‘ಅವರ’ ಮಾತಿಗೆ ಬೆಲೆ ಕೊಟ್ಟು ಬಿಜೆಪಿಗೆ ಬಂದೆ: ಕಮಲ ಬಗ್ಗೆ ಬಾಯ್ಬಿಟ್ಟ ವಿಶ್ವನಾಥ್!
ಮೈಸೂರು: ಅನರ್ಹ ಶಾಸಕ ಹೆಚ್. ವಿಶ್ವನಾಥ್ ಬಿಜೆಪಿ ಕಚೇರಿಯಲ್ಲಿ ಇಂದು ಬೆಳಗ್ಗೆ ತಮ್ಮ ಚೊಚ್ಚಲ ಭಾಷಣ ಮಾಡಿದರು. ಈ ವೇಳೆ ಬಿಜೆಪಿ ಸ್ಥಳಿಯ ಮುಖಂಡರನ್ನ ಹಾಡಿ ಹೊಗಳಿದರು. ಅದೇ ಭರಾಟೆಯಲ್ಲಿ ಅಪರೇಷನ್ ಕಮಲ ಹೇಗಾಯ್ತು, ತನ್ನನ್ನು ಬಜೆಪಿ ಸೇರಿಸಿದ್ದು ಯಾರು ಅಂತಾನೂ ಬಾಯ್ಬಿಟ್ಟರು! ನನ್ನನ್ನು ಪಕ್ಷಕ್ಕೆ ಕರೆದುಕೊಂಡು ಬಂದವರು ವಿ.ಶ್ರೀನಿವಾಸ್ ಪ್ರಸಾದ್. ಪ್ರಸಾದ್ ಮತ್ತು ನನ್ನ ಅವಿನಾಭಾವ ಸಂಬಂಧದಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಕಾರಣವಾಯ್ತು ಎಂಬ ಸಂಗತಿಯನ್ನು ಹೊರಹಾಕಿದರು. ರಾಜ್ಯದಲ್ಲಿ ಇಷ್ಟೇಲ್ಲ ಬೆಳವಣಿಗೆ ನಡೆಯಲು ಕಾರಣ ವಿ. ಶ್ರೀನಿವಾಸಪ್ರಸಾದ್. […]
ಮೈಸೂರು: ಅನರ್ಹ ಶಾಸಕ ಹೆಚ್. ವಿಶ್ವನಾಥ್ ಬಿಜೆಪಿ ಕಚೇರಿಯಲ್ಲಿ ಇಂದು ಬೆಳಗ್ಗೆ ತಮ್ಮ ಚೊಚ್ಚಲ ಭಾಷಣ ಮಾಡಿದರು. ಈ ವೇಳೆ ಬಿಜೆಪಿ ಸ್ಥಳಿಯ ಮುಖಂಡರನ್ನ ಹಾಡಿ ಹೊಗಳಿದರು. ಅದೇ ಭರಾಟೆಯಲ್ಲಿ ಅಪರೇಷನ್ ಕಮಲ ಹೇಗಾಯ್ತು, ತನ್ನನ್ನು ಬಜೆಪಿ ಸೇರಿಸಿದ್ದು ಯಾರು ಅಂತಾನೂ ಬಾಯ್ಬಿಟ್ಟರು!
ನನ್ನನ್ನು ಪಕ್ಷಕ್ಕೆ ಕರೆದುಕೊಂಡು ಬಂದವರು ವಿ.ಶ್ರೀನಿವಾಸ್ ಪ್ರಸಾದ್. ಪ್ರಸಾದ್ ಮತ್ತು ನನ್ನ ಅವಿನಾಭಾವ ಸಂಬಂಧದಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಕಾರಣವಾಯ್ತು ಎಂಬ ಸಂಗತಿಯನ್ನು ಹೊರಹಾಕಿದರು.
ರಾಜ್ಯದಲ್ಲಿ ಇಷ್ಟೇಲ್ಲ ಬೆಳವಣಿಗೆ ನಡೆಯಲು ಕಾರಣ ವಿ. ಶ್ರೀನಿವಾಸಪ್ರಸಾದ್. ಶ್ರೀನಿವಾಸಪ್ರಸಾದ್ ಮೂಲಕ ಬಿ.ಎಸ್. ಯಡಿಯೂರಪ್ಪ ನನಗೆ ಪಕ್ಷಕ್ಕೆ ಆಹ್ವಾನಿಸಿದರು. ಇಬ್ಬರು-ಮೂವರು ಬರ್ತಾರೆ ಹೋಗ್ತಾರೆ. ನೀವು ಜೆಡಿಎಸ್ ಬಿಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತರಲು ನೀವೇ ಮುಂದೆ ನಿಲ್ಲಬೇಕು ಎಂದೂ ಶ್ರೀನಿವಾಸಪ್ರಸಾದ್ ಕೇಳಿದ್ದರು. ಅವತ್ತು ಅವರ ಮನೆಯಲ್ಲೆ ಎಲ್ಲವೂ ತೀರ್ಮಾನವಾಗಿ ಹೋಯಿತು. ಪ್ರಸಾದ್ ಅಲ್ಲದೆ ಬೇರೆ ಯಾರು ಕೇಳಿದ್ದರು ನಾನು ಇದಕ್ಕೆ ಒಪ್ಪುತ್ತಿರಲಿಲ್ಲ ಎಂದು ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಅನರ್ಹ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ.
ಸಾಹಿತಿ, ರಾಜಕೀಯ ಚಿಂತಕರು ಸರಿಯಾಗಿ ವಿಶ್ಲೇಷಿಸಲಿಲ್ಲ: ರಾಜ್ಯದಲ್ಲಾದ ರಾಜಕೀಯ ಪಲ್ಲಟವನ್ನು ಯಾವ ಸಾಹಿತಿ, ರಾಜಕೀಯ ಚಿಂತಕ ಸರಿಯಾಗಿ ವಿಶ್ಲೇಷಿಸಲಿಲ್ಲ. ನಮ್ಮನ್ನು ಬಾಯಿಗೆ ಬಂದಂತೆ ಅನರ್ಹರು, ಅಬ್ಬೆಪಾರಿಗಳು ಅಂತೆಲ್ಲ ಕರೆದರು. ಇದು ನೋವು ತಂದಿತು. ನಾವು ಪಕ್ಷಾಂತರಿಗಳಲ್ಲ. ಇದು ರಾಜಕೀಯ ಧೃವೀಕರಣ ಎಂದು ವಿಶ್ವನಾಥ್ ವಿವರಿಸಿದರು.
ಈಗ ಜನ ನಮ್ಮನ್ನ ಸ್ವೀಕಾರ ಮಾಡುತ್ತಾರೆ, ಮಾಡುವಂತ ಪರಿಸ್ಥಿತಿ ನಿರ್ಮಾಣ ಮಾಡುವಂತಹ ಕೆಲಸ ಜಿಲ್ಲಾ ಬಿಜೆಪಿಗಿದೆ. ಪಕ್ಷಕ್ಕಾಗಿ ತ್ಯಾಗ ಮಾಡಿದವರು ನಮಗಾಗಿಯೂ ಕೆಲಸ ಮಾಡಬೇಕು. ಅಧಿಕಾರಕ್ಕೋಸ್ಕರ ತ್ಯಾಗ ಮಾಡಲಿಲ್ಲ. ರಾಜ್ಯದಲ್ಲಿ ರಾಕ್ಷಸ ರಾಜಕಾರಣ, ಜಾತಿ ರಾಜಕಾರಣ ಹೆಚ್ಚಾದಾಗ ತ್ಯಾಗ ಮಾಡಲೇಬೇಕಾಯಿತು ಎಂದು ಮೈಸೂರಿನಲ್ಲಿ ಹೇಳಿದರು.
ಅರಸು ಜೊತೆ ಮೋದಿ ಅವರನ್ನು ಸಮೀಕರಣ ಮಾಡಿ: ದೇವರಾಜ ಅರಸು ಹೇಗೆ ಜಾತಿ ಇಲ್ಲದ ಜಾತಿಯಿಂದ ಬಂದರೋ.. ಅದೇ ರೀತಿ ಮೋದಿ ಜಾತಿ ಇಲ್ಲದ ಜಾತಿಯಿಂದ ಬಂದಿದ್ದಾರೆ. ದೇವರಾಜ ಅರಸು ಜೊತೆ ಮೋದಿ ಅವರನ್ನು ಸಮೀಕರಣ ಮಾಡಿ ನೋಡಬೇಕು ಎಂದೂ ಹೆಚ್. ವಿಶ್ವನಾಥ್ ತಿಳಿಸಿದರು.
ಇಡೀ ಜಗತ್ತೇ ಅಭಿವೃದ್ಧಿಯ ಕಡೆ ಹೋಗ್ತಿದೆ. ನಾನ್ಯಾಕೆ ಹಿಂದೆ ನಿಂತುಕೊಳ್ಳಲಿ. ಭಾರತವು ಸಹ ಅಭಿವೃದ್ಧಿ ಕಡೆ ಹೋಗ್ತಿದೆ. ನಾನೊಬ್ಬ ಹಿಂದೆ ನಿಂತುಕೊಳ್ಳಲ್ಲ ಎಂದು ವಿಶ್ವನಾಥ್ ಅಭಿಪ್ರಾಯಪಟ್ಟರು.
Published On - 11:30 am, Fri, 15 November 19