ಅನರ್ಹ ಶಾಸಕರು ಆಪರೇಷನ್ ಕಮಲ ಸಂತ್ರಸ್ತರು ಎಂದ ಹೆಚ್ಡಿ ಕುಮಾರಸ್ವಾಮಿ
ರಾಜ್ಯಕ್ಕೆ ಬರಬೇಕಿರುವ ನೆರೆ ಪರಿಹಾರ ಹೇಳಲು ಸಿಎಂಗೆ ಪುರುಸೊತ್ತಿಲ್ಲ. ಆದ್ರೆ ಅನರ್ಹ ಶಾಸಕರ ಭವಿಷ್ಯ ಉಳಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಹೋಗಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಭಾವ ಬಳಸಿಕೊಂಡು ಆಪರೇಷನ್ ಕಮಲ ಮಾಡಿದ್ದಾರೆ. ಈಗ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್ ಕಮಲದ ಸಂತ್ರಸ್ತರನ್ನು ರಕ್ಷಿಸಲು ಸಿಎಂ ಬಿಎಸ್ವೈ ಯತ್ನಿಸುತ್ತಿದ್ದಾರೆ. ಇನ್ನು ದೆಹಲಿಗೆ ತೆರಳಲು ಸಿಎಂಗೆ ಸಾಕಷ್ಟು ಸಮಯಾವಕಾಶವಿದೆ. ಆದ್ರೆ ನೆರೆ ಪರಿಹಾರ ಕೇಳಲು ಸಮಯ ಸಿಗಲಿಲ್ಲ ಎಂದು ಟ್ಟಿಟ್ಟರ್ನಲ್ಲಿ […]
ರಾಜ್ಯಕ್ಕೆ ಬರಬೇಕಿರುವ ನೆರೆ ಪರಿಹಾರ ಹೇಳಲು ಸಿಎಂಗೆ ಪುರುಸೊತ್ತಿಲ್ಲ. ಆದ್ರೆ ಅನರ್ಹ ಶಾಸಕರ ಭವಿಷ್ಯ ಉಳಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಹೋಗಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಭಾವ ಬಳಸಿಕೊಂಡು ಆಪರೇಷನ್ ಕಮಲ ಮಾಡಿದ್ದಾರೆ. ಈಗ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್ ಕಮಲದ ಸಂತ್ರಸ್ತರನ್ನು ರಕ್ಷಿಸಲು ಸಿಎಂ ಬಿಎಸ್ವೈ ಯತ್ನಿಸುತ್ತಿದ್ದಾರೆ. ಇನ್ನು ದೆಹಲಿಗೆ ತೆರಳಲು ಸಿಎಂಗೆ ಸಾಕಷ್ಟು ಸಮಯಾವಕಾಶವಿದೆ. ಆದ್ರೆ ನೆರೆ ಪರಿಹಾರ ಕೇಳಲು ಸಮಯ ಸಿಗಲಿಲ್ಲ ಎಂದು ಟ್ಟಿಟ್ಟರ್ನಲ್ಲಿ ಕುಮಾರಸ್ವಾಮಿ ಟೀಕಿಸಿದ್ದಾರೆ.
Published On - 1:15 pm, Sun, 22 September 19