AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೈತ್ರಾ ಕುಂದಾಪುರ ಅಂತಹ ಜನರು ಎಲ್ಲಾ ಪಕ್ಷದಲ್ಲೂ ಇರುತ್ತಾರೆ; ಚೈತ್ರಾ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು -ಅರವಿಂದ ಬೆಲ್ಲದ್

ದುಡ್ಡು ಮಾಡೋದು, ಜನರಿಗೆ ಮೋಸ ಮಾಡೋದು ಅವರ ಕೆಲಸ. ಇದು ಮೊದಲನೇ ಘಟನೆ ಅಲ್ಲ. ಮೋಸ ಹೋಗುವವರು ಇರುವವರೆಗೂ ಇದು ಕೊನೆ ಆಗಲ್ಲ. ಈ ಬಗ್ಗೆ ನಮ್ಮ ಪಕ್ಷ ಮೊದಲೇ ತಿಳಿಸಿತ್ತು. ಎಲ್ಲಲ್ಲೊ ದುಡ್ಡು ಮಾಡಿದವರು, ಹೇಗೆ ರಾಜಕೀಯ ಮಾಡಬೇಕು ಅಂತ ಗೊತ್ತಿಲ್ಲದವರು ಈ ರೀತಿ ಮೋಸ ಹೋಗುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಅರವಿಂದ ಬೆಲ್ಲದ್ ಅವರು ಚೈತ್ರಾ ಕುಂದಾಪುರ ಪ್ರಕರಣದ ಸಂಬಂಧ ತಿಳಿಸಿದರು.

ಚೈತ್ರಾ ಕುಂದಾಪುರ ಅಂತಹ ಜನರು ಎಲ್ಲಾ ಪಕ್ಷದಲ್ಲೂ ಇರುತ್ತಾರೆ; ಚೈತ್ರಾ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು -ಅರವಿಂದ ಬೆಲ್ಲದ್
ಅರವಿಂದ್ ಬೆಲ್ಲದ್
TV9 Web
| Edited By: |

Updated on: Sep 18, 2023 | 11:08 AM

Share

ಹುಬ್ಬಳ್ಳಿ, ಸೆ.18: MLA ಟಿಕೆಟ್ ಕೊಡಿಸುವುದಾಗಿ 5 ಕೋಟಿ ಹಣ ಪಡೆದು ವಂಚನೆ ಮಾಡಿದ ಕೇಸ್​ಗೆ ಸಂಬಂಧಿಸಿ ಚೈತ್ರಾ ಕುಂದಾಪುರ(Chaithra Kundapura) ಅಂತಹ ಜನರು ಎಲ್ಲಾ ಪಕ್ಷದಲ್ಲೂ ಇರುತ್ತಾರೆ ಎಂದು ಹುಬ್ಬಳ್ಳಿ ನಗರದಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್(Arvind Bellad) ಹೇಳಿದರು. ದುಡ್ಡು ಮಾಡೋದು, ಜನರಿಗೆ ಮೋಸ ಮಾಡೋದು ಅವರ ಕೆಲಸ. ಇದು ಮೊದಲನೇ ಘಟನೆ ಅಲ್ಲ. ಮೋಸ ಹೋಗುವವರು ಇರುವವರೆಗೂ ಇದು ಕೊನೆ ಆಗಲ್ಲ. ಈ ಬಗ್ಗೆ ನಮ್ಮ ಪಕ್ಷ ಮೊದಲೇ ತಿಳಿಸಿತ್ತು ಎಂದರು.

ಎಲ್ಲಲ್ಲೊ ದುಡ್ಡು ಮಾಡಿದವರು, ಹೇಗೆ ರಾಜಕೀಯ ಮಾಡಬೇಕು ಅಂತ ಗೊತ್ತಿಲ್ಲದವರು ಈ ರೀತಿ ಮೋಸ ಹೋಗುತ್ತಾರೆ. ಇಂತಹ ಡಮ್ಮಿ ವ್ಯಕ್ತಿಗಳ ಜೊತೆಗೆ ಮೋಸ ಹೋಗತ್ತಾರೆ. ಚೈತ್ರಾ ಕುಂದಾಪುರ ಬಿಜೆಪಿ ಪಕ್ಷದವರಲ್ಲಾ ಪಕ್ಷದ ಸಿದ್ಧಾಂತದ ಬಗ್ಗೆ ಮಾತನಾಡಿ ತಕ್ಷಣ ಬಿಜೆಪಿಯವರಾಗಲ್ಲ. ಇವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಟಿಕೆಟ್ ಪಡೆಯಲು ಒಂದು ಪದ್ದತಿಯಿದೆ. ಯಾವ ರಾಜಕೀಯ ಪಕ್ಷಗಳು ಇಂತಹ ಟೋಪಿ ಹಾಕುವವರನ್ನು ಬೆಳೆಸುವುದಿಲ್ಲ. ಟಿಕೆಟ್ ಆಕಾಂಕ್ಷಿಗಳ ಅಡ್ವಾಂಟೆಜ್ ತೆಗೆದುಕೊಳ್ಳುವ ಜನ ಇವರು ಎಂದರು.

ಇದನ್ನೂ ಓದಿ: ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣ: ಗೋವಿಂದ ಬಾಬು ವಿರುದ್ಧ ಇಡಿಗೆ ಪತ್ರ ಬರೆದ ಚೈತ್ರಾ ಕುಂದಾಪುರ !

ಬಿಜೆಪಿಯಲ್ಲಿ ಟಿಕೆಟ್​ ಮಾರಾಟ ಪದ್ಧತಿ ಇಲ್ಲ

ಇನ್ನು ಮತ್ತೊಂದೆಡೆ ಹುಬ್ಬಳ್ಳಿ ನಗರದಲ್ಲಿ ಬಿಜೆಪಿ ಶಾಸಕ ಮಹೇಶ್​ ಟೆಂಗಿನಕಾಯಿ ಪ್ರತಿಕ್ರಿಯೆ ನೀಡಿದ್ದು ಬಿಜೆಪಿಯಲ್ಲಿ ಟಿಕೆಟ್​ ಮಾರಾಟ ಪದ್ಧತಿ ಇಲ್ಲ. ಚೈತ್ರಾ ಕುಂದಾಪುರ ಕೇಸ್​ಗೂ ಬಿಜೆಪಿಗೂ ಯಾವ ಸಂಬಂಧ ಇಲ್ಲ. ಮಾಜಿ ಸಿಎಂ ಹೇಗೆ ಟಿಕೆಟ್ ಪಡೆದ್ರು, ಹೇಗೆ ಕೊಟ್ಟಿದ್ದರು ಗೊತ್ತಿದೆ ಎಂದು ಎಂಎಲ್​ಸಿ ಜಗದೀಶ್​ ಶೆಟ್ಟರ್​ಗೆ ಮಹೇಶ್ ಟೆಂಗಿನಕಾಯಿ ಟಾಂಗ್ ಕೊಟ್ಟರು.

ಬಿಜೆಪಿಯಲ್ಲಿ ಟಿಕೆಟ್ ಮಾರಟ ಪದ್ದತಿಯಿಲ್ಲ. ಕೆಲವರು ತಮ್ಮ ಚಟಕ್ಕೆ ಮಾಡಿದ್ರೆ ಅದಕ್ಕೆ ಬಿಜೆಪಿ ಉತ್ತರ ನೀಡುವುದಿಲ್ಲ. ಇದಕ್ಕೆ ಬಿಜೆಪಿ ಯಾವುದೇ ಸಂಬಂಧ ಇಲ್ಲ. ಮಾಜಿ ಸಿಎಂ ಹೇಗೆ ಟಿಕೆಟ್ ತೆಗೆದುಕೊಂಡಿದ್ದರು ತಾವು ಹೇಗೆ ಟಿಕೆಟ್ ಕೊಟ್ಟಿದ್ದರು ಅಂತ ಎಲ್ಲಾ ಗೊತ್ತಿದೆ. ಅತೀ ಹೆಚ್ಚು ಲಿಂಗಾಯತ ಸಮುದಾಯದ ಸಿಎಂ ಕೊಟ್ಟಿದ್ದು ಬಿಜೆಪಿ. ಜಗದೇಶ್ ಶೆಟ್ಟರ್​ಗೆ 30 ವರ್ಷ ಬಿಜೆಪಿ ಎಲ್ಲಾ ಕೊಟ್ಟಿದೆ. ನಿಮಗೆ ಅನ್ಯಾಯವಾಗಿದ್ರೆ ನಿಮಗೆ ತಾಕತ್ ಇದ್ದರೆ ನೀವು ಸರಿ ಮಾಡಿಕೊಳ್ಳಿ. ರಾಜಕೀಯದಲ್ಲಿ ಸಮುದಾಯವನ್ನು ಎಳೆದು ತರಬಾರದು. ರಾಜಕೀಯಕ್ಕೂ ಸಮಾಜಕ್ಕೂ ಸಂಬಂಧವಿಲ್ಲ. ಕಾಂಗ್ರೆಸ್​ನಲ್ಲಿ ಯಾರು ಶೆಟ್ಟರನ್ನು ಗುರುತಿಸುತ್ತಿಲ್ಲ. ಇದರಿಂದಾಗಿ ಅವರಿಗೆ ಕಷ್ಟ ಆಗಿದೆ. ಹೀಗಾಗಿ ಅವರು ಮಾಧ್ಯಮಗಳಿಗೆ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದ ಮಹೇಶ್ ಟೆಂಗಿನಕಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ