ಗಣೇಶ ಉತ್ಸವಕ್ಕೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಭರ್ಜರಿ ಸಿದ್ಧತೆಗಳು, ಪೂಜೆಯಲ್ಲಿ ಬಿಜೆಪಿ ಶಾಸಕರು ಬೆಲ್ಲದ್ ಮತ್ತು ಟೆಂಗಿನಕಾಯಿ ಭಾಗಿ
ಶನಿವಾರದಂದು ತೀರ್ಪು ಪ್ರಕಟಿಸಿದ ನ್ಯಾಯಾಲಯವು, ಗಣೇಶ ಉತ್ಸವ ಆಚರಿಸಲು ಅನುಮತಿ ನೀಡಿತಲ್ಲದೆ, ಈದ್ಗಾ ಮೈದಾನ ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ಸೇರಿದ್ದು, ಅಂಜುಮನ್ ಸಮಿತಿಗೆ ಸೇರಿದ ಜಾಗವಲ್ಲ; ಸಮಿತಿಯ ವರ್ಷಕ್ಕೆ ಎರಡು ಬಾರಿ ಅನುಮತಿ ಪಡೆದು ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಬಹುದಷ್ಟೇ ಅಂತ ಹೇಳಿತ್ತು.
ಹುಬ್ಬಳ್ಳಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ (Eidgah Maidan) ಗಣೇಶ ಉತ್ಸವ ಆಚರಿಸಲು ಇದ್ದ ಅಡೆತಡೆಗಳನ್ನು ನ್ಯಾಯಾಲಯ ನಿವಾರಿಸಿದ ಬಳಿಕ ಗಣೇಶನ ಪ್ರತಿಷ್ಠಾಪನೆಗೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಹಾಗೆ ನೋಡಿದರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (Hubballi-Dharwad Palike) ತನ್ನ ಸಾಮಾನ್ಯ ಸಭೆಯಲ್ಲಿ ಮುಂದಿನ 5-ವರ್ಷ ಕಾಲ ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಿಸಲು ಅನುಮತಿ ನೀಡುವ ನಿರ್ಣಯ ತೆಗೆದುಕೊಂಡಿತ್ತು. ಆದರೆ, ಪಾಲಿಕೆಯ ನಿರ್ಣಯದ ವಿರುದ್ಧ ಅಂಜುಮನ್ ಸಮಿತಿಯು ನ್ಯಾಯಾಯಕ್ಕೆ ಮನವಿ ಸಲ್ಲಿಸಿತ್ತು. ಶನಿವಾರದಂದು ತೀರ್ಪು ಪ್ರಕಟಿಸಿದ ನ್ಯಾಯಾಲಯವು, ಗಣೇಶ ಉತ್ಸವ ಆಚರಿಸಲು ಅನುಮತಿ ನೀಡಿತಲ್ಲದೆ, ಈದ್ಗಾ ಮೈದಾನ ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ಸೇರಿದ್ದು, ಅಂಜುಮನ್ ಸಮಿತಿಗೆ ಸೇರಿದ ಜಾಗವಲ್ಲ; ಸಮಿತಿಯ ವರ್ಷಕ್ಕೆ ಎರಡು ಬಾರಿ ಅನುಮತಿ ಪಡೆದು ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಬಹುದಷ್ಟೇ ಅಂತ ಹೇಳಿತ್ತು. ಗಣೇಶ ಉತ್ಸವ ಆಚರಿಸಲು ಅನುಮತಿ ಕೋರಿ, ಬಿಜೆಪಿ ಕಾರ್ಯಕರ್ತರು ಮತ್ತು ಗಣೇಶ ಉತ್ಸವ ಮಂಡಳಿಯ ಸದಸ್ಯರು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ (Aravind Bellad) ನೇತೃತ್ವದಲಿ ಪಾಲಿಕೆಯ ಮುಂದೆ ಎರಡು ದಿನ ನಿರಶನ ನಡೆಸಿದ್ದರು. ಇಂದು ಬೆಳಗ್ಗೆ ಮೈದಾನದಲ್ಲಿ ನಡೆದ ಪೂಜೆಯಲ್ಲಿ ಬೆಲ್ಲದ್ ಮತ್ತು ಮತ್ತೊಬ್ಬ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakai) ಭಾಗವಹಿಸಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ