AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ನಿಧಿಯಿದೆ, ಪೂಜೆ ಮಾಡಿಸಬೇಕು ಎಂದು ಬಂದ ಖದೀಮರಿಗೆ ಧಾರವಾಡ ಪೊಲೀಸರು ಪಾಠ ಕಲಿಸಿದ್ದಾರೆ!

Treasure Hunt: ನಿಧಿ ತೆಗೆದುಕೊಡೋ ನೆಪದಲ್ಲಿ ಇಬ್ಬರೂ ಅನೇಕರ ಬಳಿ ಸಾಕಷ್ಟು ಹಣ ಪಡೆದಿರೋದಾಗಿಯೂ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇದೇ ಕಾರಣಕ್ಕೆ ಇವರಿಬ್ಬರನ್ನೂ ಮುಂಜಾಗ್ರತಾ ಕ್ರಮವಾಗಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮನೆಯಲ್ಲಿ ನಿಧಿಯಿದೆ, ಪೂಜೆ ಮಾಡಿಸಬೇಕು ಎಂದು ಬಂದ ಖದೀಮರಿಗೆ ಧಾರವಾಡ ಪೊಲೀಸರು ಪಾಠ ಕಲಿಸಿದ್ದಾರೆ!
ನಿಧಿಯಿದೆ, ಪೂಜೆ ಮಾಡಿಸಬೇಕು ಎಂದು ಬಂದ ಖದೀಮರಿಗೆ ಧಾರವಾಡ ಪೊಲೀಸರು ಪಾಠ ಕಲಿಸಿದ್ದಾರೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 24, 2023 | 1:23 PM

ಮೋಸ ಹೋಗುವವರು ಇರುವರೆಗೂ ಮೋಸ ಮಾಡುವವರೂ ಇದ್ದೇ ಇರುತ್ತಾರೆ. ಸದ್ಯ ಧಾರವಾಡದಲ್ಲಿ ಈ ಮಾತು ಪ್ರಚಲಿತಕ್ಕೆ ಬರುವಂತಾಗಿದೆ. ಏಕೆಂದರೆ ಸದ್ಯ ಜಿಲ್ಲೆಯಲ್ಲಿ ನಿಮ್ಮ ಮನೆಯಲ್ಲಿ ನಿಧಿ ಇದೆ ಹುಡುಕಿಕೊಡುತ್ತೇವೆ (Treasure Hunt) ಎಂದು ಯಾಮಾರಿಸುವ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಸಮಾಧಾನಕರ ಸಂಗತಿಯೆಂದರೆ ಆರಂಭದಲ್ಲಿಯೇ ಇಂಥ ಗ್ಯಾಂಗ್‌ಗೆ ಖಾಕಿ ಪಡೆ (Dharwad Police) ಶಾಕ್ ಕೊಟ್ಟಿದೆ. ಅದು ಹಣ, ಬಂಗಾರ ಏನೇ ಆಗಿರಲಿ ಏಕಾಏಕಿಯಾಗಿ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಸಿಕ್ಕು ಬಿಟ್ರೆ ಅದನ್ನು ದೊಡ್ಡ ನಿಧಿ ಅಂತಾನೇ ಹೇಳುತ್ತಾರೆ. ಅನಾದಿಕಾಲದಿಂದಲೂ ನಿಧಿ ಆಸೆಗೆ ಬಿದ್ದು ಅನೇಕರು ತಮ್ಮ ಜೀವವನ್ನೇ ಕಳೆದುಕೊಂಡಿದ್ದೂ ಇದೆ. ಆದರೂ ಇಂದಿಗೂ ಈ ನಿಧಿ ಆಸೆ ಜನರಲ್ಲಿ ಕಡಿಮೆಯಾಗಿಲ್ಲ. ಸದ್ಯ ಈ ನಿಧಿ ಆಸೆಯನ್ನೇ ಬಂಡವಾಳ ಮಾಡಿಕೊಂಡಿರುವ ಗ್ಯಾಂಗ್​ ಒಂದು ಜನರನ್ನು ಯಾಮಾರಿಸುವುದಕ್ಕಾಗಿ ಧಾರವಾಡದ ಗ್ರಾಮೀಣ ಭಾಗದಲ್ಲಿ (Navalgund) ಎಂಟ್ರಿ ಕೊಟ್ಟಿದೆ. ಅವರ ಮುಖ್ಯ ಟಾರ್ಗೆಟ್ ಅಮಾಯಕರು, ಮಧ್ಯಮ ವರ್ಗದವರು. ಹಳ್ಳಿಗೆ ಬಂದು, ಹಳೆ ಮನೆಗಳಲ್ಲಿರುವ ಮಧ್ಯಮ ವರ್ಗದವರನ್ನು ಗುರುತಿಸಿ ನಿಮ್ಮ ಮನೆಯಲ್ಲಿ ನಿಧಿಯಿದೆ ತೆಗೆದುಕೊಡುತ್ತೇವೆ. ಅದಕ್ಕೆ ಕೆಲವೊಂದು ಪೂಜೆ ಮಾಡಿಸಬೇಕು ಅಂತಾ ಸಬೂಬು ಹೇಳಿ ಹಣ ದೋಚಿ ಪರಾರಿಯಾಗುತ್ತಿದ್ದಾರಂತೆ.

ಇತ್ತೀಚೆಗೆ ಜಿಲ್ಲೆಯ ನವಲಗುಂದ ತಾಲೂಕಿನ ಗ್ರಾಮಗಳಲ್ಲಿ ನಿಧಿ ಹುಡುಕಿಕೊಡುತ್ತೇವೆ ಅಂತಾ ಹೇಳಿಕೊಂಡು ಕೆಲವರು ಓಡಾಡಿದ್ದಾರೆ. ಇಬ್ಬರು ವ್ಯಕ್ತಿಗಳು ವಾಹನವೊಂದರಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಓಡಾಡಿ, ಜನರಿಗೆ ತೆಗೆದುಕೊಡುವುದಾಗಿ ಹೇಳುತ್ತಿದ್ದಾರೆ ಅನ್ನೋ ಮಾಹಿತಿ ಪೊಲೀಸರಿಗೆ ಬಂದಿದೆ. ಕೂಡಲೇ ಅಲರ್ಟ್ ಆದ ನವಲಗುಂದ ಠಾಣೆ ಪೊಲೀಸರು KA35/M 2731 ವಾಹನವನ್ನು ಹಿಡಿದಿದ್ದಾರೆ. ಅದರಲ್ಲಿರೋ ಬೈಲಹೊಂಗಲ ಮೂಲದ ನಾಗಯ್ಯ ಮತ್ತು ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮದ ಮಾರುತಿ ಬೆಳ್ಳಿಕಟ್ಟಿ ಅನ್ನೋರನ್ನು ಬಂಧಿಸಿದ್ದಾರೆ.

ಬಳಿಕ ಅವರಿಂದ ಎಲ್ಲ ಮಾಹಿತಿ ಪಡೆದಿದ್ದಾರೆ. ನಿಧಿ ತೆಗೆದುಕೊಡೋ ನೆಪದಲ್ಲಿ ಇಬ್ಬರೂ ಅನೇಕರ ಬಳಿ ಸಾಕಷ್ಟು ಹಣ ಪಡೆದಿರೋದಾಗಿಯೂ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇದೇ ಕಾರಣಕ್ಕೆ ಇವರಿಬ್ಬರನ್ನೂ ಮುಂಜಾಗ್ರತಾ ಕ್ರಮವಾಗಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೇ ಜನ ಇಂಥವರನ್ನು ನಂಬದೇ, ನೇರವಾಗಿ ಪೊಲೀಸರಿಗೆ ಇಂಥವರ ವಿರುದ್ಧ ದೂರು ನೀಡುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಒಟ್ಟಾರೆಯಾಗಿ ಉದರ ನಿಮಿತ್ತಂ ಬಹುಕೃತ ವೇಷಂ ಎನ್ನುವಂತೆ, ಮೋಸವನ್ನೇ ತಮ್ಮ ಉದ್ಯೋಗ ಮಾಡಿಕೊಂಡಿರೋ ಕೆಲವರು ಈಗ ಜನರ ಬಳಿ ನಿಧಿಯಾಸೆಯ ಗಾಳ/ದಾಳ ಹಾಕಲು ಬರುತ್ತಿದ್ದಾರೆ. ಜನರು ನಿಧಿಯಾಸೆಗಾಗಿ ಕೈಯಲ್ಲಿ ಇರೋದನ್ನು ಕಳೆದುಕೊಳ್ಳದೇ ಜಾಗೃತರಾದಲ್ಲಿ ಮಾತ್ರ ಇಂತಹ ಗ್ಯಾಂಗ್ ಆಟವನ್ನು ನಿಲ್ಲಿಸಬಹುದಾಗಿದೆ.

ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ 9, ಧಾರವಾಡ

ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ