‘ಒಂದು ರೂಪಾಯಿಯೂ ಖರ್ಚಿಲ್ಲದೆ ಅವರನ್ನು ಮಂತ್ರಿ ಮಾಡ್ತೀನಿ’
ಬೆಂಗಳೂರು: ರಾಣಿಬೆನ್ನೂರಿನಿಂದ ಆರ್.ಶಂಕರ್ ಸ್ಪರ್ಧೆ ಮಾಡಬೇಕು ಅಂತಾ ಆಸೆ ಪಟ್ಟಿದ್ದು ನಿಜ. ಆದರೆ ಅದರದೇ ಆದ ವಿಶೇಷ ಕಾರಣಗಳಿಂದ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಒಂದು ರೂಪಾಯಿ ಖರ್ಚು ಇಲ್ಲದೆ ಅವರನ್ನು ಎಂಎಲ್ಸಿ ಮಾಡಿ ಮಂತ್ರಿ ಮಾಡ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಆರ್. ಶಂಕರ್ ಹಾಗು ಅವರ ಪತ್ನಿ ಜೊತೆ ಮಾತನಾಡಿದ್ದೇನೆ. ಸಂತೋಷದಿಂದ ಯಾರು ಕಣದಲ್ಲಿ ಇಳಿದ್ರೂ ಬೆಂಬಲಿಸಿ, ಅವರ ಪರ ಕೆಲಸ ಮಾಡುವುದಾಗಿ ಆರ್.ಶಂಕರ್ ಮತ್ತು ಅವರ ಪತ್ನಿ ತಿಳಿಸಿದ್ದಾರೆ. ಎಂಎಲ್ಸಿ ಮಾಡಿ ಅವರಿಗೆ ಸಚಿವ […]
ಬೆಂಗಳೂರು: ರಾಣಿಬೆನ್ನೂರಿನಿಂದ ಆರ್.ಶಂಕರ್ ಸ್ಪರ್ಧೆ ಮಾಡಬೇಕು ಅಂತಾ ಆಸೆ ಪಟ್ಟಿದ್ದು ನಿಜ. ಆದರೆ ಅದರದೇ ಆದ ವಿಶೇಷ ಕಾರಣಗಳಿಂದ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಒಂದು ರೂಪಾಯಿ ಖರ್ಚು ಇಲ್ಲದೆ ಅವರನ್ನು ಎಂಎಲ್ಸಿ ಮಾಡಿ ಮಂತ್ರಿ ಮಾಡ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಆರ್. ಶಂಕರ್ ಹಾಗು ಅವರ ಪತ್ನಿ ಜೊತೆ ಮಾತನಾಡಿದ್ದೇನೆ. ಸಂತೋಷದಿಂದ ಯಾರು ಕಣದಲ್ಲಿ ಇಳಿದ್ರೂ ಬೆಂಬಲಿಸಿ, ಅವರ ಪರ ಕೆಲಸ ಮಾಡುವುದಾಗಿ ಆರ್.ಶಂಕರ್ ಮತ್ತು ಅವರ ಪತ್ನಿ ತಿಳಿಸಿದ್ದಾರೆ. ಎಂಎಲ್ಸಿ ಮಾಡಿ ಅವರಿಗೆ ಸಚಿವ ಸ್ಥಾನ ನೀಡೋ ಜವಾಬ್ದಾರಿ ನನ್ನದು ಅಂತ ಭರವಸೆ ಕೊಟ್ಟಿದ್ದೇನೆ.
ನಾನು ಖುರ್ಚಿಗೆ ಅಂಟಿಕೊಂಡವನಲ್ಲ: ಇದೇ ವೇಳೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ನನ್ನ ಜೀವನದಲ್ಲಿ ನಾನು ಯಾವತ್ತೂ ಕುರ್ಚಿಗೆ ಅಂಟಿಕೊಂಡವನಲ್ಲ. ಯಾರಿಗೆ ಆಗಲಿ, ನಾನು ಏನು ಭರವಸೆ ಕೊಡ್ತಿನೋ, ಆ ಭರವಸೆಯನ್ನು ನಾನು ಈಡೇರಿಸುತ್ತೇನೆ. ಅದರಂತೆ ಆರ್.ಶಂಕರ್ಗೆ ಕೊಟ್ಟಿರೋ ಬೇಡಿಕೆ ಕೂಡ ಈಡೇರಿಸುತ್ತೇನೆ ಎಂದರು.