ಧಾರವಾಡ: ಸುಶೀಲಾ ಕುಲಕರ್ಣಿ ಸ್ಮೃತಿ ಪ್ರತಿಷ್ಠಾನ ನೀಡುವ “ಕವಿ ಕಾವ್ಯ ಮನ್ನಣೆ” ಪ್ರಶಸ್ತಿಯನ್ನು ಈ ಬಾರಿ ವಿಜಯಪುರದ ಡಾ ಆರ್ ಕೆ ಕುಲಕರ್ಣಿ (Dr RK Kulkarni) ಅವರಿಗೆ ನೀಡಲಾಯಿತು. ಸ್ಮೃತಿ ಪ್ರತಿಷ್ಠಾನ, ಸುದಾಮ ದತ್ತಿ ನಿಧಿ ಯವರು ದಿವಂಗತ ನಾರಾಯಣ್ ಎಲ್ ಕುಲಕರ್ಣಿ ಅವರ ಸ್ಮರಣಾರ್ಥ ನೀಡುವ ಈ ಪ್ರಶಸ್ತಿಯನ್ನು (Award) ಧಾರವಾಡದಲ್ಲಿ (Dharwad) ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. ವೃತ್ತಿಯಿಂದ ಇಂಗ್ಲಿಷ್ ಹಿರಿಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಡಾ ಆರ್ ಕೆ ಕುಲಕರ್ಣಿಯವರು ಸಾಹಿತ್ಯದಲ್ಲಿ (Literature) ಕೂಡ ಕೃಷಿ ಮಾಡಿದವರು. ಶ್ರೀ ಅರವಿಂದರ ಪ್ರಸಿದ್ಧ “ ಸಾವಿತ್ರಿ” ಸೇರಿದಂತೆ ಹಲವು ಕೃತಿಗಳನ್ನು ಅನುವಾದ ಮಾಡಿದ್ದಾರೆ. ಹಾಗೂ ಕವನ ಸಂಕಲ, ಚಿಂತನ ಗ್ರಂಥಗಳನ್ನು, ಆಧ್ಯಾತ್ಮಿಕ ಕೃತಿಗಳನ್ನು, ಲೇಖನಗಳನ್ನು ಬರೆದಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಡಾ ಆರ್ ಕೆ ಕುಲಕರ್ಣಿಯವರು “ ಸಾವಿತ್ರಿ”ಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅರವಿಂದರ ಈ ಕೃತಿಯ ಆಧ್ಯಾತ್ಮಿಕ ಹಿನ್ನೆಲೆ ಹಾಗೂ ಶ್ರೇಷ್ಠತೆ, ಸಾಹಿತ್ಯಿಕ ಮಹತ್ವ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಅವರು ಬೆಳಕು ಚೆಲ್ಲಿದರು.
ಇದನ್ನೂ ಓದಿ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ ಶ್ಯಾಮಸುಂದರ ಬಿದರಕುಂದಿ ಅವರು ವಹಿಸಿಕೊಂಡಿದ್ದರು, ಪ್ರೊ ಜಿ ಎಸ್ ಕುಲಕರ್ಣಿ ಅವರು ಡಾ ಆರ್ ಕೆ ಕುಲಕರ್ಣಿ ಕುರಿತು ಮಾತನಾಡಿದರು, ಸುರೇಶ್ ಕುಲಕರ್ಣಿ ಅವರು ಸ್ವಾಗತ ಮಾಡಿದರು ಹಾಗೂ ಶ್ರೀಮತಿ ರಂಜನಾ ಕುಲಕರ್ಣಿ ನಿರೂಪಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ