ಬೆಂಗಳೂರು: ನಟ ದರ್ಶನ್ ಪುಡಾಂಗ್ ಎಂಬ ಪದ ಬಳಸಿದ್ದರಿಂದ ಬಹಳ ಬೇಸರವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಮತ್ತು ನಿರ್ದೇಶಕ ಪ್ರೇಮ್, ಕರಿಯ ಸಿನಿಮಾ ವೇಳೆ ಅವರ ಮನೆಗೆ ನಾನು ಹೋಗಿದ್ದೆ. ದರ್ಶನ್ ಅವರ ತಾಯಿ ನನಗೆ ಕೈ ತುತ್ತು ನೀಡಿದ್ದಾರೆ. ನನಗೆ, ರಕ್ಷಿತಾಗೆ ನಟ ದರ್ಶನ್ (Darshan) ಆತ್ಮೀಯರಾಗಿದ್ದಾರೆ. ಪುಡಾಂಗ್ ಪದ ಬಳಕೆಗಷ್ಟೇ ನಾನು ಪ್ರತಿಕ್ರಿಯಿಸಿರುವೆ. ಬೇರೆ ವಿಚಾರಗಳಿಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದರು.
ದರ್ಶನ್ ಅವರಿಗೆ ನಾನು ಮತ್ತು ರಕ್ಷಿತಾ ತುಂಬಾ ಕ್ಲೋಸ್ ಫ್ರೆಂಡ್ಸ್. ಪುಡಾಂಗ್ ಪದ ಬಳಸಿದ್ದು ನನಗೆ ತುಂಬಾ ಬೇಸರವಾಗಿದೆ. ನಾನು ಮತ್ತೆ ರಕ್ಷಿತಾ ಈ ಬಗ್ಗೆ ಮಾತಾಡಿದ್ವಿ. ದರ್ಶನ್ ಯಾವತ್ತೂ ಹಾಗೆ ಮಾತಾಡಲ್ಲ. ಯಾಕೆ ಹಾಗೆ ಮಾತಾಡಿದ್ರು ಅನ್ನೋದು ಯೋಚನೆ ಆಗಿದೆ. ಕರಿಯಾ ನಂತರ ಒಂದು ಸಿನಿಮಾ ಮಾಡಬೇಕು ಅಂತ ಮಾತುಕತೆ ಆಗಿತ್ತು. ಅದಾದ ಮೇಲೆ ನಿರ್ಮಾಪಕ ಉಮಾಪತಿ ದರ್ಶನ್ ಸಿನಿಮಾ ಮಾಡಿಕೊಡಿ ಅಂತ ಬಂದ್ರು. ಆಯ್ತು ನಿರ್ಮಾಪಕರೇ ಮಾಡ್ತಿವಿ ಅಂದ್ವಿ ಎಂದು ಪ್ರೇಮ್ ತಿಳಿಸಿದರು.
ದರ್ಶನ್ ಯಾಕೆ ಆ ರೀತಿ ಹೇಳಿದರು ಗೊತ್ತಿಲ್ಲ. ಮಾತಿನ ಭರದಲ್ಲಿ ಆ ಪದ ಬಳಸಿರಬಹುದು. ದರ್ಶನ್ ಅಭಿಮಾನಿಗಳು ಕ್ಷಮೆ ಯಾಚಿಸುವುದು ಬೇಡ. ನನಗೆ ಯಾರೊಬ್ಬರೂ ಕ್ಷಮೆ ಯಾಚಿಸುವುದು ಬೇಡ. ನೀವಿದ್ದರೆ ನಾವು, ಹಾಗಾಗಿ ನೀವು ಕ್ಷಮೆ ಯಾಚಿಸಬೇಡಿ. ನನಗೆ ಬೇಸರವಾಗಿದ್ದರಿಂದ ಪತ್ರ ಬರೆದು ಪ್ರತಿಕ್ರಿಯಿಸಿದೆ. ಅವರ ವಿಚಾರದ ನಡುವೆ ನನ್ನ ಹೆಸರು ಬಂದಿದ್ದು ಸರಿಯಲ್ಲ. ನಾನು ಏನಾದರೂ ತಪ್ಪು ಮಾಡಿದ್ದರೆ ತಿಳಿಸಬೇಕು. ನಾನು ಕೂಡ ತಪ್ಪು ತಿದ್ದಿಕೊಂಡು ಹೋಗುತ್ತೇನೆ ಎಂದು ನಿರ್ದೇಶಕ ಪ್ರೇಮ್ ತಿಳಿಸಿದರು.
ಸಾರ್ವಜನಿಕವಾಗಿ ನನ್ನನ್ನು ಪುಡಾಂಗ್ ಎಂದಿದ್ದು ತಪ್ಪು. ನನ್ನನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿದ್ದರೆ ಓಕೆ. ಅಥವಾ ಮೊಬೈಲ್ನಲ್ಲಿ ಮಾತನಾಡಿದ್ದರೆ ಹೇಳುತ್ತಿದ್ದೆ. ಆದರೆ ಸಾರ್ವಜನಿಕವಾಗಿ ‘ಪುಡಾಂಗ್’ ಅಂತ ಹೇಳಬಾರದಿತ್ತು. ಡಾ.ರಾಜ್‌ಕುಮಾರ್, ರಜಿನಿಕಾಂತ್ ನನಗೆ ಬೆನ್ನು ತಟ್ಟಿದ್ದಾರೆ. ರಾಜ್ಯದಲ್ಲಿ ಅವರಿಗೆ ಸಾವಿರ ಫ್ಯಾನ್ಸ್ ಇರಬಹುದು. ನನಗೆ 100 ಜನ ಫ್ಯಾನ್ಸ್ ಆದ್ರೂ ಇರುತ್ತಾರೆ. ನಿಮ್ಮ ಮಾತಿನಿಂದ ನನಗೆ, ನನ್ನ ಫ್ಯಾನ್ಸ್ಗೂ ನೋವಾಗಿದೆ. ದರ್ಶನ್ ಜೊತೆ ಸಿನಿಮಾ ಮಾಡೋದು ದೇವರ ಇಚ್ಛೆ. ಚಿತ್ರರಂಗ ಅಂದರೆ ಒಂದು ಕುಟುಂಬವಿದ್ದಂತೆ. ನಮ್ಮನ್ನ ನಾವು ಕಾಲ್ ಎಳ್ಕೊಂಡ್ ಕಾಲ ಕಳೆಯುವುದರಲ್ಲಿ ಅರ್ಥ ಇಲ್ಲ. ಬೇರೆ ಭಾಷೆ ಸಿನಿಮಾಗಳಿಗೆ ಕಾಂಪಿಟೇಶನ್ ಮಾಡೋಣ ಎಂದು ಪ್ರೇಮ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ
ತಿರುಪತಿಗೆ ಹೋದ ಉಮಾಪತಿ; ಬಾಲಾಜಿ ದರ್ಶನ ನಂತರ ದರ್ಶನ್ ಸವಾಲಿಗೆ ಉತ್ತರ?
(Director Prem says i am very sad that Darshan Pudong is used)
Published On - 10:49 am, Sun, 18 July 21