1 ವರ್ಷದಿಂದ ಕೆಲಸಕ್ಕೆ ಬಾರದ ಮೂವರು ಪೊಲೀಸ್ ಕಾನ್ಸ್ಟೇಬಲ್ಗಳು ಕೆಲಸದಿಂದ ಬಿಡುಗಡೆ
ಒಂದು ವರ್ಷಕ್ಕೂ ಹೆಚ್ಚು ಕಾಲ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆ ಮೂವರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಉದ್ಯೋಗದಿಂದ ಬಿಡುಗಡೆ ಮಾಡಲಾಗಿದೆ.
ಧಾರವಾಡ: ಒಂದು ವರ್ಷಕ್ಕೂ ಹೆಚ್ಚು ಕಾಲ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆ ಮೂವರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಉದ್ಯೋಗದಿಂದ ಬಿಡುಗಡೆ ಮಾಡಲಾಗಿದೆ. ಈ ಮೂವರೂ ಕಾನ್ಸ್ಟೇಬಲ್ಗಳನ್ನು ಕೆಲಸದಿಂದ ಬಿಡುಗಡೆಗೊಳಿಸಿ ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ ಆದೇಶ ಹೊರಡಿಸಿದ್ದಾರೆ. ಗೈರು ಹಾಜರಿಗೆ ಸಿಬ್ಬಂದಿ ಸೂಕ್ತವಾದ ಕಾರಣ ನೀಡದ ಹಿನ್ನೆಲೆ ಅವರನ್ನು ಸೇವೆಯಿಂದ ಮುಕ್ತಗೊಳಿಸಲಾಗಿದೆ. ಕಲಘಟಗಿ ಠಾಣೆ ಪೊಲೀಸ್ ಕಾನ್ಸ್ಟೇಬಲ್ ಸಂತೋಷ್ ಭಂಗಿ, ಚನ್ನಬಸವ ಅಳ್ನಾವರ, ಮೈಲಾರ ದಾಸನಕೊಪ್ಪ ವಿರುದ್ಧ ಎಸ್ಪಿ ಲೋಕೇಶ್ ಅವರು ಈ ಅನಿವಾರ್ಯ ಕ್ರಮ ಕೈಗೊಂಡಿದ್ದಾರೆ.
ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬಲಿಯಾದ ಜೀವ: ರಾಜಕಾಲುವೆಗೆ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು
ನೆಲಮಂಗಲ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ದಿವ್ಯ ನಿರ್ಲಕ್ಷ್ಯದಿಂದ ಭಾನುವಾರ ರಾಜಕಾಲುವೆಗೆ (Rajakaluve) ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಚಿತ್ರದುರ್ಗದ ಕಂಬಾಳು ಮೂಲದ ವೆಂಕಟೇಶ್ (31) ಮೃತ ದುರ್ದೈವಿ. ದಾಸರಹಳ್ಳಿ ಸಮೀಪದ ರುಕ್ಮಿಣಿನಗರ ಮುಖ್ಯರಸ್ತೆಯಲ್ಲಿ ವೆಂಕಟೇಶ್ ತೆರೆದ ರಾಜಕಾಲುವೆಯಲ್ಲಿ ಕಾಲು ಜಾರಿ ಬಿದ್ದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಟಿ.ದಾಸರಹಳ್ಳಿ ಬಿಬಿಎಂಪಿ ಕಛೇರಿ ಎದುರು ಶವವಿಟ್ಟು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಪ್ರತಿಭಟನೆ ಮಾಡುತ್ತಿದ್ದಾರೆ.
3 ತಿಂಗಳ ಹಿಂದೆ ರಾಜಕಾಲುವೆಯಲ್ಲಿನ ಊಳು ತೆಗೆಯುವ ಸಂದರ್ಭದಲ್ಲಿ ರಾಜಕಾಲುವೆಯ ಚಪ್ಪಡಿ ಕಲ್ಲುಗಳನ್ನು ತೆಗೆಯಲಾಗಿತ್ತು. ಕಾಮಗಾರಿ ಮುಗಿದ ಮೇಲೆ ಚಪ್ಪಡಿಗಳನ್ನು ಹಾಕದೇ ಬಿಬಿಎಂಪಿ ನೌಕರರು ಹಾಗೇ ಬಿಟ್ಟು ಹೋಗಿದ್ದರು. ಬಿಬಿಎಂಪಿಯ ಈ ನಿರ್ಲಕ್ಷ್ಯಕ್ಕೆ ವ್ಯಕ್ತಿ ಬಲಿಯಾಗಿದ್ದಾನೆ.
Published On - 2:30 pm, Tue, 27 September 22