ಸಿಎಂ ಬೊಮ್ಮಾಯಿ ಜೊತೆ ಚರ್ಚೆಯ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ – ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ದೀಪಾವಳಿ ಬಳಿಕ ದೆಹಲಿಗೆ ಬರುವುದಾಗಿ ಸಿಎಂ ಬೊಮ್ಮಾಯಿ ನನಗೆ ತಿಳಿಸಿದ್ದಾರೆ. ಹೀಗಿರುವಾಗ ಸಂಪುಟ ವಿಸ್ತರಣೆ ಬಗ್ಗೆ ಯಾರೂ ಗೊಂದಲಪಡುವ ಅಗತ್ಯವಿಲ್ಲ. ಸಮಯ ಬಂದಾಗ ಸಂಪುಟ ವಿಸ್ತರಣೆ ಆಗಲಿದೆ ಎಂದು ಜೋಶಿ ಸೂಚ್ಯವಾಗಿ ಹೇಳಿದರು.
ಹುಬ್ಬಳ್ಳಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ (CM Basavaraj Bommai) ಹೇಳಿರುವಾಗ ಅನಗತ್ಯ ಗೊಂದಲ ಬೇಡ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಮಯ ಬಂದಾಗ ಸಂಪುಟ ವಿಸ್ತರಣೆ (Cabinet Expansion) ಆಗುತ್ತದೆ ಎಂದರು.
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈಗಾಗಲೇ ಸಂಪುಟ ವಿಸ್ತರಣೆ ಕುರಿತಂತೆ ಚರ್ಚಿಸಲು ದೆಹಲಿ ಪ್ರವಾಸ ಮಾಡಲಿದ್ದಾರೆ. ಸ್ವತಃ ಸಿಎಂ ಬೊಮ್ಮಾಯಿ ಅವರೇ ಸಂಪುಟ ವಿಸ್ತರಣೆ ಕುರಿತಂತೆ ಚರ್ಚಿಸಲು ದೆಹಲಿಗೆ ಹೋಗುತ್ತಿರುವುದಾಗಿ ಹೇಳಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ದೆಹಲಿಗೆ ಬಂದಾಗ ನಾವೆಲ್ಲ ನಾಯಕರು ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ತೇವೆ ಎಂದು ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದರು.
ದೀಪಾವಳಿ ಬಳಿಕ ದೆಹಲಿಗೆ ಬರುವುದಾಗಿ ಸಿಎಂ ಬೊಮ್ಮಾಯಿ ನನಗೆ ತಿಳಿಸಿದ್ದಾರೆ. ಹೀಗಿರುವಾಗ ಸಂಪುಟ ವಿಸ್ತರಣೆ ಬಗ್ಗೆ ಯಾರೂ ಗೊಂದಲಪಡುವ ಅಗತ್ಯವಿಲ್ಲ. ಸಮಯ ಬಂದಾಗ ಸಂಪುಟ ವಿಸ್ತರಣೆ ಆಗಲಿದೆ ಎಂದು ಜೋಶಿ ಸೂಚ್ಯವಾಗಿ ಹೇಳಿದರು.
ನಾಡಿನ ಜನತೆಗೆ ದೀಪಾವಳಿ ಶುಭಾಶಯ ಕೋರಿದ ಸಚಿವ ಜೋಶಿ:
ನಾಡಿನ ಜನತೆಗೆ ದೀಪಾವಳಿಯ ಶುಭಾಶಯ ಕೋರಿದ ಸಚಿವ ಪ್ರಲ್ಹಾದ್ ಜೋಶಿ, ನಾಳೆಯಿಂದ ಕಾರ್ತೀಕ ಮಾಸ ಆರಂಭವಾಗಲಿದೆ. ಸಮಾಜದಲ್ಲಿ ಕತ್ತಲು ಸಂಪೂರ್ಣವಾಗಿ ನಿವಾರಣೆಯಾಗಿ ಎಲ್ಲರ ಬಾಳಲ್ಲಿ ಬೆಳಕು ಮೂಡಲಿ ಎಂದು ಪ್ರಲ್ಹಾದ್ ಜೋಶಿ ಇದೇ ವೇಳೆ ಆಶಯ ವ್ಯಕ್ತಪಡಿಸಿದರು. ಕತ್ತಲಿನಿಂದ ಬೆಳಕಿನತ್ತ ಸಾಗುವುದೇ ದೀಪಾವಳಿಯ ಹಬ್ಬದ ವಿಶೇಷ. ದೇಶದ ಜನರ ಕಲ್ಯಾಣಕ್ಕಾಗಿ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಪರೂಪದ ಕಾರ್ಯಕ್ರಮ ನೆರವೇರಿಸಿದ್ದಾರೆ. ದೀಪಾವಳಿಯ ಶುಭ ಸಂದರ್ಭದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಕೇಂದ್ರ ಸಚಿವ ಜೋಶಿ ದೀಪಾವಳಿಯ ಶುಭಕೋರಿದರು.
ದೀಪಾವಳಿಯ ಶುಭ ಸಂದರ್ಭದಲ್ಲಿ ನಗರದ ವಿವಿಧ ವಾಣಿಜ್ಯ ಮಳಿಗೆ ಹಾಗೂ ಅಂಗಡಿಗಳಲ್ಲಿ ನಡೆದ ಲಕ್ಷ್ಮೀ ಪೂಜೆ ಮತ್ತು ಅಂಗಡಿ ಪೂಜೆಯಲ್ಲಿ ಪಾಲ್ಗೊಂಡು ಶುಭ ಹಾರೈಸಿದೆನು.#HappyDeepavali pic.twitter.com/hMSmUPzEdC
— Pralhad Joshi (@JoshiPralhad) October 24, 2022
Published On - 4:07 pm, Tue, 25 October 22