ದಿಢೀರನೆ ಹೆಚ್ಚಾದ ಹರಿವು: ಹಳ್ಳದಲ್ಲಿ ಸಿಲುಕಿದ್ದ 20 ಜನರನ್ನು ರಕ್ಷಿಸಿದ ಪೊಲೀಸರು, ಓರ್ವ ನೀರು ಪಾಲು
ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ಮತ್ತು ತಹಶೀಲ್ದಾರ್ ಪ್ರಕಾಶ ನಾಶಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ತಹಶೀಲ್ದಾರ್ ಪ್ರಕಾಶ್ ನಾಶಿ ಕಾರ್ಯಾಚರಣೆ ನಡೆಸಿದ್ದಾರೆ.
ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿಯ ಬೆಣ್ಣೆಹಳ್ಳದಲ್ಲಿ ದಿಢೀರನೆ ನೀರಿನ ಹರಿವು ಹೆಚ್ಚಿದೆ. ಇದರಿಂದ ಹಳ್ಳದಲ್ಲಿ 20 ಜನ ಸಿಲುಕಿದ್ದು ಅವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಹಳ್ಳದಲ್ಲಿನ ನೀರಿನ ರಭಸಕ್ಕೆ ಓರ್ವ ವ್ಯಕ್ತಿ ಕೊಚ್ಚಿ ಹೋಗಿದ್ದಾನೆ. ಜಮೀನು ಕೆಲಸಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ಘಟನೆ ನಡೆದಿದೆ.
ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ಮತ್ತು ತಹಶೀಲ್ದಾರ್ ಪ್ರಕಾಶ ನಾಶಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ತಹಶೀಲ್ದಾರ್ ಪ್ರಕಾಶ್ ನಾಶಿ ಕಾರ್ಯಾಚರಣೆ ನಡೆಸಿದ್ದಾರೆ. ನೀರಿನಲ್ಲಿ ಕೊಚ್ಚಿಕೊಂಡು ಹೋದ ಓರ್ವ ವ್ಯಕ್ತಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಜಮೀನಿಗೆ ಕೆಲಸಕ್ಕೆಂದು ತೆರಳಿದ್ದು ವಾಪಸ್ ಬರುವಾಗ ಏಕಾಏಕಿ ಹಳ್ಳದ ನೀರು ಹೆಚ್ಚಾದ ಕಾರಣ ಜನ ಸಿಲುಕಿಕೊಂಡಿದ್ದರು. ಧಾರವಾಡ ಅಕ್ಕಪಕ್ಕ ಮಳೆಯಾಗ್ತಿರೋದ್ರಿಂದ ನೀರಿನ ಹರಿವು ಹೆಚ್ಚಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ರಭಸವಾಗಿ ಹರಿಯುವ ನೀರಿನ ನಡುವೆ ಸಿಲುಕಿದ ಕಾರು ರಕ್ಷಿಸಿದ ಸ್ಥಳೀಯರು
ಚಾಮರಾಜನಗರ: ಚಾಮರಾಜನಗರ ತಾಲೂಕು ಕಣ್ಣೇಗಾಲ- ಆಲೂರು ನಡುವೆ ಭಾರೀ ಮಳೆ ಹಿನ್ನೆಲೆ ಮಳೆ ಹಾನಿ ಪರಿಶೀಲನೆಗೆ ಹೋಗಿದ್ದ ಅಧಿಕಾರಿಗಳ ಕಾರು ರಭಸವಾಗಿ ಹರಿಯುವ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. ಪಿಡಬ್ಲ್ಯುಡಿ, ಎಇಇ ಕಾಂತರಾಜು, ಎಇ ರಾಜು, ಚಾಲಕ ಮುರುಗೇಶ್ ಹೊಳೆ ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ನೀರಿನ ಮಟ್ಟ ಹೆಚ್ಚಳವಾಗಿದೆ. ಕಾರಿನ ಮೇಲೆ ಹತ್ತಿ ಅಧಿಕಾರಿಗಳು ಅಪಾಯದಿಂದ ಪಾರಾಗಿದ್ದಾರೆ. ನೀರಿನಲ್ಲಿ ಮುಳುಗಿದ ಕಾರನ್ನು ಹಗ್ಗ ಕಟ್ಟಿ ಎಳೆದು ಸ್ಥಳೀಯರು ರಕ್ಷಿಸಿದ್ದಾರೆ.
ಧಾರಾಕರ ಮಳೆಗೆ ಕೊಡಿ ಬಿದ್ದ ಕೆರೆ
ಮೊಣಕಾಲುದ್ದ ಹರಿಯುವ ನೀರಿನಲ್ಲಿ ಟ್ರಾಕ್ಟರ್ ಹಾಗೂ ಬೈಕ್ ಚಾಲನೆ ಮಾಡಲು ಹೋಗಿ, ಹಳ್ಳದ ಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮೇಳ್ಯಾ ಹಾಗೂ ದಿನ್ನೆಹುಣಸೇನಹಳ್ಳಿ ಗ್ರಾಮದ ಬಳಿ ನಡೆದಿದೆ. ಹೌದು ಕಳೆದ ಎರಡು ಮೂರು ದಿನಗಳಿಂದ ಸುರಿದ ಧಾರಾಕರ ಮಳೆಗೆ ಮೇಳ್ಯಾ ಕೆರೆ ತುಂಬಿ ಕೊಡಿ ರಭಸವಾಗಿ ಹರಿಯುತ್ತಿದೆ, ಇದ್ರಿಂದ ಕೊಡಿ ನೀರು ಹಳ್ಳದ ಮೂಲಕ ಒಂದು ಕೆರೆಯಿಂದ ಇನ್ನೊಂದು ಕೆರೆಗೆ ಹರಿಯುತ್ತಿದೆ, ಮದ್ಯೆದಲ್ಲಿ ಮೇಳ್ಯಾ ಹಾಗೂ ದಿನ್ನೆಹುಣಸೇನಹಳ್ಳಿ ಗ್ರಾಮದ ಬಳಿ ರಸ್ತೆಯ ಮೇಲೆ ಎರಡು ಅಡಿ ನೀರು ಹರಿಯುವುದರ ಮೂಲಕ ರಸ್ತೆ ಜಲಾವೃತವಾಗಿದೆ, ಆದ್ರೂ ಟ್ರಾಕ್ಟರ್ ಚಾಲಕನೊರ್ವ ಹಾಗೂ ಬೈಕ್ ಸವಾರನೊರ್ವ… ಹರಿಯುವ ನೀರಿನಲ್ಲಿ ದುಸ್ಸಾಹಸ ಮಾಡಲು ಹೋಗಿ ವಾಹನಗಳ ಸಮೇತ ಇಬ್ಬರು ಹಳ್ಳಕ್ಕೆ ಬಿದ್ದಿದ್ದಾರೆ, ಅದೃಷ್ಟವಶಾತ್ ಇಬ್ಬರು ಬಚಾವ್ ಆಗಿದ್ದು, ವಾಹನಗಳು ನೀರಿನಲ್ಲಿ ಮುಳುಗಿವೆ, ನಂತರ ಕ್ರೇನ್ ಮೂಲಕ ಹರಸಾಹಸ ಪಟ್ಟು ವಾಹನಗಳನ್ನು ಮೇಲೆ ಎತ್ತಲಾಯಿತು.
Published On - 6:30 pm, Mon, 29 August 22