ಕಷ್ಟಪಟ್ಟು ದುಡಿದವರು ನಾವು! ಕಂಪನಿಯೊಳಕ್ಕೆ ಅಣ್ಣನ ಮಕ್ಕಳನ್ನು ಬಿಟ್ಟುಕೊಂಡಿದ್ದಕ್ಕೆ ಗುರೂಜಿಯ ಕೊಲೆ ಮಾಡಿದೆವು -ಸರಳವಾಸ್ತು ಗುರೂಜಿ ಹಂತಕರು

Saral Vastu Guruji: ಅಣ್ಣನ ಮಕ್ಕಳು ಎಂಟ್ರಿ ಬಳಿಕ ನಿಮ್ಮ ಅವನತಿ ಪ್ರಾರಂಭವಾಗಿದೆ. ಕಂಪನಿಯಿಂದ 400 ಜನರನ್ನ ಏಕಾಏಕಿ ತೆಗೆದು ಹಾಕಿದಿರಿ. ಸಿಬ್ಬಂದಿಯ ಶಾಪ ನಿಮ್ಮನ್ನ ಸುಮ್ನೆ ಬಿಡುವುದಿಲ್ಲ ಎಂದು ಗೂರುಜಿ ಹಂತಕರು ವಾಟ್ಸಪ್‌ಗೆ ಮೆಸೇಜ್ ಕಳುಹಿಸಿದ್ದರು.

ಕಷ್ಟಪಟ್ಟು ದುಡಿದವರು ನಾವು! ಕಂಪನಿಯೊಳಕ್ಕೆ ಅಣ್ಣನ ಮಕ್ಕಳನ್ನು ಬಿಟ್ಟುಕೊಂಡಿದ್ದಕ್ಕೆ ಗುರೂಜಿಯ ಕೊಲೆ ಮಾಡಿದೆವು -ಸರಳವಾಸ್ತು ಗುರೂಜಿ ಹಂತಕರು
ಕಷ್ಟಪಟ್ಟು ದುಡಿದವರು ನಾವು! ಗುರೂಜಿ ಕಂಪನಿಯೊಳಕ್ಕೆ ಅಣ್ಣನ ಮಕ್ಕಳನ್ನು ಬಿಟ್ಟುಕೊಂಡಿದ್ದಕ್ಕೆ ಕೊಲೆ -ಕಾರಣ ಬಿಚ್ಚಿಟ್ಟ ಸರಳವಾಸ್ತು ಗುರೂಜಿ ಹಂತಕರು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 08, 2022 | 12:11 PM

ಹುಬ್ಬಳ್ಳಿ: ಸರಳವಾಸ್ತು ಗುರೂಜಿ ಚಂದ್ರಶೇಖರ ಹತ್ಯೆ ಪ್ರಕರಣದ (vastu expert astrologer Chandrashekhar Guruji) ಬಗ್ಗೆ ಆರೋಪಿ ಹಂತಕರು ಹತ್ಯೆಗೆ ಪ್ರಮುಖ ಕಾರಣ ಏನು ಎಂಬುನ್ನು ಬಿಚ್ಚಿಟ್ಟಿದ್ದಾರೆ. ಚಂದ್ರಶೇಖರ ಗುರೂಜಿ ಕಂಪನಿಗೆ ಕಷ್ಟಪಟ್ಟು ದುಡಿದವರು ನಾವು. ಕಂಪನಿ ಅಭಿವೃದ್ದಿಯಾಗಲು ನಾವು ಕಷ್ಟಪಟ್ಟಿದ್ದೇವೆ. ಆದರೆ ಗುರೂಜಿ ಕಂಪನಿಯೊಳಕ್ಕೆ ಅಣ್ಣನ ಮಕ್ಕಳನ್ನು ಬಿಟ್ಟುಕೊಂಡಿದ್ದಕ್ಕೆ ಬೇಸತ್ತು ಹತ್ಯೆ ಮಾಡಿದೆವು ಎಂದು ಸರಳವಾಸ್ತು ಗುರೂಜಿ ಹಂತಕರು ಕಾರಣ ಬಿಚ್ಚಿಟ್ಟಿದ್ದಾರೆ. ಏಕೆ ನಿಮ್ಮ ಅಣ್ಣನ ಮಕ್ಕಳು ಕಂಪನಿಗೆ ಎಂಟ್ರಿ ಕೊಟ್ಟರು? ಎಂದು ಕಂಪನಿಗೆ ಅಣ್ಣ ಮಕ್ಕಳು ಎಂಟ್ರಿ ಕೊಟ್ಟ ಬಳಿಕ ವಾಟ್ಸಪ್‌ಗೆ ಗೂರುಜಿ ಹಂತಕರು ಮೆಸೇಜ್ ಕಳುಹಿಸಿದ್ದರು.

ಅಣ್ಣನ ಮಕ್ಕಳು ಎಂಟ್ರಿ ಬಳಿಕ ನಿಮ್ಮ ಅವನತಿ ಪ್ರಾರಂಭವಾಗಿದೆ. ಕಂಪನಿಯಿಂದ 400 ಜನರನ್ನ ಏಕಾಏಕಿ ತೆಗೆದು ಹಾಕಿದಿರಿ. ಸಿಬ್ಬಂದಿಯ ಶಾಪ ನಿಮ್ಮನ್ನ ಸುಮ್ನೆ ಬಿಡುವುದಿಲ್ಲ ಎಂದು ಗೂರುಜಿ ಹಂತಕರು ವಾಟ್ಸಪ್‌ಗೆ ಮೆಸೇಜ್ ಕಳುಹಿಸಿದ್ದರು. ಗುರೂಜಿ ಹತ್ಯೆ ಆರೋಪಿ ಮಂಜುನಾಥ ಮರೆವಾಡ (manjunath marewad) 24-06-2019ರಂದು ಗುರೂಜಿಗೆ ಮಾಡಿದ್ದ ವಾಟ್ಸ್ ಆಪ್ ಮೇಸೆಜ್ ಅನ್ನು ಉಲ್ಲೇಖಿಸಿ, ಹುಬ್ಬಳ್ಳಿ ಪೊಲೀಸರು (Hubballi Police) ಸಲ್ಲಿಸಿರುವ ಜಾರ್ಜ್ ಶೀಟ್ ನಲ್ಲಿ ಈ ಅಂಶಗಳೆಲ್ಲಾ ಅಡಕವಾಗಿದೆ.

ಚಂದ್ರಶೇಖರ ಗುರೂಜಿ ಮತ್ತು ಮಂಜುನಾಥ ಮರೆವಾಡ ಮಹಾಂತೇಶ್ ನಡುವೆ ವೈಮನಸ್ಸು ಮೂಡಲು ಕಾರಣ ಯಾರು? 2014 ರ ನಂತರ ಗುರೂಜಿ ಸರಳವಾಸ್ತು ಕಂಪನಿಯಲ್ಲಿ ಮಹತ್ತರ ಬೆಳವಣಿಗೆ ಹಿಂದೆ ಇದ್ದವರು ಯಾರು? ಚಂದ್ರಶೇಖರ ಗುರೂಜಿ ಮತ್ತು ಸಿಬ್ಬಂದಿ ನಡುವೆ ಇರುವ ನಿಜವಾದ ವಿಲನ್ ಗಳು ಯಾರು? ಈ ಅಂಶಗಳ ಬಗ್ಗೆ ಸ್ವತಃ ಗುರೂಜಿ ಮುಂದೆ ಹಂತಕ ಮಂಜುನಾಥ ಮರೆವಾಡ ನೋವು ತೋಡಿಕೊಂಡಿದ್ದ. ಮಂಜುನಾಥ ನೋವು ತೋಡಿಕೊಂಡ ಬಗ್ಗೆ ಜಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. 24-06-2019ರಲ್ಲಿ ಮಂಜುನಾಥ ಮರೆವಾಡ ಗುರೂಜಿಗೆ ಮಾಡಿದ್ದ ವಾಟ್ಸ್ ಆಪ್ ಮೇಸೆಜ್ ಲಭ್ಯವಾಗಿದೆ.

ವಾಟ್ಸ್ ಮೇಸೆಜ್ ನಲ್ಲಿರುವ ಪ್ರಮುಖ ಅಂಶಗಳು:

ಡಿಯರ್ ಗುರೂಜಿ ಅಂತ ಆರಂಭವಾಗುವ ಸಂದೇಶ… ನೀವು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಗೆ ಎರಡನೇ ತಂದೆಯಾಗಿದ್ದಿರಿ. ನಿಮ್ಮ ಏಳಿಗೆಗಾಗಿ ನಾವು ಕಷ್ಟಪಟ್ಟು ದುಡಿದ್ವಿ. ಆದರೆ ಯಾವಾಗ ನಿಮ್ಮ ಅಣ್ಣ ಮಕ್ಕಳು ಕಂಪನಿಗೆ ಎಂಟ್ರಿ ನೀಡಿದರೋ ಆಗ ಎಲ್ಲವೂ ಬದಲಾಯಿತು. ನೀವು ಸಿಬ್ಬಂದಿಯನ್ನು ಮಕ್ಕಳಂತೆ ಕಾಣುತ್ತಿದ್ದಿರಿ. ಆದರೆ ನಿಮ್ಮ ಅಣ್ಣ ಮಕ್ಕಳು ನಿಮ್ಮನ್ನು ಮತ್ತು ನಮ್ಮನ್ನು ಬೇರೆ ಮಾಡಲು ಸ್ಟಾರ್ಟ್ ಮಾಡಿದರು. ನಿಮ್ಮ ಅಣ್ಣ ಮಕ್ಕಳು ಯಾವಾಗ ಕಂಪನಿಗೆ ಬಂದರೋ ಆಗ ನಿಮ್ಮ ‌ಅವನತಿ‌ ಆರಂಭವಾಯಿತು. ನೀವು ನಮ್ಮ ಪಾಲಿನ ದೇವರು ಅಂತ ತಿಳಿದುಕೊಂಡಿದ್ವಿ. ನಿಮಗೆ ನಾವು ಏನು ಮಾಡಿದ್ವಿ? ನಮ್ಮ ಕಣ್ಣೀರು ನಿಮ್ಮನ್ನಾ ಕ್ಷಮಿಸೋದಿಲ್ಲ. 400 ಜನ ಸಿಬ್ಬಂದಿಗಳನ್ನು ಕೆಲಸದಿಂದ ತೆಗದುಹಾಕಿದ್ರಿ, ಅವರ ಕಣ್ಣೀರು ಸುಮ್ಮನೆ ಬಿಡೋದಿಲ್ಲ. ಆದರೂ ನಿಮಗೆ ನಾವು ಒಳ್ಳೆಯದನ್ನೆ ಬಯಸುತ್ತೀವಿ ಎಂದು ಸಂದೇಶದಲ್ಲಿ ಹೇಳಲಾಗಿದೆ.

Published On - 12:00 pm, Sat, 8 October 22