ಸಿ.ಟಿ ರವಿ ಬಂಧನ ಪ್ರಕರಣದಲ್ಲಿ ಪೊಲೀಸರ ವರ್ತನೆ ಖಂಡಿಸಿ ಕಾನೂನು ಹೋರಾಟ; ಪ್ರಲ್ಹಾದ್ ಜೋಶಿ

| Updated By: ಸುಷ್ಮಾ ಚಕ್ರೆ

Updated on: Dec 22, 2024 | 2:09 PM

ಬಿಜೆಪಿ ಎಂಎಲ್​​ಸಿ ಸಿ.ಟಿ ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ನೀಡಿದ್ದಾರೆ. ವಿಧಾನ ಪರಿಷತ್ ವಿಪಕ್ಷ ನಾಯಕರು ಈ ಬಗ್ಗೆ ದೂರು ನೀಡಿದ್ದಾರೆ. ಆದರೆ, ಇದುವರೆಗೂ ಪ್ರಕರಣ ದಾಖಲಿಸಿಕೊಂಡಿಲ್ಲ. ಹರಿಜನರು ಅಂತಾ ಛಲವಾದಿ ಬಳಿ ಕಮಿಷನರ್ ಮಾತಾಡಿಸಿಲ್ವಾ? ಛಲವಾದಿ ನಾರಾಯಣಸ್ವಾಮಿ ಪರಿಷತ್ ವಿಪಕ್ಷ ನಾಯಕರು‌ ಹರಿಜನರು ಎಂದು ಕಮಿಷನರ್​​​ ಮಾತಾಡಿಸಿಲ್ವಾ? ಇದನ್ನು ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಪ್ರಲ್ಹಾದ್ ಜೋಶಿ ಟೀಕೆ ಮಾಡಿದ್ದಾರೆ.

ಸಿ.ಟಿ ರವಿ ಬಂಧನ ಪ್ರಕರಣದಲ್ಲಿ ಪೊಲೀಸರ ವರ್ತನೆ ಖಂಡಿಸಿ ಕಾನೂನು ಹೋರಾಟ; ಪ್ರಲ್ಹಾದ್ ಜೋಶಿ
Pralhad Joshi
Follow us on

ಹುಬ್ಬಳ್ಳಿ: ಬಿಜೆಪಿ ಎಂಎಲ್​​ಸಿ ಸಿ.ಟಿ. ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಪೊಲೀಸ್​​​ ಅಧಿಕಾರಿಗಳ ವರ್ತನೆಯನ್ನು ನಾವು ಖಂಡಿಸುತ್ತೇವೆ. ಈ ಬಗ್ಗೆ ನಾವು ಕಾನೂನು ಹೋರಾಟ ಮಾಡುತ್ತೇವೆ. ಸರ್ಕಾರ ಒಂದೇ ಇರುವುದಿಲ್ಲ, ಬದಲಾಗುತ್ತಿರುತ್ತದೆ ಎಂಬುದು ನೆನಪಿರಲಿ. ಹೀಗಾಗಿ, ಬೆಳಗಾವಿ ಪೊಲೀಸ್ ಕಮಿಷನರ್​​​​ ಎಚ್ಚರಿಕೆಯಿಂದ ಇರಬೇಕು ಎಂದು ಟೀಕಿಸಿದ್ದಾರೆ.

ಖಾನಾಪುರ, ಕಬ್ಬಿನ ಗದ್ದೆ ಕಡೆ ಕರೆದುಕೊಂಡು ಹೋಗುತ್ತೀರಿ. ಬೆಳಗಾವಿ ಪೊಲೀಸ್ ಕಮಿಷನರ್​ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ಸುವರ್ಣಸೌಧಕ್ಕೆ ನುಗ್ಗಿದವರ ಬಂಧನ ಆಗಿಲ್ಲ. ಬೆಳಗಾವಿ ಪೊಲೀಸ್ ಕಮಿಷನರ್​ಗೆ ಕಾನೂನಿನ ಪಾಠ ಆಗಬೇಕು. ಸುವರ್ಣಸೌಧದಲ್ಲಿ ನಡೆದ ಘಟನೆ ಬಗ್ಗೆ ತರಾತುರಿಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ. ದೂರು ಕೊಟ್ಟವರು ಆಪ್ತ ಸಹಾಯಕ, ಅವರು ಒಳಗಡೆ ಇದ್ದರಾ? ಬೆಳಗಾವಿ ಪೊಲೀಸ್​ ಕಮಿಷನರ್​ಗೆ ಸಾಮಾನ್ಯ ಜ್ಞಾನ ಇರಬೇಕು. ಬೆಳಗಾವಿ ಕಮಿಷನರ್​​ ಐಪಿಎಸ್​ ಆಗಲು ಅಸಮರ್ಥರು​​​​ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ರವಿ ಅಶ್ಲೀಲ ಪದಬಳಕೆ ಮಾಡಿಲ್ಲ ಅಂದಿರುವ ಕಾರಣ ಪ್ರಕರಣ ಇಲ್ಲಿಗೆ ನಿಲ್ಲಿಸುವುದು ಉತ್ತಮ: ಸತೀಶ್ ಜಾರಕಿಹೊಳಿ

ಅಂಬೇಡ್ಕರ್ ಅವರಿಗೆ ಸತತ ಅವಮಾನ ಮಾಡಿದ್ದಾರೆ ಎಂಬ ಕಾರಣಕ್ಕೆ ಗಲಾಟೆ ಮಾಡಿ ಸಿ.ಟಿ ರವಿ, ಬಿಜೆಪಿಯನ್ನು ಹತ್ತಿಕ್ಕೋ ಪ್ರಯತ್ನ ಮಾಡುತ್ತಿದ್ದಾರೆ. ಕಾನೂನು ಹೋರಾಟ ಮಾಡುತ್ತೇವೆ. ಅಧಿಕಾರಿಗಳ ವರ್ತನೆಯನ್ನು ನಾವು ಖಂಡಿಸುತ್ತೇವೆ. ವಿರೋಧ ಪಕ್ಷದ ನಾಯಕರು ಕೂಡ ದೂರು ಕೊಟ್ಟರು. ಅದು ಇದುವರೆಗೂ ದೂರು ದಾಖಲಾಗಿಲ್ಲ. ಛಲವಾದಿ ನಾರಾಯಣ ಸ್ವಾಮಿ ಹರಿಜನರು ಎಂದು ಕಮೀಷನರ್ ಮಾತನಾಡಿಸಲಿಲ್ಲವೇ? ಅದೊಂದು ಸಾಂವಿಧಾನಿಕ ಹುದ್ದೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು‌ ಹರಿಜನರು ಎಂದು ಅವರನ್ನು ಮಾತಾಡಿಸಿಲ್ವ ಎಂದು ಪ್ರಲ್ಹಾದ್ ಜೋಶಿ ಗರಂ ಆಗಿದ್ದಾರೆ.

ಇದನ್ನೂ ಓದಿ: ಆ ರಾತ್ರಿ ಕಾಂತಾರದ ದೈವದ ರೀತಿ ವರ್ತಿಸಿದ್ದರಿಂದ ಪೊಲೀಸರಿಂದ ಬಚಾವ್​ ಆದೆ: ಸಿಟಿ ರವಿ ಸ್ಫೋಟಕ ಹೇಳಿಕೆ

ಅಂಬೇಡ್ಕರ್ ಅವರನ್ನು ಸೋಲಿಸಿದಾಗ ನಿಮಗೆ ಯಾವ ನಾಯಿ ಕಡಿದಿತ್ತು? ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರಲ್ಹಾದ್ ಜೋಶಿ ಕೋಪಗೊಂಡಿದ್ದಾರೆ. ಅಮಿತ್ ಶಾ ವಿಚಾರವಾಗಿ ಬಾಯಿಗೆ ಬಂದಂತೆ ಮಾತಾಡ್ತಾರೆ. ನಿಮ್ಮ ನಾಯಕರಿಗೆ ಯಾವ ನಾಯಿ ಕಡದಿತ್ತು? ಸಿ.ಟಿ ರವಿ ಪ್ರಕರಣ ಗೃಹ ಸಚಿವರ ಗಮನಕ್ಕೆ ಬಂದಿಲ್ಲ ಅನ್ನೋದಾದರೆ ಅವರು ಆ ಹುದ್ದೆಯಲ್ಲಿ ಇರಬೇಕೋ ಬೇಡವೋ ಅನ್ನೋದನ್ನು ಅವರು ವಿಚಾರ ಮಾಡಬೇಕು. ಏನೇ ಆದರೂ ಗೃಹ ಸಚಿವರ ಗಮನಕ್ಕೆ ಬರುತ್ತದೆ. ಗೊತ್ತಿಲ್ಲ ಅಂದರೆ ಏನು ಅರ್ಥ, ಪರಮೇಶ್ವರ್ ಒಬ್ಬ ಜಂಟಲ್​ಮ್ಯಾನ್. ಅವರು ವಿಚಾರ ಮಾಡಬೇಕು. ಅವರು ಸಿ.ಟಿ ರವಿ ವಿಚಾರದಲ್ಲಿ ಅತ್ಯಂತ ಭಯಂಕರ ದ್ವೇಷ ಸಾಧಿಸಿದ್ದಾರೆ. ಅದಕ್ಕೆ ಬೆಳಗಾವಿ ಪೊಲೀಸರು ಸಾಥ್ ಕೊಟ್ಟಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ