಮರ್ ಸೆಂಟರ್ ಶಿಫ್ಟ್ ಆಗಿರುವ ಕಾರಣ ಈ ಕೆಳಕಂಡ ಪ್ರದೇಶಗಳಲ್ಲಿ ಬೆಳಗ್ಗೆ 10:00 ರಿಂದ ಸಂಜೆ 4:00 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್​​ ವ್ಯತ್ಯಯ ಉಂಟಾಗಲಿರುವ ಏರಿಯಾಗಳು

ಶೆಟ್ಟರ್ ಓಣಿ, ಚೋಟಿ ಮಸೀದಿ, ಬದಿ ಮಸೀದಿ, ಗಣೇಶಪೇಟೆ ಮುಖ್ಯರಸ್ತೆ ಮತ್ತು ವಾಲ್ವೇಕರ ಗಲಿಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿವೇಕ ಬಿರಾದಾರ

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.

Loading...
Unable to load recommendations.
Follow Us