ಧಾರವಾಡದಲ್ಲಿ ಜನವರಿ 12 ರಿಂದ ರಾಷ್ಟ್ರೀಯ ಯುವ ಜನೋತ್ಸವ: ಹಸಿರು ಉತ್ಸವವಾಗಿ ಆಚರಣೆಗೆ ಸಿದ್ಧತೆ

ಸ್ಪಚ್ಛ ಭಾರತ ಅಭಿಯಾನದ ಸ್ಫೂರ್ತಿಯೊಂದಿಗೆ ಈ ರಾಷ್ಟ್ರೀಯ ಉತ್ಸವವನ್ನು ಹಸಿರು ಮಹೋತ್ಸವವನ್ನಾಗಿ' ಪರಿವರ್ತಿಸಿ ಆಚರಿಸಲು ಧಾರವಾಡದಲ್ಲಿ ಸಿದ್ಧತೆಗಳು ನಡೆಯುತ್ತಿವೆ.

ಧಾರವಾಡದಲ್ಲಿ ಜನವರಿ 12 ರಿಂದ ರಾಷ್ಟ್ರೀಯ ಯುವ ಜನೋತ್ಸವ: ಹಸಿರು ಉತ್ಸವವಾಗಿ ಆಚರಣೆಗೆ ಸಿದ್ಧತೆ
ರಾಷ್ಟ್ರೀಯ ಯುವಜನೋತ್ಸವ ಲಾಂಛನ ಬಿಡುಗಡೆಯ ಚಿತ್ರ
Follow us
| Updated By: ಆಯೇಷಾ ಬಾನು

Updated on:Jan 09, 2023 | 2:24 PM

ಧಾರವಾಡ: ಸಮಾಜ ಸುಧಾರಕ, ದಾರ್ಶನಿಕರಾದ ಸ್ವಾಮಿ ವಿವೇಕಾನಂದರ ಆದರ್ಶಗಳು ಮತ್ತು ಬೋಧನೆಗಳನ್ನು ಗೌರವಿಸಲು, ಪಾಲಿಸಲು ಪ್ರತಿ ವರ್ಷ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತಿದ್ದು, ಈ ಬಾರಿ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯಲಿರುವ 26 ನೇ ರಾಷ್ಟ್ರೀಯ ಯುವಜನೋತ್ಸವವನ್ನು “ಹಸಿರು ಯುವಜನೋತ್ಸವ”ವನ್ನಾಗಿ ರೂಪಿಸಲು ವ್ಯಾಪಕ ಸಿದ್ಧತೆಗಳು ನಡೆಯುತ್ತಿವೆ.

ಸ್ಪಚ್ಛ ಭಾರತ ಅಭಿಯಾನದ ಸ್ಫೂರ್ತಿಯೊಂದಿಗೆ ಈ ರಾಷ್ಟ್ರೀಯ ಉತ್ಸವವನ್ನು ಹಸಿರು ಮಹೋತ್ಸವವನ್ನಾಗಿ’ ಪರಿವರ್ತಿಸಲಾಗುತ್ತಿದೆ. ಹವಾಮಾನ ಬದಲಾವಣೆ ಮತ್ತು ಪರಿಸರ ವಿಪತ್ತುಗಳ ಅಪಾಯ ತಗ್ಗಿಸುವ ಕೆಲಸದಲ್ಲಿ ಯುವ ಸಮೂಹವನ್ನು ನೈಜವಾಗಿ ತೊಡಗಿಸಿಕೊಂಡು ಸ್ಪಷ್ಟ ಸಂದೇಶ ರವಾನಿಸುವ ಧ್ಯೇಯ ಹೊಂದಲಾಗಿದೆ.

ಹವಾಮಾನ ಬದಲಾವಣೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳವಳ ವ್ಯಕ್ತಪಡಿಸಿದ್ದು, ನಮ್ಮ ಗ್ರಹದ ಸುಸ್ಥಿರ ಪರಿಸರ ರಕ್ಷಣೆ, ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆ ಕುರಿತು ಜನರ ಮನೋಧೋರಣೆಯನ್ನು ಬದಲಿಸಲು ಯುವ ಸಮೂಹ ನಾಯಕತ್ವ ವಹಿಸಬೇಕು ಎಂದು ಕರೆ ನೀಡಿದ್ದಾರೆ. ಸಣ್ಣ ಸಣ್ಣ ಬದಲಾವಣೆಯ ಚಟುವಟಿಕೆಗಳು ಬಹು ದೊಡ್ಡ ವ್ಯತ್ಯಾಸವನ್ನು ಉಂಟು ಮಾಡುತ್ತವೆ. ಇದರಿಂದ ನಮ್ಮ ಭೂಮಂಡಲದ ರಕ್ಷಣೆಗೆ ಮಹತ್ವದ ಕೊಡುಗೆ ನೀಡುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Chikkaballapur Utsav: ವೇದಿಕೆ ಮೇಲೆ ಸಚಿವ ಸುಧಾಕರ್​ರನ್ನು ಕೊಂಡಾಡಿದ ನಟ ದುನಿಯಾ ವಿಜಯ್!

ಉತ್ತಮ ಪರಿಸರ ವ್ಯವಸ್ಥೆ ಕಲ್ಪಿಸುವ ಕುರಿತು ಪ್ರತಿಜ್ಞೆ

ಈ ನಿಟ್ಟಿನಲ್ಲಿ ಯುವ ಜನೋತ್ಸವದಲ್ಲಿ ಸ್ಪಷ್ಟ ಮಾರ್ಗಸೂಚಿ ಹೊರಡಿಸಲಾಗಿದ್ದು, ಆರು ಮಂತ್ರಗಳನ್ನು ಪರಿಪಾಲಿಸಲಾಗುತ್ತಿದೆ. ತ್ಯಾಜ್ಯ ಉಂಟು ಮಾಡುವ ವಸ್ತುಗಳ ಬಳಕೆ ನಿರಾಕರಣೆ, ಮಾಡಲೇ ಬೇಕಾದಲ್ಲಿ ಅತ್ಯಂತ ಕಡಿಮೆ ಬಳಕೆ, ಮರುಬಳಕೆ, ಮರು ಆಲೋಚನೆಯ, ದುರಸ್ತಿತಗೊಳಿಸಿ ಮರುಬಳಕೆ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ವ್ಯವಸ್ಥೆ ಕಲ್ಪಿಸುವ ಕುರಿತು ಪ್ರತಿಜ್ಞೆ ಕೈಗೊಳ್ಳಲಾಗುತ್ತದೆ.

ಪ್ರಚಾರ ಸಾಮಗ್ರಿಗಳು, ಕರವಸ್ತ್ರ ಸೇರಿದಂತೆ ಎಲ್ಲವೂ ಪುನರ್ ಬಳಕೆ ವಸ್ತುಗಳಾಗಿ ಉಪಯೋಗಿಸಲಾಗುತ್ತಿದೆ. ಸಮೂಹ ಸಾರಿಗೆಗೆ ಒತ್ತು ನೀಡಲಾಗುತ್ತಿದೆ. ತ್ಯಾಜ್ಯ ವಿಂಗಡಣೆ ಕಡ್ಡಾಯ. ತ್ಯಾಜ್ಯ ಸಂಗ್ರಹ ಮತ್ತು ನಿರ್ವಹಣೆಗೆ ಸೂಕ್ತ ವ್ಯವಸ್ಥೆ ರೂಪಿಸಲಾಗಿದೆ. ಪುನರ್ ಬಳಕೆ ವಸ್ತುಗಳಿಂದ ಸಿದ್ಧಪಡಿಸಿದ ಸ್ಮರಣಿಕೆಗಳು, ಪದಕಗಳು, ಲೇಖನ ಸಾಮಗ್ರಿಗಳನ್ನು ಉಪಯೋಗಿಸಲಾಗುತ್ತಿದೆ. ಗಣ್ಯರು ಮತ್ತು ಪಾಲ್ಗೊಳ್ಳುವವರಿಗೆ ನೀಡುವ ಜರ್ಸಿಗಳನ್ನು ಸಹ ಮರುಬಳಕೆ ವಸ್ತುಗಳಿಂದ ಸಿದ್ಧಪಡಿಸಿದ್ದು, ಇವುಗಳನ್ನು ಮರು ಬಳಕೆ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ.

ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟೆಲ್ ಗಳಿಂದ ಉಂಟಾಗುವ ಮಾಲಿನ್ಯ ನಿಯಂತ್ರಣಕ್ಕೂ ಜಿಲ್ಲಾಡಳಿತ ಮಾರ್ಗ ಕಂಡುಕೊಂಡಿದೆ. ನೋಂದಾಯಿತ ಪ್ರತಿಯೊಬ್ಬರಿಗೂ ನೀಡಲಾಗುವ ಕಿಟ್ ನಲ್ಲಿ ಸ್ಟೀಲ್ ಬಾಟಲ್ ಗಳನ್ನು ನೀಡಲಾಗುತ್ತಿದ್ದು ಇದನ್ನೇ ಉತ್ಸವದ ಕೊನೆಯವರೆಗೂ ಬಳಸಲು ಜಾಗೃತಿ ಮೂಡಿಸಲಾಗುತ್ತಿದೆ. ಕಾರ್ಯಕ್ರಮದ ಹಲವೆಡೆ ನೀರು ತುಂಬಿಸಿಕೊಳ್ಳುವ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದರಿಂದ ಬಳಸಿ ಬಿಸಾಡುವ ಪರಿಪಾಠ ತಗ್ಗಲಿದೆ. ಕಾರ್ಯಕ್ರಮ ನಡೆಯುವ ವೇದಿಕೆಗಳನ್ನು ಗಿಡಗಳು, ಹಸಿರು, ಪ್ಲಾಸ್ಟಿಕೇತರ ವಸ್ತುಗಳಿಂದ ಸಿಂಗರಿಸಲಾಗುತ್ತಿದೆ.

ಇದನ್ನೂ ಓದಿ:  Hubli-Dharwad: ಯುವಜನೋತ್ಸವ ಪ್ರಧಾನಿ ಮೋದಿಯಿಂದ ಉದ್ಘಾಟನೆ; ಉತ್ಸವಕ್ಕೆ ಒಡಿಶಾ ವ್ಯಕ್ತಿ ರಚಿಸಿದ ಲಾಂಛನ ಆಯ್ಕೆ

ದ್ರವ ಮತ್ತು ಒಣತ್ಯಾಜ್ಯವನ್ನು ವಿಂಗಡಿಸುವ ಮತ್ತು ನೈರ್ಮಲ್ಯ ಕಾಪಾಡಲು ನಿರ್ವಹಣೆ ಕಡ್ಡಾಯವಾಗಿದೆ. ಆಹಾರ ಮೇಳಗಳಲ್ಲಿ ಚಮಚ ಸೇರಿದಂತೆ ಎಲ್ಲಾ ವಸ್ತುಗಳು ಪುನರ್ ಬಳಕೆ ವಸ್ತುಗಳಿಂದಲೇ ತಯಾರಿಸಲ್ಪಟ್ಟಿವೆ. ಪ್ರತಿಯೊಂದು ವೇದಿಕೆಗಳಲ್ಲಿ ಹಸಿರು ಯುವಜನೋತ್ಸವ ಕುರಿತು ನಿರಂತರ ಮಾಹಿತಿ ರವಾನಿಸಿ ಸಂದೇಶಗಳನ್ನು ಬಿತ್ತರಿಸಬೇಕು ಎಂದು ನಿರ್ದೇಶನ ನೀಡಲಾಗಿದ್ದು, ಸಮಾವೇಶದಲ್ಲಿ ಮರು ಬಳಕೆ ಕುರಿತು ಹೆಚ್ಚಿನ ಒತ್ತು ನೀಡಲಾಗಿದೆ.

ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಏಕ ಬಳಕೆ ಮತ್ತು ಬಳಸಿ ಬಿಸಾಡುವ ವಸ್ತುಗಳಿಗೆ ನಿಷೇಧವಿದ್ದು, ವೇದಿಕೆಗಳ ಅಲಂಕಾರಕ್ಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವಂತಿಲ್ಲ. ಸ್ಮರಣಿಕೆಗಳು, ಉಡುಗೊರೆಗಳಿಗೆ ಅಲಂಕಾರಿಕ ಮೇಲು ಹೊದಿಕೆ ವಸ್ತುಗಳನ್ನು ಬಳಸುವಂತಿಲ್ಲ. ಶುಚಿತ್ವದ ಕೆಲಸದಲ್ಲಿ ನಿರತರಾದವರು ಒಣ, ದ್ರವ ಮತ್ತು ನೈರ್ಮಲ್ಯ ವಸ್ತುಗಳನ್ನು ಮಿಶ್ರಣ ಮಾಡಬಾರದು ಎಂದು ಕಟ್ಟಪ್ಪಣೆ ಮಾಡಲಾಗಿದೆ.

ವಿಶೇಷವಾಗಿ ಶೌಚಾಲಯಗಳಲ್ಲಿ ಬಹು ಪದರುಗಳುಳ್ಳ ಚೀಲಗಳು ಮತ್ತು ಬಿಸಾಡುವ ವಸ್ತುಗಳನ್ನು ಒದಗಿಸುತ್ತಿಲ್ಲ. ಮಳಿಗೆಗಳು ಮತ್ತು ಆಹಾರ ಮಳಿಗೆಗಳು ಕೂಡ ಯುವ ಜನೋತ್ಸವದ ಭಾಗವಾಗಿದ್ದು, ಮರು ಬಳಕೆ ತಟ್ಟೆ, ಚಮಚಗಳನ್ನು ಬಳಸುವಂತೆ ಸ್ಪಷ್ಟವಾಗಿ ಸೂಚಿಸಲಾಗಿದೆ. ಯುವ ಜನಾಂಗ ನಮ್ಮ ಭವಿಷ್ಯವಾಗಿದ್ದು, ಸಮಾವೇಶದಲ್ಲಿ ಪಾಲ್ಗೊಳ್ಳುವವರು ಸುಸ್ಥಿರತೆಯ ಸಂದೇಶವಾಹಕರು. ಸಮಾವೇಶದಿಂದ ವಾಪಸ್ ತೆರಳುವಾಗ ಸುಸ್ಥಿರ ಬದುಕಿನ ಸರಳ ಪಾಠಗಳನ್ನು ಕಲಿತು ಮತ್ತೊಬ್ಬರಿಗೆ ಸ್ಫೂರ್ತಿಯಾಗಲಿ ಎಂಬುದೇ “ಹಸಿರು ಯುವಜನೋತ್ಸವ”ದ ಆಶಯವಾಗಿದೆ.

ರಾಷ್ಟ್ರೀಯ ಯುವ ಜನೋತ್ಸವವನ್ನು ಹಸಿರು ಉತ್ಸವವನ್ನಾಗಿ ಪರಿವರ್ತಿಸಲಾಗುತ್ತಿದೆ. ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಯುವ ಸಮೂಹ ಸ್ವಚ್ಛತಾ ರಾಯಭಾರಿಗಳಾಗಿ ಕೆಲಸ ಮಾಡುವಂತೆ ಸಮಾವೇಶ ಪ್ರೇರಣೆ ನೀಡಲಿದೆ ಎಂದು ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹೇಳಿದ್ದಾರೆ.

ಯುವ ಜನೋತ್ಸವವನ್ನು ಹಸಿರು ಜನೋತ್ಸವವಾಗಿ ಆಚರಿಸಲಾಗುತ್ತಿದ್ದು, ಪ್ಲಾಸ್ಟಿಕ್ ಬಳಕೆ, ಅದರಲ್ಲೂ ನಿರ್ದಿಷ್ಟವಾಗಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಆಹಾರ ನಷ್ಟ ತಗ್ಗಿಸಲು ಕ್ರಮ ಕೈಗೊಳ್ಳುತ್ತಿದ್ದು, ಉಳಿಕೆ ವಸ್ತುಗಳಿಂದ ಗೊಬ್ಬರ ತಯಾರಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪಾಲ್ಗೊಳ್ಳುವ ಪ್ರತಿಯೊಬ್ಬರೂ ತ್ಯಾಜ್ಯವನ್ನು ಕಸದ ಬುಟ್ಟಿಗೆ ಹಾಕಬೇಕು. ಸ್ವತಃ ತನ್ನನ್ನು ಒಳಗೊಂಡಂತೆ ಎಲ್ಲರೂ ವೇದಿಕೆ, ಉತ್ಸವ ಮತ್ತು ನಗರವನ್ನು ಹಸಿರುಮಯಗೊಳಿಸಲು ಪ್ರಯತ್ನಿಸೋಣ ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಹೇಳಿದ್ದಾರೆ.

ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9, ಧಾರವಾಡ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:24 pm, Mon, 9 January 23

‘ಹೊಸ ಜೀವನ ಸಿಕ್ಕಿದೆ’; ಅಪಘಾತದ ನಂತರ ಮುಶೀರ್ ಖಾನ್ ಮೊದಲ ಮಾತು
‘ಹೊಸ ಜೀವನ ಸಿಕ್ಕಿದೆ’; ಅಪಘಾತದ ನಂತರ ಮುಶೀರ್ ಖಾನ್ ಮೊದಲ ಮಾತು
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?