ಧಾರವಾಡದ ಹಲವೆಡೆ ಆಗಸ್ಟ್ 13ರಂದು ವಿದ್ಯುತ್ ವ್ಯತ್ಯಯ; ಎಲ್ಲೆಲ್ಲಿ ಪವರ್ ಕಟ್? ಇಲ್ಲಿದೆ ವಿವರ

Dharwad Power Cut; ವಿಠ್ಠಲ ನಗರ, ಮಯೂರ ಆದಿತ್ಯ ರೆಸಾರ್ಟ್, ರೇಷ್ಮೆ ಇಲಾಖೆ, ಇಸ್ಕಾನ್, ರಾಯಾಪುರ ಮತ್ತು 110 ಕೆವಿ ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ. ಇನ್ನೂ ಯಾವೆಲ್ಲ ಏರಿಯಾಗಳಲ್ಲಿ ಪವರ್ ಕಟ್ ಎಂಬ ಮಾಹಿತಿ ಇಲ್ಲಿದೆ.

ಧಾರವಾಡದ ಹಲವೆಡೆ ಆಗಸ್ಟ್ 13ರಂದು ವಿದ್ಯುತ್ ವ್ಯತ್ಯಯ; ಎಲ್ಲೆಲ್ಲಿ ಪವರ್ ಕಟ್? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Edited By:

Updated on: Aug 11, 2023 | 7:51 PM

ಧಾರವಾಡ: ಧಾರವಾಡ ನಗರ (Dharawad Town) ವ್ಯಾಪಿಯಲ್ಲಿ ಬರುವ 110/11 ಕೆವಿ ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಆಗಸ್ಟ್ 13 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ 3ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಮಾಡಲಾಗುತ್ತಿದೆ. ಹೀಗಾಗಿ ಈ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ಆಗಸ್ಟ್ 13 ರಂದು ಬೆಳಿಗ್ಗೆ 10 ಘಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ (Power Cut) ವ್ಯತ್ಯಯವಾಗಲಿದೆ.

ಧಾರವಾಡ ನಗರದ ಟೋಲ್ ನಾಕಾ, ಮಾಳಮಡ್ಡಿ, ನಗರಕರ ಕಾಲೋನಿ, ಬಾಗಲಕೋಟ ಪೆಟ್ರೋಲ್ ಪಂಪ್, ಲಕ್ಷ್ಮೀನಗರ, ಗಾಂಧಿ ನಗರ, ಕಲಘಟಗಿ ರಸ್ತೆ, ರಾಜೀವ ಗಾಂಧಿ ನಗರ, ಸರಸ್ವತಿ ನಗರ, ತೇಜಸ್ವಿನಗರ, ಸಂಗೊಳ್ಳಿ ರಾಯಣ್ಣ ನಗರ, ಗಿರಿನಗರ, ಕಕ್ಕಯ್ಯಾ ನಗರ, ಗುರುದೇವ ನಗರ, ವಿದ್ಯಾಗಿರಿ, ರಜತಗಿರಿ, ಸಪ್ತಗಿರಿ, ವೈ.ಎಸ್. ಕಾಲೋನಿ, ಲಕ್ಕಮ್ಮನಹಳ್ಳಿ, ಗೋಪಾಲಪುರ, ದಾನೇಶ್ವರಿ ನಗರ, ಸನ್ಮತಿ ಮಾರ್ಗ, ಸ್ಟೇಶನ್ ರೋಡ್, ನುಗ್ಗಿಕೇರಿ, ವಿವೇಕಾನಂದ ನಗರ, ಕೆ.ಎಮ್.ಪಿ, ವೆಂಕಟೇಶ್ವರ, ಸೋಮೇಶ್ವರ, ಗಾರ್ಡನ್ ಪಾಲಿಮರ, ಜೆ.ಎಸ್.ಎಸ್, ಮಾದರಮಡ್ಡಿ, ನವಲೂರ, ಲಕ್ಕಮ್ಮನಹಳ್ಳಿ ಕೈಗಾರಿಕಾ ಪ್ರದೇಶ, ರಾಯಾಪುರ ಕೈಗಾರಿಕಾ ಪ್ರದೇಶ, ಜನ್ನತ್ ನಗರ, ಲಕ್ಷ್ಮೀಸಿಂಗನಕೇರಿ, ಪಿ.ಬಿ. ರಸ್ತೆ, ಮೂಗಬಸವೇಶ್ವರ, ಹೊಸಯಲ್ಲಾಪುರ, ಜೈ ಕೆಫೆ ಸರ್ಕಲ್, ನುಚ್ಚಂಬ್ಲಿ ಭಾವಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಇದನ್ನೂ ಓದಿ: ವಿಮೆ ತಿರಸ್ಕರಿಸಿದ ರಿಲೈನ್ಸ್ ಜನರಲ್ ಇನ್ಶುರೆನ್ಸ್ ಕಂಪನಿಗೆ ದಂಡ ವಿಧಿಸಿದ ಗ್ರಾಹಕರ ಆಯೋಗ

ಇಷ್ಟೇ ಅಲ್ಲದೆ ದುಂಡಿ ಓಣಿ, ಯಲಿಗಾರ ಓಣಿ, ಭೂಸಪ್ಪ ಚೌಕ್, ಶಿವಾನಂದ ನಗರ, ಚಪ್ಪರ್‍ಬಂದ್ ಕಾಲೋನಿ, ರಾಮನಗರ, ಸಂಗಮ ಸರ್ಕಲ್, ಲೈನ್ ಬಜಾರ್, ದರೋಗಾ ಓಣಿ, ತುಪ್ಪದ ಓಣಿ, ಸೌದಾಗರ ಗಲ್ಲಿ, ಟಿಕಾರೆ ರೋಡ್, ಮಾರ್ಕೆಟ್ ಪೋಲಿಸ್ ಸ್ಟೇಶನ್, ಸಿಬಿಟಿ, ಓಲ್ಡ್ ಬಸ್ಟ್ಯಾಂಡ್, ರಿಗಲ್ ಸರ್ಕಲ್, ಟಿಪ್ಪು ಸರ್ಕಲ್, ಭಾರತ ಸ್ಕೂಲ್, ಗ್ರಾಸ್ ಮಾರ್ಕೆಟ್, ಕಾಮತ ಹೊಟೆಲ್, ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ, ಸೋಮಾಪುರ, ಗೋವನಕೊಪ್ಪ, ದೊಂಗಡಿಕೊಪ್ಪ ಗ್ರಾಮ, ನಿಗದಿ, ದೇವರ ಹುಬ್ಬಳ್ಳಿ, ಕಲಕೇರಿ, ಹಳ್ಳಿಗೇರಿ, ಮನಸೂರು ಮತ್ತು ಮನಗುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳು, ರಾಯಾಪುರ ಗ್ರಾಮ, ರಾಯಾಪುರ ಆಶ್ರಯ ಕಾಲೋನಿ, ವಿಠ್ಠಲ ನಗರ, ಮಯೂರ ಆದಿತ್ಯ ರೆಸಾರ್ಟ್, ರೇಷ್ಮೆ ಇಲಾಖೆ, ಇಸ್ಕಾನ್, ರಾಯಾಪುರ ಮತ್ತು 110 ಕೆವಿ ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us