ಧಾರವಾಡ: ಪ್ರೀತಿಗೆ ಪೋಷಕರ ವಿರೋಧ, ಒಂದೇ ನೇಣಿಗೆ ಕೊರಳೊಡ್ಡಿದ ಪ್ರೇಮಿಗಳು
ಪ್ರೀತಿಗೆ ಪಾಲಕರ ವಿರೋಧದ ಹಿನ್ನೆಲೆ ಪ್ರೇಮಿಗಳಿಬ್ಬರು ಒಂದೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.

ಧಾರವಾಡ: ಪ್ರೀತಿಗೆ ಪಾಲಕರ ವಿರೋಧದ ಹಿನ್ನೆಲೆ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ಮೈಲಾರಿ ಕಾಲಾಳದ(23) ಹಾಗೂ ಮದಿನಾ(16) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇನ್ನು ಈ ಜೋಡಿಗಳು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಈ ವಿಷಯ ಮನೆಯವರಿಗೆ ಗೊತ್ತಾಗಿದ್ದು, ಇಬ್ಬರ ಮನೆಯಲ್ಲಿಯೂ ವಿರೋಧ ವ್ಯಕ್ತವಾಗಿದೆ. ಬಳಿಕ ಮಂಗಳವಾರ ರಾತ್ರಿ ನಾಪತ್ತೆಯಾಗಿದ್ದ ಈ ಜೋಡಿ. ಇದೀಗ ಗ್ರಾಮದ ಹೊರವಲಯದ ಪಾಳು ಮನೆಯಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಲೆಯಾದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ
ಬಾಗಲಕೋಟೆ: ತಾಲೂಕಿನ ಮಲ್ಲಾಪುರ ಕ್ರಾಸ್ ಬಳಿಯ ಹೊಲವೊಂದರಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಅಂದಾಜು 35 ವರ್ಷದ ವ್ಯಕ್ತಿಯಾಗಿದ್ದು, ಎಡಗೈ ಮೇಲೆ ಶಿವ, ಬಲಗೈ ಮೇಲೆ ಕನಕಶ್ರೀ ಕಲಾವತಿ ಹಾಗೂ ಎದೆಯ ಮೇಲೆ ಮಾರುತಿ ಎಂದು ಹಚ್ಚೆ ಹಾಕಿಸಿಕೊಂಡಿದ್ದಾನೆ. ಇನ್ನು ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರಿಂದ ಮುಖದ ಗುರುತು ಸರಿಯಾಗಿ ಪತ್ತೆಯಾಗಿಲ್ಲ. ಜೊತೆಗೆ ಸ್ಥಳದಲ್ಲಿ ಮದ್ಯದ ಪ್ಯಾಕೆಟ್ ಪತ್ತೆಯಾಗಿದ್ದು, ಕೊಲೆಗೂ ಮುನ್ನ ಕುಡಿದು ಜಗಳವಾಡಿ ನಂತರ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ನಾನು ಕೊಲೆಯಾಗುವುದು ಗ್ಯಾರಂಟಿ, ಜೈಲಿನಿಂದ ಹೊರಬರಲಾರೆ: ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್
ಅಪರಿಚಿತ ವ್ಯಕ್ತಿ ಅಪಘಾತ ಪ್ರಕರಣ; ಆಸ್ಪತ್ರೆ ಸಿಗದೇ ಪರದಾಟ
ಅನೇಕಲ್: ತಮಿಳುನಾಡು ಮೂಲದ ಹೊಂಗಸಂದ್ರ ನಿವಾಸಿ ಅರಮುಗಮ್(49) ನಡೆದುಕೊಂಡ ಹೋಗುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಅಪಘಾತಕ್ಕೀಡಾಗಿದ್ದರು. ಬಳಿಕ ಸ್ಥಳೀಯರು ಸೇರಿ 108 ಅಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ಆದರೆ ಸರಕಾರಿ ಅಂಬ್ಯುಲೆನ್ಸ್ ತಡವಾಗಿ ಬಂದಿದೆ. ಬಳಿಕ ತಾಲೂಕಿನ ಅತ್ತಿಬೆಲೆ ಬಳಿ ಇರುವ ಆಕ್ಸಫರ್ಡ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಆ ಆಸ್ಪತ್ರೆಯಲ್ಲಿ ಗಾಯಾಳುವನ್ನ ದುಡ್ಡು ಕೊಡುತ್ತೇವೆ ಎಂದರು ಸೇರಿಸಿಕೊಳ್ಳುವುದಿಲ್ಲ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅರಮುಗಮ್ನನ್ ಆನೇಕಲ್ ಆಸ್ಪತ್ರೆ ಗೆ ಅತ್ತಿಬೆಲೆ ಪೊಲೀಸರು ಸಾಗಿಸುತ್ತಾರೆ. ನಂತರ ಸ್ಥಳೀಯ ಮುನಿರಾಜು ಎಂಬುವವರಿಂದ ಆಸ್ಪತ್ರೆ ನಡತೆ ವಿರುದ್ಧ ದೂರು ಕೊಟ್ಟಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:32 pm, Thu, 30 March 23