ಕೊರೊನಾ ಹಾವಳಿ ಮಧ್ಯೆಯೇ ರೈತರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ!

ಧಾರವಾಡ: ಜಿಲ್ಲೆಯ ರೈತರು ಕೊರೊನಾ ಹಾವಳಿ ಮಧ್ಯೆಯೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದಾಗಲೇ ಮಳೆಯೂ ಚೆನ್ನಾಗಿ ಆಗಿದೆ. ಹೀಗಾಗಿ ಬಿತ್ತನೆ ಕಾರ್ಯವನ್ನು ಕೆಲವು ಕಡೆಗಳಲ್ಲಿ ಮುಗಿಸಿಯಾಗಿದೆ. ಆದರೆ ಅದೇಕೋ ಏನೋ ಅವರ ನಸೀಬೇ ಸರಿ ಇಲ್ಲ ಅನ್ನಿಸುತ್ತಿದೆ. ಏಕೆಂದರೆ ಹರಸಾಹಸಪಟ್ಟು ಬಿತ್ತನೆ ಬೀಜ ಪಡೆದ ರೈತರು ಅದನ್ನು ಬಿತ್ತನೆ ಮಾಡಿದರೆ ಅದು ಮೊಳಕೆಯೊಡೆದು ಹೊರಗೆ ಬರುತ್ತಲೇ ಇಲ್ಲ. ಅದರಲ್ಲೂ ಸೊಯಾಬೀನ್ ಬೀಜಗಳಲ್ಲಿಯೇ ಅತಿ ಹೆಚ್ಚು ಸಮಸ್ಯೆಯಾಗಿದೆ. ಇದರಿಂದಾಗಿ ಧಾರವಾಡ ಜಿಲ್ಲೆಯ ರೈತರು ಕಂಗಾಲಾಗಿ ಹೋಗಿದ್ದಾರೆ. ಧಾರವಾಡ ತಾಲೂಕಿನ […]

ಕೊರೊನಾ ಹಾವಳಿ ಮಧ್ಯೆಯೇ ರೈತರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ!
Follow us
ಸಾಧು ಶ್ರೀನಾಥ್​
| Updated By:

Updated on:Jun 08, 2020 | 2:34 PM

ಧಾರವಾಡ: ಜಿಲ್ಲೆಯ ರೈತರು ಕೊರೊನಾ ಹಾವಳಿ ಮಧ್ಯೆಯೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದಾಗಲೇ ಮಳೆಯೂ ಚೆನ್ನಾಗಿ ಆಗಿದೆ. ಹೀಗಾಗಿ ಬಿತ್ತನೆ ಕಾರ್ಯವನ್ನು ಕೆಲವು ಕಡೆಗಳಲ್ಲಿ ಮುಗಿಸಿಯಾಗಿದೆ. ಆದರೆ ಅದೇಕೋ ಏನೋ ಅವರ ನಸೀಬೇ ಸರಿ ಇಲ್ಲ ಅನ್ನಿಸುತ್ತಿದೆ. ಏಕೆಂದರೆ ಹರಸಾಹಸಪಟ್ಟು ಬಿತ್ತನೆ ಬೀಜ ಪಡೆದ ರೈತರು ಅದನ್ನು ಬಿತ್ತನೆ ಮಾಡಿದರೆ ಅದು ಮೊಳಕೆಯೊಡೆದು ಹೊರಗೆ ಬರುತ್ತಲೇ ಇಲ್ಲ. ಅದರಲ್ಲೂ ಸೊಯಾಬೀನ್ ಬೀಜಗಳಲ್ಲಿಯೇ ಅತಿ ಹೆಚ್ಚು ಸಮಸ್ಯೆಯಾಗಿದೆ. ಇದರಿಂದಾಗಿ ಧಾರವಾಡ ಜಿಲ್ಲೆಯ ರೈತರು ಕಂಗಾಲಾಗಿ ಹೋಗಿದ್ದಾರೆ.

ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದ ರೈತನ ಜಮೀನಿನಲ್ಲಿ ಈ ಸಮಸ್ಯೆ ಕಂಡು ಬಂದಿದೆ. ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿಯೇ ಬಿತ್ತನೆ ಬೀಜಗಳನ್ನು ತೆಗೆದುಕೊಂಡು ಬಂದಿದ್ದ ರೈತರು ಮಳೆಯಾಗುತ್ತಲೇ ಬಿತ್ತನೆ ಮಾಡಿದ್ದರು. ಆದರೆ ಬಿತ್ತನೆ ಮಾಡಿ ಎಷ್ಟೋ ದಿನ ಕಳೆದರೂ ಮೊಳಕೆ ಬಂದೇ ಇಲ್ಲ. ಜಿಲ್ಲೆಯಲ್ಲಿ ಸೊಯಾಬೀನ್ ಪ್ರಮುಖ ಬೆಳೆ. ಈಗಾಗಲೇ ಅನೇಕ ರೈತರು ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ರೈತ ಸಂಪರ್ಕ ಕೇಂದ್ರದಿಂದ ಬಿತ್ತನೆ ಬೀಜ ತೆಗೆದುಕೊಂಡು ಹೋಗಿದ್ದಾರೆ.

ಮೊದಲೇ ಇದೀಗ ಬಿತ್ತನೆ ಮಾಡುವ ಸಮಯ. ಹೀಗಾಗಿ ದಿನಗಟ್ಟನೇ ಕ್ಯೂನಲ್ಲಿ ನಿಂತು ಬಿತ್ತನೆ ಬೀಜ ತೆಗೆದುಕೊಳ್ಳೋದೇ ಒಂದು ಸಾಹಸ. ಅಂಥದ್ದರಲ್ಲಿ ಬೀಜ ಬಿತ್ತನೆ ಮಾಡಿ, ವಾರಗಳೇ ಕಳೆದರೂ ಮೊಳಕೆಯೇ ಕಾಣಿಸಿಕೊಂಡಿಲ್ಲ. ಇನ್ನು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ವಿತರಣೆ ಮಾಡಲಾಗಿರೋ ಬೀಜಗಳೇ ಕಳಪೆಯಾಗಿವೆ ಅನ್ನುತ್ತಾರೆ ರೈತರು.

ಎಲ್ಲೆಲ್ಲಿ ಇವರು ವಿತರಿಸಿರೋ ಬೀಜಗಳನ್ನು ಬಿತ್ತಲಾಗಿದೆಯೋ ಅಲ್ಲೆಲ್ಲಾ ಇದೇ ಸಮಸ್ಯೆ ಕಾಣಿಸಿಕೊಂಡಿದೆ. ಇದೇ ಕಾರಣಕ್ಕೆ ಈ ಬೀಜಗಳನ್ನು ತೆಗೆದುಕೊಂಡು ಹೋಗಿರೋ ಉಳಿದ ರೈತರು ಬಿತ್ತನೆ ಮಾಡಬೇಕೋ ಬೇಡವೋ ಅನ್ನೋದು ತಿಳಿಯದೇ ಸುಮ್ಮನೇ ಕೂಡುವಂತಾಗಿದೆ. ಈ ಬಗ್ಗೆ ಈಗಾಗಲೇ ಹಲವಾರು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಇದುವರೆಗೂ ಹೊಲಗಳಿಗೆ ಭೇಟಿ ನೀಡಿಲ್ಲ. ಮಳೆ ಚೆನ್ನಾಗಿ ಆಗುತ್ತಿರುವ ಸಂತೋಷದ ನಡುವೆಯೇ ಇಂಥದ್ದೊಂದು ಸಮಸ್ಯೆಯ ನಡುವೆ ರೈತರು ಕಂಗಾಲಾಗಿ ಹೋಗಿದ್ದಾರೆ.

Published On - 2:22 pm, Mon, 8 June 20

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ